ಅಲ್ಪ ಕಲ್ಪನೆ ಅಲ್ಪ ಸತ್ಯ (ಭಾಗ 2)

( ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ -ಸರಣಿಯ 4ನೇ ಲೇಖನ)


 ಭಾಗ 1ರ ಲಿಂಕ್

https://urainpoems.blogspot.com/2024/09/1.html



ಅಲ್ಪ ಸಮಯದ ನಂತರ ಡಾ. ನಾಗೇಶ ತಮ್ಮ ಕೊಠಡಿಗೆ ವಾಪಸ್ಸಾದರು. ಆಗ ದೇಶಮುಖ್ ಸರ್, ಸುರೇಶ ಅಲ್ಲ ಎನ್ನುವ ಉತ್ತರವೇ ಬರಲಿ ಎಂದು ಬಯಸುತ್ತಾ, *ಸುರೇಶ ಅಲ್ಲ ತಾನೇ ? ಎಂದು ಡಾ ನಾಗೇಶಗೆ ಕೇಳಿದರು*. 


*ಆಗ ಡಾ ನಾಗೇಶ, ಸುರೇಶನೇ ಬಂದಿದ್ದು, ಎಂದು ಹೇಳುತ್ತಿದ್ದರು.... ಅಷ್ಟರಲ್ಲಿಯೇ* ಅವರ ಫೋನ್ ರಿಂಗಣಿಸಿತು. ಇದನ್ನು ಕೇಳಿ ಚಿಂತಾಕ್ರಾಂತರಾದ ದೇಶಮುಖ ಸರ್ ಗಡಿಬಿಡಿಯಿಂದ ಯಾವ ವಾರ್ಡ್ ನಲ್ಲಿ ಇದ್ದಾರೆ ನಾನು ನೋಡುತ್ತೇನೆ ಎಂದು ಎದ್ದು ರೂಮ್ ನ ಹೊರಗೆ ಹೋಗಲು ಅಣಿಯಾದರು. ಆಗ ಡಾ. ನಾಗೇಶ ಫೋನ್ ನಲ್ಲಿ ಮಾತನಾಡುತ್ತಲೇ ಕುಳಿತುಕೊಳ್ಳಿ ಎನ್ನುವಂತೆ ಕೈ ಸನ್ನೆ ಮಾಡಿದರು. 


*ಆಗ ದೇಶಮುಖ್ ಸರ್ ಪೇಷಂಟ್ ಸುರೇಶ ಆಗಿರಬಾರದು ಎಂದು ನಾನು ದೇವರಿಗೆ ಬೇಡಿಕೊಂಡದ್ದು ವ್ಯರ್ಥವಾಯಿತು, ಎಂದು ಹಳಹಳಿಸಿದರು*.


ಫೋನ್ ನಲ್ಲಿಯ ಮಾತುಕತೆ ಮುಗಿದ ನಂತರ ಡಾ. ನಾಗೇಶ, ದೇಶಮುಖ್ ಸರ್ ಪರಿಸ್ಥಿತಿ ನೋಡಿ, "ಟೆನ್ಷನ್ ಮಾಡಿಕೊಳ್ಳಬೇಡಿ ಸರ್, ನೀವು ಅಂದುಕೊಂಡಂತೆ ಏನು ಆಗಿಲ್ಲ ಸರ್. ಬಂದಿದ್ದು ಸುರೇಶ ಏನೋ ನಿಜ, ಆದರೆ ಸುರೇಶನಿಗೆ ಏನು ಆಗಿರಲಿಲ್ಲ. *ಸುರೇಶನ ಮನೆಯ ಹಿಂದಿನ ಹುಡುಗಿಗೆ ಹಾವು ಕಚ್ಚಿತ್ತು. ಆಕೆಗೆ ಅತ್ಯಲ್ಪ ಸಮಯದಲ್ಲಿ ಚಿಕಿತ್ಸೆ ದೊರೆತಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಾಳೆ ಎಂದು, ಸುರೇಶ ಆಕೆಯನ್ನು ತನ್ನ ಬೈಕ್ ಮೇಲೆ ಕೂಡಿಸಿಕೊಂಡು ಅತಿ ವೇಗವಾಗಿ ಬಂದಿದ್ದ", ಎಂದು ಹೇಳಿದರು.* 


ಆಗ ಥ್ಯಾಂಕ್ಸ್ ಗಾಡ್, ಎಂದು ಹೇಳಿ ದೇಶಮುಖ್ ಸರ್ ನಿಟ್ಟುಸಿರು ಬಿಟ್ಟರು. ಮತ್ತೆ ಸುರೇಶ ಎಲ್ಲಿದ್ದಾನೆ ಎಂದು ಕೇಳಿದರು. 


