ಅಲ್ಪ ಕಲ್ಪನೆ ಅಲ್ಪ ಸತ್ಯ - ಭಾಗ 3 (ಜಗತ್ತಿನ ಸಮಸ್ಯೆಗಳು)
ಭಾಗ 2ರ ಲಿಂಕ್👇
https://urainpoems.blogspot.com/2024/09/2-4-1-httpsurainpoems.html
ದೇಶಮುಖ್ ಸರ್ ಡಾ. ನಾಗೇಶ ಮೊಬೈಲ್ ನಲ್ಲಿದ್ದ ಸುರೇಶನು ಬರೆದ ಶ್ರದ್ಧಾಂಜಲಿ ಕವಿತೆ ಓದಿ ಅನೇಕ ಯೋಚನೆಗಳಲ್ಲಿ ಮುಳುಗಿರುವಾಗಲೇ, *ಆ ಮೋಬೈಲ್ ರಿಂಗ್ ಆಯಿತು ಹಾಗೂ ಅದರಲ್ಲಿ R.Chakravarti ಎನ್ನುವ ಹೆಸರು ಇರುವುದನ್ನು ನೋಡಿ ಮೊಬೈಲ್ ನ್ನು ಡಾ. ನಾಗೇಶ ಗೆ ನೀಡಿದರು. ನಾಗೇಶ ಮಾತನಾಡುವುದನ್ನು ಮುಗಿಸಿದ ನಂತರ, ಮಾತನಾಡಿದ್ದು ನಮ್ಮ ರಾಜೇಶ ಅಲ್ಲವೇನು ?* ಎಂದು ಊಹೆ ಮಾಡುತ್ತಾ ದೇಶಮುಖ್ ಸರ್ ಕೇಳಿದರು. ಆಗ ಹೌದು ರಾಜೇಶ್ ಮಾತನಾಡಿದ್ದ. ಒಂದು ಗಂಭೀರ ವಿಷಯದ ಬಗ್ಗೆ ಮಾತನಾಡಲು ಬರುತ್ತೇನೆ ಎಂದು ಹೇಳಿದ್ದಾನೆ, ಎಂದರು.
ಡಾ. ನಾಗೇಶ, ಸುರೇಶ, ರಾಜೇಶ ಚಕ್ರವರ್ತಿ ಒಂದೇ ಶಾಲೆ, ಒಂದೇ ಕಾಲೇಜಿನಲ್ಲಿ ಪಿಯುಸಿ ವರೆಗೆ ಕಲಿತವರು. *ನಾಗೇಶ, ಸುರೇಶ ವಿಜ್ಞಾನ ವಿಭಾಗದಲ್ಲಿ ಇದ್ದರೆ, ರಾಜೇಶ ಕಲಾ ವಿಭಾಗದಲ್ಲಿದ್ದ. ಬೇರೆ ಬೇರೆ ವಿಭಾಗವಿದ್ದರೂ ಡಾ. ನಾಗೇಶ, ರಾಜೇಶ ಒಂದು ಸರ್ಕಾರೇತರ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು*. ಹೀಗಾಗಿ ಅವರಲ್ಲಿ ಆಪ್ತತೆ, ಪರಸ್ಪರ ಗೌರವ ಇತ್ತು.
ಸ್ವಲ್ಪ ಸಮಯದಲ್ಲಿಯೇ, ನಮಸ್ಕಾರ ನಾಗೇಶ ಎಂದು ರಾಜೇಶ ಒಳ ಬಂದರು. ಅಲ್ಲಿಯೇ ದೇಶಮುಖ ಸರ್ ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನಮಸ್ಕಾರ ಸರ್, ಏನು ನೀವು ಇಲ್ಲಿ !!! ? ಎಂದು ಕೇಳಿದರು. ನನಗೂ ಆರಾಮ ಇರಲಿಲ್ಲ. ಹಾಗೆಯೇ ನಮ್ಮ ವಿದ್ಯಾರ್ಥಿಯನ್ನು ಮಾತನಾಡಿಸಿದಂತೆ ಆಗುತ್ತದೆ, ಎಂದು ಇಲ್ಲಿಗೆ ಬಂದೆ ಎಂದು ದೇಶಮುಖ್ ಸರ್ ಹೇಳಿ, ಮುಂದುವರಿದು..