ಹುಡುಗಿಗೆ ಈಗ ಯಾವುದೇ ಅಪಾಯವಿಲ್ಲ ಎಂದು ನಾನು ಹೇಳಿದ ನಂತರ ಅವರ ಕುಟುಂಬದವರು ಬರುತ್ತಿದ್ದಾರೆ. ನನಗೆ ಡ್ಯೂಟಿಗೆ ಬಹಳ ಸಮಯವಾಗಿದೆ, ಎಂದ.

ದೇಶಮುಖ್ ಸರ್ ಕೆಳಗಡೆ ನನ್ನ ಕ್ಯಾಬಿನ್ ನಲ್ಲಿ ಕುಳಿತಿದ್ದಾರೆ. ಬಂದು ಬೇಟಿಯಾಗು ಎಂದೆ. ಆಗ *ಕಚೇರಿಯಲ್ಲಿ ಅನುಮತಿ ಕೇಳಿ, ಸಿಕ್ಕರೆ ಬರುತ್ತೇನೆ. ಈಕೆಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಗಡಿಬಿಡಿಯಿಂದ ಹೋದನು, ಎಂದು ಡಾ. ನಾಗೇಶ ಹೇಳಿದರು*. 


ಕೆಲಸಕ್ಕೆ ಹೋದರೆ ಹೋಗಲಿ, ಸಧ್ಯ ಆತನಿಗೆ ಏನು ಆಗಲಿಲ್ಲವಲ್ಲ, ಎಂದು ಸಮಾಧಾನಪಟ್ಟುಕೊಂಡರು

ದೇಶಮುಖ್ ಸರ್. ಮತ್ತೆ ಅವರು ಪುನಃ ಹಿಂದಿನ ವಿಷಯಕ್ಕೆ ಮರಳಿದರು. *ಸುರೇಶ ಆ ರೀತಿ ಹತಾಶೆ ರೀತಿಯ, ನನ್ನ ಜೀವನ ಕಿರಿದಾಗುತ್ತಿದೆ. ಜಗತ್ತಿನ ಬಹು ಆಯ್ಕೆಗಳು ಮುಚ್ಚಿವೆ. ಒಂದೇ ಆಯ್ಕೆ ಉಳಿದಿದೆ ಎಂದು ಮೆಸೇಜ್ ಮಾಡಲು ಕಾರಣವೇನು ? ಎಂದು ಕೇಳಿದರು*.


ಆಗ ಡಾ. ನಾಗೇಶ, ಆ ಮೆಸೇಜ್ ಓದಿದ ನಂತರ ನಿಮಗೆ ಆದಂತೆ ನನಗೂ ದುಗುಡವಾಗಿತ್ತು. ಅದಕ್ಕಾಗಿಯೇ, ಬಿಡುವು ಮಾಡಿಕೊಂಡು ಆತನ ಮನೆಗೆ ನಾನೇ ಹೋಗಿ ಈ ಬಗ್ಗೆ ಕೇಳಿದೆ.


 ಆಗ ಆತ ಹೇಳಿದ್ದೇನೆಂದರೆ, ಇತ್ತೀಚೆಗೆ ಕುಟುಂಬಸ್ಥರು, ಸಮಾಜದವರು, ಹಿರಿಯರು ಇರುವ *ಸಮಾರಂಭದಲ್ಲಿ ಪ್ರತಿಜ್ಞೆ ರೂಪದಲ್ಲಿ ಎರಡು ದಶಕಗಳಿಂದ ನನ್ನ ಅಂತರಂಗದಲ್ಲಿದ್ದ ವಿಷಯವನ್ನು ಬಹಿರಂಗವಾಗಿ ಘೋಷಣೆ ಮಾಡಿದ್ದೇನೆ. ಆ ಘೋಷಣೆಯಿಂದ, ಮೊದಲೇ ಕಿರಿದಾದ ನನ್ನ ಜೀವನ ಇನ್ನೂ ಕಿರಿದಾಗುತ್ತಿರುವಂತೆ ಜೀವನದ ಅನೇಕ ಆಯ್ಕೆಗಳು ಮುಚ್ಚಲ್ಪಟ್ಟು ಕೇವಲ ಒಂದೇ ಆಯ್ಕೆ ಉಳಿದಿರುವಂತೆ ಅನಿಸುತ್ತಿದೆ*, ಎಂದ.


ಅಂತಹ ಘೋಷಣೆ ಯಾಕೆ ಮಾಡಿದ ಎಂದರು, ದೇಶಮುಖ್ ಸರ್. ನಾನು ಸಹ ಇದನ್ನೆ ಕೇಳಿದಾಗ ಜಗತ್ತಿನಲ್ಲಿರುವ ಈಗಿನ ಸಮಸ್ಯೆಗಳನ್ನು ನೋಡಿ ಘೋಷಣೆ ಮಾಡಿದೆ ಅಂದ.


*ಈಗ ತನ್ನ ಸಾಮರ್ಥ್ಯ‌ ನೋಡಿಕೊಳ್ಳದೆ ಏನೇನೋ ಘೋಷಣೆ ಮಾಡಿ ಜೀವನೋತ್ಸಾಹ ಕಳೆದುಕೊಂಡು ಕುಗ್ಗಿ ಹೋಗಿದ್ದಾನೆ. ಅಂದು ಎರಡು ದಶಕಗಳ ಹಿಂದೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಏರುಗತಿಯಲ್ಲಿದ್ದ ಆತನ ಜೀವನವೇ ಕೆಳಮುಖವಾಯಿತು. ಇವುಗಳನ್ನು ಸ್ವಯಂಕೃತ ಅಪರಾಧವೆನ್ನಬೇಕೋ ? ಆತನ ಜೀವನದ ದುರಾದೃಷ್ಟ ಎನ್ನಬೇಕೋ ಒಂದು ತಿಳಿಯುತ್ತಿಲ್ಲ*, ಎಂದು ದೇಶಮುಖ್ ಸರ್ ದುಃಖಿಸಿದರು. 


ಆಗ ಡಾ.ನಾಗೇಶ, ಆತನ ಜೀವನದ ಏಳುಬೀಳು ಏನೇ ಇರಬಹುದು ಸರ್, ಆದರೆ ಅಂದು ಪಿಯುಸಿ ಯಲ್ಲಿ ನಡೆದ ಘಟನೆ ಕುರಿತು ಆತನಲ್ಲಿ ಅಪರಾಧಿ ಭಾವವಾಗಲಿ ಅಥವಾ ತನ್ನ ಜೀವನದ ದುರಾದೃಷ್ಟ ಎನ್ನುವ ಭಾವವಾಗಲಿ ಕಿಂಚಿತ್ತು ಇಲ್ಲ. ಇತ್ತೀಚೆಗೆ ಆ ಸಂತರು ಶಿವೈಕ್ಯರಾದಾಗ ನನಗೆ ವ್ಹಾಟ್ಸಾಪ್ ನಲ್ಲಿ ಅವರಿಗೆ ಆತ ಶ್ರದ್ಧಾಂಜಲಿ ಸಲ್ಲಿಸಿದ ಕವನವನ್ನು ಕಳುಹಿಸಿದ್ದ, ಎಂದು ಹೇಳಿ ತಮ್ಮ ಮೊಬೈಲ್ ನಲ್ಲಿ ಇದ್ದ ಕವನವನ್ನು ಓದಲು ದೇಶಮುಖ್ ಸರ್ ಗೆ ನೀಡಿದರು.


ದೇಶಮುಖ್ ಸರ್ ಮೊಬೈಲ್ ಪಡೆದು ಅದನ್ನು ಓದಲು ಆರಂಭಿಸಿದರು... ..