ಏನು ರಾಜೇಶ್, ನಿನ್ನ ಹೆಸರು *ರಾಜೇಶ ಚಕ್ರವರ್ತಿ ಬದಲಿಗೆ ಹಿಂದುತ್ವ ಚಕ್ರವರ್ತಿ ಎಂದು ಈ ಊರಿನ ಸಾಮಾಜಿಕ ಜಾಲತಾಣದಲ್ಲಿ ಹೆಸರುವಾಸಿಯಾಗುತ್ತಿದೆ ? ಎಂದು ದೇಶಮುಖ್ ಸರ್ ಆಶ್ಚರ್ಯ, ಸಂತೋಷ ಎರಡು ಒಮ್ಮೆಗೆ ವ್ಯಕ್ತಪಡಿಸಿದರು.* ಆಗ ರಾಜೇಶ ನಗುತ್ತಾ, ಸಂಕೋಚಪಡುತ್ತಾ ಅದರಲ್ಲಿ ನನ್ನದು ಏನಿಲ್ಲ ಸರ್. ಎಲ್ಲಾ ನಮ್ಮ ಯುವಕರ ನನ್ನ ಮೇಲೆ ಇಟ್ಟಿರುವ ಅಭಿಮಾನ ಎಂದು ಹೇಳಿ, ಈಗ ಅದರ ಬಗ್ಗೆ ಮಾತನಾಡಲು ಬಂದಿದ್ದೇನೆ ಸರ್ ಎಂದು ಗಂಭೀರವಾಗಿ, ಮಾತು ಮುಂದುವರಿಸಿದ..
ಇತ್ತೀಚಿನ ಜಗತ್ತಿನ ಆಗುಹೋಗುಗಳು ನಮ್ಮ ಊರಿನ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿವೆ, ಕೆಟ್ಟ ಘಟನೆಗಳು ಆಗುತ್ತಿವೆ. ಶಾಂತಿ ಅಶಾಂತಿಗೆ ಕಾರಣವಾಗುತ್ತಿದೆ. ಶಾಂತಿ ಮತ ವಿಶ್ವಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. *ಇದರಿಂದ ವಿಶ್ವ ದೊಡ್ಡ ಅಪಾಯದಲ್ಲಿದೆ. ಆದ್ದರಿಂದ ನಮ್ಮ ರಕ್ಷಣೆಗೆ ನಾವು ಮಾಡಬೇಕಾಗಿರುವ ಕ್ರಮಗಳ ಬಗ್ಗೆ ಚಿಂತಿಸಲು ಸಭೆ ಕರೆದಿದ್ದೇನೆ.* ಅದರ ನಿಮಿತ್ತ ನಾಗೇಶ ಅವರಿಗೆ ಆಹ್ವಾನಿಸಲು ಬಂದಿದ್ದೇನೆ, ಎಂದರು.
ಆಗ ದೇಶಮುಖ್ ಸರ್ ಬಹಳ ವಿಷಾದದಿಂದ, ಇಂದು ಜಗತ್ತಿನ ಸಮಸ್ಯೆಗಳ ಕುರಿತು ಚಿಂತಿಸಲು ಯಾರು ಸಿದ್ಧರಿದ್ದಾರೆ ರಾಜೇಶ ?
ಜಗತ್ತಿನ ಸಮಸ್ಯೆಗಳ ಬಗ್ಗೆ ಯಾರಿಗೆ ಆಸಕ್ತಿಯಿದೆ ?
ಇದಕ್ಕೇಲ್ಲಾ ಯಾರಲ್ಲಿ ಸಮಯವಿದೆ ?
ಎಲ್ಲರಿಗೂ ತಮ್ಮ ತಮ್ಮ ವೈಯಕ್ತಿಕ ಜೀವನದ ಸುಖ ದುಖಃಗಳೇ ಮುಖ್ಯ.
ತಮ್ಮ ಜೀವನ ಉತ್ತಮ ಆಗಿರಬೇಕು, ಇಷ್ಟೆ ಎಲ್ಲರೂ ಬಯಸುವುದು. ಎಲ್ಲರಿಗೂ ಜಗತ್ತಿನಿಂದ ಸುಖ ಸಂತೋಷ ಆನಂದ ಮಾತ್ರ ಬೇಕು. ಜಗತ್ತಿನ ಸಮಸ್ಯೆಗಳು ಅದಕ್ಕೆ ಪರಿಹಾರ ಯಾರಿಗೂ ಬೇಡ.
*ಅಂದ ಹಾಗೆ, ಒಂದು ವೇಳೆ ಯಾವುದೇ ರಾಜಕಾರಣಿ, ಯಾವುದೇ ಚಿತ್ರ ನಟನ/ನಟಿಯ ಅಥವಾ ಯಾವುದೇ ವ್ಯಕ್ತಿಯ ರಾಸಲೀಲೆಯ ವಿಷಯ ಎಂದ ಕೂಡಲೇ ಎಲ್ಲರ ಕಣ್ಣು ಕಿವಿ ಎರಡು ಅಗಲವಾಗುತ್ತವೆ. ಯಾವುದೋ ರಸವತ್ತಾದ ಪ್ರಣಯ ಕಥೆಗಳು, ರಹಸ್ಯಾತ್ಮಕ ನಿಗೂಢ ವೈಯಕ್ತಿಕ ಜೀವನದ ಆಂತರಿಕ ವಿಷಯಗಳು ಎಂದರೆ ಎಲ್ಲಾ ಜನರ ಆಸಕ್ತಿಯನ್ನು ಕೆರಳಿಸುತ್ತವೆ.* ನೋಣಗಳ ಎದುರಿಗೆ ಎಷ್ಟೇ ಸುಂದರ, ಸುಗಂಧಭರಿತ ಹೂ ಇದ್ದರೂ, ಅವು ಹೋಲಸಿನ ಮೇಲೆಯೇ ಹೋಗಿ ಕುಳಿತುಕೊಳ್ಳುವಂತೆ ನಮ್ಮಲ್ಲಿಯೂ ಹಲವರ ಪರಿಸ್ಥಿತಿ ಹಾಗೆಯೇ ಆಗಿದೆ. ಇಂತಹ ವಿಷಯಗಳಲ್ಲಿ ಯಾರಿಗೆ ಆಸಕ್ತಿ ಇದೆ ಹೇಳು ? ಎಂದು ದೇಶಮುಖ್ ಸರ್ ಕೇಳಿದರು.
ಆಗ ಡಾ. ನಾಗೇಶ, *ನಾವು ಜಗತ್ತಿನಲ್ಲಿದ್ದೇವೆ, ಇಂದಿನ ಜಗತ್ತಿನ ಸಮಸ್ಯೆಗಳು ಸಮಯ ಬಂದಾಗ ನಮಗೂ ಕೆಟ್ಟ ರೀತಿಯಲ್ಲಿ ಬಾಧಿಸುತ್ತವೆ.* ಅದಕ್ಕಾಗಿ ಅವುಗಳ ಪರಿಹಾರಕ್ಕೆ ಚಿಂತಿಸಬೇಕು ಎನ್ನುವ ತಿಳುವಳಿಕೆಯ ಮನೋಭಾವ ಜನರಲ್ಲಿ ಇಂದು ದುರ್ಲಭವಾಗಿರುವುದು ಸತ್ಯ ಸರ್ ಎಂದು ಹೇಳಿದರು.