*ಶ್ರದ್ಧಾಂಜಲಿ ಪರಮ ಬೈರಾಗಿಗೆ*


ಸರಳತೆಗೆ ಅನ್ವರ್ಥ ನಿಮ್ಮ ಬದುಕು

ಎಲ್ಲೆಲ್ಲೂ, "ದುರ್ಲಭ ವೈರಾಗ್ಯ"ದ ಇಣುಕು


ಜೆಬಿಲ್ಲ ನಿಮ್ಮ ಬಟ್ಟೆಗೆ ಆದರೂ ಜ್ಞಾನದ ಕುಬೇರ

ಜಗತ್ತಿನ ಯಾರಿಗೂ, ಯಾವುದಕ್ಕೂ ಅಂಟಿಕೊಳ್ಳದ ಕುಚೇಲ


ನೋಡುಗರಿಗೆ ನೀವು ತೆಳ್ಳನೆಯ ಶರೀರ

ಆದರೆ ಅನುಭವಕ್ಕೆ ನಿಲುಕದ ಶಾರೀರ


ನಿಮ್ಮದು ಸಹಜತೆಯ ದೇಶಿ ಭಾಷೆಯ ಸೋಗಡು

ಆದರೂ ಕೇಳುಗನ ಅಂತರಾಳದಲ್ಲಿ ಹೊಮ್ಮಿಸುವುದು ಗುಡುಗು


ನಿಮ್ಮಿಂದ ಪ್ರಕೃತಿ ಸಹ ಜೀವ ಪಡೆಯುವುದು

ಜೀವ ಪಡೆದು ಅತ್ಯುನ್ನತ ಜ್ಞಾನ ನೀಡುವುದು


ನಿಮ್ಮ ನುಡಿ ಜಗತ್ತಿನ ದೃಷ್ಟಿಕೋನವನ್ನೆ ಬದಲಾಯಿಸುವುದು

ದ್ವೇಷ ಅಸೂಯೆ ಅಳಿಸಿ ಪ್ರೀತಿ ಪ್ರೇಮವ ಬೆಳೆಸುವುದು


 ಕೇವಲ ನಿಮ್ಮ ಉಪಸ್ಥಿತಿ ಸಾಕು ಅನುಗ್ರಹಕ್ಕೆ

ತುಟಿ ಬಿಚ್ಚಿದರೆ ಸಾಕು ಎಲ್ಲರ ಮನಸ್ಸಾಗುವುದು ನಿಮ್ಮ ವಶಕ್ಕೆ


ಬೇಕಾದರೆ ಇರಲಿ ಸಹಸ್ರ ಸಹಸ್ರ ಜನವು

ನೀವಿದ್ದರೆ ಚಿಕ್ಕ ಸೂಜಿ ಬಿದ್ದರೂ ದೊಡ್ಡ ದೊಡ್ಡ ಅಬ್ಬರವು


 ವೈರಾಗ್ಯದ ತಪಸ್ಸು ನಿಮ್ಮ ಪೂರ್ಣ ಜೀವನ

ನಿಮ್ಮ ಸ್ಮರಿಸಿದರೆ ಸಾಕು ನಮ್ಮದು ಉಜ್ಜೀವನ 


ದಿಲ್ಲಿಯಿಂದ ಅರಸಿ ಬಂದೀತು ವಿಜಯಪುರಕ್ಕೆ ಪದ್ಮ ಪುರಸ್ಕಾರ 

ಬೇಡ, ಸಾಕೆಂದಿರಿ ಕರುನಾಡ ಜನಪ್ರೀತಿ ಪುರಸ್ಕಾರ 


ಆತ್ಮ ತತ್ವದಲ್ಲಿ ಏಕಾದಶ ಇಂದ್ರಿಯಗಳ ಇರಿಸಿದ ನೀವು

 ನಮಗೆ ವಿದಾಯ ಹೇಳಿದೀರಲ್ಲ ಏಕಾದಶಿಯಂದೆ

 