ದೇಶಮುಖ್ ಸರ್ ಮಾತಿಗೆ ರಾಜೇಶ, ಹೌದು ಸರ್ ನೀವು ಹೇಳುವುದು ನಿಜ. ಆದರೆ *ಇಂದು ಸಮಸ್ಯೆಗಳ ಪರಿಹಾರಕ್ಕೆ ಯಾರು ಪ್ರಯತ್ನಿಸುವರೋ ಅವರು ಮುಂದಿನ ಜಗತ್ತಿನ ನೀತಿ ನಿರೂಪಣೆ ಮಾಡುತ್ತಾರೆ*. ಯಾರು ಈಗ ಸಮಸ್ಯೆಗಳ ಪರಿಹಾರಕ್ಕೆ ಯೋಚಿಸದೆ ಮೈ ಮರೆತಿದ್ದಾರೆ, ಅವರು ಜಗತ್ತಿನ ನೀತಿ ನಿರೂಪಕರು ಹೇಳಿದಂತೆ *ತಮ್ಮ ಸ್ವಾಭಿಮಾನ ಅಡವಿಟ್ಟು, ತಮ್ಮ ಮನೆಯ ಹೆಣ್ಣುಮಕ್ಕಳ ಮಾನ ಮರ್ಯಾದೆಯನ್ನು ಕಳೆದುಕೊಂಡು, ಗುಲಾಮರಂತೆ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಇಲ್ಲದಿದ್ದರೆ ತಮ್ಮ ಜೀವವನ್ನೇ ಕಳೆದುಕೊಂಡು ತಮ್ಮ ಸಂಸ್ಕೃತಿ ಪರಂಪರೆಯನ್ನು ನಾಶ ಮಾಡಿಕೊಳ್ಳುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಯಾರು ಇತಿಹಾಸದಿಂದ ಪಾಠ ಕಲಿಯುವುದಿಲ್ಲವೋ, ಅವರ ಜೀವನದಲ್ಲಿ, ಗತಿಸಿ ಹೋದ ಇತಿಹಾಸ ಪುನಃ ಘಟಿಸುತ್ತದೆ*, ಎಂದು ಬಹಳ ಗಟ್ಟಿ ಧ್ವನಿಯಲ್ಲಿ ಆಕ್ರೋಶದಿಂದ ರಾಜೇಶ ಹೇಳಿದ.
ಆಗ ದೇಶಮುಖ ಸರ್, cool down ರಾಜೇಶ್ cool down. ಆದರೆ ನನಗೆ ತಿಳಿದಂತೆ ಶಾಂತಿ ಮತಕ್ಕಿಂತಲೂ *ದೊಡ್ಡ ಅಪಾಯಕಾರಿ ಬಂಡವಾಳಶಾಹಿ ಅಮೇರಿಕಾ ಸಹಚರರು ಮತ್ತು ಸರ್ವಾಧಿಕಾರಿ ಚೀನಾ. ಈ ದೇಶದವರು ನೇರವಾಗಿ ಎಲ್ಲಿಯೂ ಯಾವ ಸಮಸ್ಯೆಯ ಹಿಂದೆ ಕಾಣುವುದಿಲ್ಲ. ಆದರೆ ಯಾವುದೇ ಸದ್ದು ಗದ್ದಲ್ಲವಿಲ್ಲದೆ, ಬಹಳಷ್ಟು ಸಮಸ್ಯೆಗಳ ಹಿಂದೆ ನಿಂತು ಸೂತ್ರಧಾರರಂತೆ ಜಗತ್ತನ್ನು ಆಟವಾಡಿಸುತ್ತಿದ್ದಾರೆ*...
ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ನೇತೃತ್ವ ಬದಲಾವಣೆಗೆ ಕಾರಣ ಇದೆ ಅಮೇರಿಕಾ ದೇಶ. ಈ ಅಮೆರಿಕಾ ಕಾರಣದಿಂದಲೇ ಆರಂಭವಾದ ಯುಕ್ರೇನ್ ರಷಿಯಾ ಯುದ್ದ ಇನ್ನೂ ನಿಂತಿಲ್ಲ. ಮತ್ತೆ ಚೀನಾ, ಭಾರತದ ಗಡಿಯಲ್ಲಿರುವ ಎಲ್ಲಾ ದೇಶಗಳಿಗೆ ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ, ಎಂದರು.
ಆಗ ಡಾ. ನಾಗೇಶ ಅದೆಲ್ಲವೂ ಸರಿ, ನನ್ನ ವೈದ್ಯಕೀಯ ವೃತ್ತಿಯಲ್ಲಿ ಗಮನಕ್ಕೆ ಬಂದ ವಿಷಯ ಹೇಳುತ್ತೇನೆ, *ಮನುಷ್ಯನಲ್ಲಿರುವ ಮಾನವೀಯ ಚಾರಿತ್ರ್ಯವೇ ನಾಶವಾಗುತ್ತಿದೆ. ನೈತಿಕತೆ ಯಾವ ರೀತಿ ಪತನವಾಗುತ್ತಿದೆ ಎಂದರೆ, ದೊಡ್ಡ ನಗರಗಳಲ್ಲಿರುವ ನನ್ನ ವೈದ್ಯ ಸ್ನೇಹಿತರು ತಮ್ಮ ಹತ್ತಿರ ಇರುವ ಅಂಕಿ ಅಂಶಗಳ ಮೂಲಕ ಹೇಳುತ್ತಾರೆ ಇಂದಿನ ದಿನಗಳಲ್ಲಿ ಕನ್ಯತ್ವ ಹೊಂದಿರುವವರು ಹಾಗೂ ಬ್ರಹ್ಮಚರ್ಯ ಪಾಲನೆ ಮಾಡಿದ ಹುಡುಗ ಹುಡುಗಿ ಮದುವೆಗೆ ಲಭಿಸುವುದು ದುರ್ಲಭ. ಹೀಗಾದರೆ ಮನುಷ್ಯ ರೂಪದ ಪ್ರಾಣಿಗಳೇ ಎಲ್ಲಾ ಕಡೆ ಸಿಗುತ್ತಾರೆ. ಮನುಷ್ಯನನ್ನು ಮಾನವೀಯ ಸಂಸ್ಕಾರವುಳ್ಳವರನ್ನು ಹುಡುಕುವುದು ಕಷ್ಟ* ಎಂದು ಹೇಳಿದರು.
ಮುಂದುವರಿದು, ಮನುಷ್ಯ ಅತಿಯಾದ ಮತ್ತು ಅನೈತಿಕ ಭೋಗದಲ್ಲಿ ಮೈಮರೆತಿರುವದರಿಂರ ಅಪಾಯಕಾರಿ, ಮಾರಣಾಂತಿಕ ರೋಗಗಳು ಹರಡುತ್ತಿವೆ ಮತ್ತು ಪ್ರಕೃತಿಯನ್ನು ನಾಶ ಮಾಡುವುದರ ಮೂಲಕ ಪ್ರಾಕೃತಿಕ ವಿಕೋಪಗಳು ಎಲ್ಲೆಡೆ ಹೆಚ್ಚುತ್ತಿವೆ. ಹೀಗೆ ಅನೇಕ ಸಮಸ್ಯೆಗಳು ಈ ಭೂಮಿಯನ್ನು ಕಾಡುತ್ತಿವೆ, ಎಂದು ಹೇಳಿದರು.