ಈ ಜೀವನದಲ್ಲಿ ಮರೆಯಲಾಗದು ನಿಮ್ಮನ್ನು ಏಂದೆಂದು

ನಿಮ್ಮಿಂದ ಬೆಳಗಿದ ಆಧ್ಯಾತ್ಮ ದೀಪ ಇದು, ಆರದು ಏಂದೆಂದು


*Su..* 03/01/2022

****". ***"""" ******


ಕವಿತೆಯನ್ನು ಓದಿದ ನಂತರ ದೇಶಮುಖ್ ಸರ್ ಭಾವುಕರಾದರು. ಅವರಲ್ಲಿ ಒಟ್ಟಿಗೆ ಅನೇಕ ಭಾವಗಳು ಮೂಡಿದವು. ಏನೆಂದು ಪ್ರತಿಕ್ರಿಯಿಸಬೇಕು ಎನ್ನುವುದು ತಿಳಿಯಲಿಲ್ಲ. *ಮೊದಲನೆಯದಾಗಿ ಕವಿತೆಯಿಂದ ಹಿಂದೆ ಸಂತರನ್ನು ತಮ್ಮೂರಿನಲ್ಲಿ ನಡೆದ ಪ್ರವಚನದಲ್ಲಿ ಸಾಕ್ಷಾತ್ ಸ್ವತಃ ಕಂಡಂತಹ ನೆನಪುಗಳು. ಅವರ ವ್ಯಕ್ತಿತ್ವ, ಅವರ ದೇಶಿ ಸೊಗಡಿನ ಅನುಭಾವದ ಮಾತುಗಳು, ಆಗ ವಾತಾವರಣದಲ್ಲಿ ಮೂಡುತ್ತಿದ್ದ ಶಾಂತಿ, ಅಂತರಂಗದಲ್ಲಿ ಮೂಡುತ್ತಿದ್ದ ಸಮಾಧಾನ ಎಲ್ಲವೂ ಮತ್ತೆ ಘಟನೆ ರೂಪದಲ್ಲಿ ಸ್ಮೃತಿಯಲ್ಲಿ ಮರುಕಳಿಸಿತು*.


ಎರಡನೆಯದಾಗಿ ಏರುಗತಿಯಲ್ಲಿದ್ದ ಜೀವನ ಹಿಮ್ಮುಖವಾಗಿ ಪ್ರಪಾತಕ್ಕೆ ಕುಸಿದರೂ, ಅದರಿಂದ ಗೆಳೆಯ ವೃಂದದಲ್ಲಿ, ಕಾಲೇಜಿನಲ್ಲಿ, ಸಮಾಜದಲ್ಲಿ ಅವಮಾನ ಅಪಮಾನವಾದರೂ ಆ ಘಟನೆ ಕುರಿತು *ಸುರೇಶನಲ್ಲಿ ಸ್ವಲ್ಪವೂ ದುಃಖ, ನೋವಿಲ್ಲ. ಇದಕ್ಕೆ ಪ್ರತಿಯಾಗಿ ಅವರ ಬಗ್ಗೆ ಇನ್ನೂ ಅದೇ ಅಭಿಮಾನವಿದೆಯಲ್ಲ, ಎಂದು ಮೂಕವಿಸ್ಮಿತರಾದರು*.


 ಮತ್ತೆ ಮುಂದುವರಿದು ಇಷ್ಟೊಂದು ಅಭಿಮಾನ ಇದೆ ಎಂದರೆ *ಆ ಘಟನೆಯಿಂದ ಈತನಿಗೆ ಏನಾದರೂ ಒಳಿತು ಆಗಿದೆಯೇ ? ಎಂದು ಸಂಶಯಪಟ್ಟರು‌.*


ಜೀವನ ಕಪ್ಪು ಚುಕ್ಕೆಯಾಗಿ ಉಳಿಯುವಂತಹ ದುರಂತದ ರೀತಿ ಘಟನೆ ಘಟಿಸಿದರು ಆತ ಮಾನಸಿಕವಾಗಿ ಕುಸಿದಿಲ್ಲ ಎಂದರೆ ಈಗ ಮಾಡಿರುವ *ಘೋಷಣೆ ನಂತರ ಹೇಗೆ ಕುಗ್ಗುತ್ತಾನೆ ?* ಮೊದಲು ಆತ ಯಾವ ರೀತಿಯ ಘೋಷಣೆ ಮಾಡಿದ್ದಾನೆ, ಅದನ್ನು ತಿಳಿಯಬೇಕು, ಎನ್ನುವ ಕುತೂಹಲ ದೇಶಮುಖ್ ಸರ್ ಅವರಲ್ಲಿ ಮೂಡಿತು.....


(ಮುಂದುವರಿಯುವುದು)


✍️ URAIN NAMAH 

(ಈ ಪದ ಸತ್ಯ ಯುಗದ ಮುನ್ನುಡಿ 

ಈ ಪದ ಯುಗ ಪರಿವರ್ತನೆಗೆ ನಾಂದಿ)


(ಸೂರ್ಯ ನಾರಾಯಣ ಜಿ. ಚಿಮ್ಮನಚೋಡಕರ್)

Comments

Popular posts from this blog

ಅಂಧ ಹೇಳವರು