ಆಗ ದೇಶಮುಖ್ ಸರ್, ಹೌದು ನೀವು ಹೇಳುವುದನ್ನು ನಿರ್ಲಕ್ಷಿಸುವಂತಿಲ್ಲ, ಇನ್ನೂ ಕೆಲವು ದಶಕಗಳಲ್ಲಿ ಅಥವಾ ಶತಮಾನದಲ್ಲಿ ಈ ಸಮಸ್ಯೆಗಳು ಭೂಮಿಯ ಅಸ್ತಿತ್ವಕ್ಕೆ ಅಂತಿಮ ಗಂಟೆಯಾಗಲಿದೆ ಎಂದು ಅನಿಸುತ್ತಿದೆ. *ಯುಕ್ರೇನ್ ರಷಿಯಾ ಮತ್ತು ಫಿಲಿಸ್ತೀನ ಇಸ್ರೇಲ್ ಯುದ್ಧಗಳು ಜಗತ್ತಿನ ಮೂರನೇ ಯುದ್ದದ ರೂಪ ಪಡೆದುಕೊಳ್ಳುವ ಆತಂಕ ಕಾಡುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಾಣುತ್ತಿಲ್ಲ* ಎಂದು ವಿಷಾದಿಸಿದರು.
ಆಗ ರಾಜೇಶ ಚಕ್ರವರ್ತಿ, ನಮ್ಮ ಧರ್ಮವೇ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರು. ಇದಕ್ಕೆ ಪ್ರತಿಯಾಗಿ ದೇಶಮುಖ್ ಸರ್, ದ್ರಾವಿಡ ಮುಖ್ಯಮಂತ್ರಿಯವರ ಮಗ *ನಿನ್ನ ಧರ್ಮ ಜಗತ್ತಿಗೆ ಡೆಂಗೆ ನಿಫಾ ವೈರಸ್ ಇದ್ದ ಹಾಗೆ ಮಾರಣಾಂತಿಕ ಎನ್ನುತ್ತಾರಲ್ಲ,* ಎಂದರು.
ಆಗ ರಾಜೇಶ್ ಆಕ್ರೋಶದಿಂದ ಅಂವ, ಅವಿವೇಕಿ, ಕಳ್ಳ ನನ್ಮಗ. ಸಭೆ ಸಮಾರಂಭಗಳಲ್ಲಿ ಎಲ್ಲರೆದುರು ಹಾಗೆ ಮಾತನಾಡುತ್ತಾನೆ. ಮತ್ತೆ ಕದ್ದು ಮುಚ್ಚಿ ದೇವಸ್ಥಾನಗಳಿಗೆ ಹೋಗುತ್ತಾನೆ ಎಂದು ಉದ್ವೇಗದಿಂದ ಸಿಟ್ಟು ಹೊರಹಾಕುತ್ತಾ, ಹೇಳಿದ. ಮುಂದುವರಿದು, *ನಾನು ಒಪ್ಪುತ್ತೇನೆ. ನಮ್ಮಲ್ಲಿ ಕೆಲವು ದೋಷಗಳಿವೆ, ಅವುಗಳನ್ನು ಒಪ್ಪಿಕೊಂಡು ನಮ್ಮ ಸಂಸ್ಥೆಯ ಹಿರಿಯರು ಹೇಳಿದಂತೆ ನಮ್ಮ ಮನೆ ಮನಸ್ಸುಗಳಲ್ಲಿ ಸುಧಾರಣೆ ತಂದು, ನಾವೆಲ್ಲಾ ಒಂದು ಎನ್ನುವಂತೆ, ನಮ್ಮ ಧರ್ಮವನ್ನು ಸುಧಾರಿಸುತ್ತಿದ್ದೇವೆ*.
ಇಂತಹ ಧರ್ಮ ವಿಶ್ವವ್ಯಾಪಿ ಆದಲ್ಲಿ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಲಿದೆ, ಎಂದು ಮರು ನುಡಿದರು. *ನಿನ್ನಂತೆ ಅನ್ಯ ಮತದವರು ತಮ್ಮ ಮತ ವಿಶ್ವವ್ಯಾಪಿ ಆದರೆ ವಿಶ್ವಶಾಂತಿ ಎನ್ನುತ್ತಾರಲ್ಲ ?* ಎಂದು ದೇಶಮುಖ್ ಸರ್ ಕೇಳಿದರು. ಆಗ ರಾಜೇಶ, *ಹಿಂಸೆಯೇ ಯಾವ ಮತದ ಮೂಲ ಬಂಡವಾಳ ಇದೆಯೋ ಅದು ಭೂಮಿಯನ್ನು ಸಹ ಹಿಂಸಸಲಿದೆ, ಅವರು ಯಾರನ್ನು ಬಿಡುವುದಿಲ್ಲ. ಹಿಂಸೆಯ ಅಸ್ತ್ರ ಕೊನೆಗೆ ಅವರ ಅನೇಕ ಪಂಥಗಳಲ್ಲಿಯೇ ಹೊಡೆದಾಡಿಕೊಂಡು ಅವರು ಸಹ ನಾಶವಾಗುವಂತೆ ಮಾಡುತ್ತದೆ, ಇದು ಖಚಿತ ಎಂದು ದೃಢ ವಿಶ್ವಾಸ ಧ್ವನಿಯಲ್ಲಿ ಹೇಳಿದ*.
ಇದೇ ರೀತಿ ಚರ್ಚೆ ಮುಂದುವರಿಯಿತು *ರಾಜೇಶ ಚಕ್ರವರ್ತಿ ಶಾಂತಿ ಮತ ಜಗತ್ತಿನ ಸಮಸ್ಯೆಗೆ ಕಾರಣವೆಂದರೆ, ದೇಶಮುಖ ಸರ್ ಬಂಡವಾಳಶಾಹಿ, ಸರ್ವಾಧಿಕಾರ ನೇತೃತ್ವದ ದೇಶಗಳು ಜಗತ್ತಿನ ಸಮಸ್ಯೆಗೆ ಮೂಲ ಕಾರಣವೆಂದರು. ಡಾ. ನಾಗೇಶ ಮನುಷ್ಯನ ನೈತಿಕ ಅಧಃಪತನ, ಚಾರಿತ್ರ್ಯ ಹೀನತೆ, ಪ್ರಕೃತಿಯ ಶೋಷಣೆ ಜಗತ್ತಿನ ಸಮಸ್ಯೆಗೆ ಕಾರಣವೆಂದರು*. ಎಲ್ಲರೂ ಹೇಳಿದಂತೆ ಜಗತ್ತಿನಲ್ಲಿ ಸಮಸ್ಯೆಗಳಿದ್ದರೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಾಣಲಿಲ್ಲ.
ಆಗ ದೇಶಮುಖ್ ಸರ್ ಗೆ ಜಗತ್ತಿನ ಸಮಸ್ಯೆಗಳ ಕಾರಣದಿಂದ ಸುರೇಶ ತನ್ನ ಮುಂದಿನ ಜೀವನದ ಉದ್ದೇಶ ಘೋಷಣೆ ಮಾಡಿದ ನೆನಪಾಯಿತು.
ಆತನಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸ್ಪಷ್ಟವಾದ ಪರಿಹಾರವಿರಬಹುದೇ ? ಎನ್ನುವ ಯೋಚನೆ ಬಂತು. ಈ ಚರ್ಚೆಗೆ ಒಂದು ಕೊನೆ ಹಾಡೆ ಬಿಡೋಣ ಎನ್ನುವಂತೆ, ದೇಶಮುಖ್ ಸರ್ ಸುರೇಶನಿಗೆ ಕರೆ ಮಾಡಿ ಬರುವಂತೆ ಕೇಳಲು, ಡಾ. ನಾಗೇಶ ಗೆ ಹೇಳಿದರು.
(ಭರವಸೆ ಕಳೆದುಕೊಳ್ಳುವುದು ವ್ಯಕ್ತಿತ್ವದ ಕೊಲೆ ಸರಣಿಯ 5ನೇ ಲೇಖನ)
(ಮುಂದುವರಿಯುವುದು....)
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್.)
.jpeg)
Comments
Post a Comment