ದೇವರು ಎಲ್ಲಿದ್ದಾನೆ?


ಈ ಪ್ರಶ್ನೆ ಬಹಳಷ್ಟು ಜನರಲ್ಲಿ ಇರುತ್ತದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ.


ಇದನ್ನು ಓದುತ್ತಿರುವ ಎಲ್ಲರಿಗೂ ಐದೇ ಬೆರಳುಗಳಿವೆ. ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರ ಕೈ ಕಾಲುಗಳಿಗೆ ಐದೇ ಬೆರಳುಗಳು ಇರುತ್ತವೆ.


ನಿರ್ದಿಷ್ಟವಾಗಿ ಕೇವಲ ಐದೇ ಬೆರಳುಗಳು ಏಕಿವೆ? 2,3,4, ಇಲ್ಲವೇ 6,7,8 ಹೀಗೆ ಏಕಿಲ್ಲ?


ಬಹುತೇಕ ಎಲ್ಲರಿಗೂ ಐದೇ ಬೆರಳುಗಳಿವೆ. ಏಕೆಂದರೆ, ಐದು ಬೆರಳುಗಳಲ್ಲಿ ಈ ಜಗತ್ತಿನ ರಹಸ್ಯ ಇದೆ. 


ಅದೇನೆಂದರೆ, ಈ ವಿಶಾಲವಾದ ಅನಂತ ಜಗತ್ತು ಆಗಿರುವುದು. ಐದು ಮೂಲಭೂತ ಅಸ್ತಿತ್ವಗಳಿಂದ. ಅವುಗಳೇ


1.ಘನ (ಗಟ್ಟಿಯಾಗಿರುವ ಭೂ ತತ್ವ), 

2.ದ್ರವ (ನೀರಿನಂತೆ), 

3.ಅನಿಲ, 

4.ಬೆಂಕಿ, 

5.ಆಕಾಶ ಅಥವಾ ಖಾಲಿ ಸ್ಥಳ.


ಈ ಜಗತ್ತು ಹೇಗೆ ಐದು ಅಸ್ತಿತ್ವಗಳಿಂದ ಆಗಿದೆಯೋ ಅದೇ ರೀತಿ ನಮ್ಮ ದೇಹವೂ ಈ ಐದೇ ಅಸ್ತಿತ್ವಗಳಿಂದ ಆಗಿದೆ.


 ನಮ್ಮ ದೇಹದಲ್ಲಿ 


1.ಗಟ್ಟಿಯಾಗುವ ಭೂ ತತ್ವ ಎಂದರೆ ಮೂಳೆ ಹಲ್ಲು. 

2.ದ್ರವ ಆಗಿರುವುದು ನೀರು ರಕ್ತ. 

3.ವಾಯು ಆಗಿರುವುದು ಉಸಿರಾಟದ ಗಾಳಿ. 

4.ಬೆಂಕಿ ದೇಹದ ಶಕ್ತಿ. 

5.ಗಂಟಲಿನಲ್ಲಿ ಖಾಲಿ ಸ್ಥಳ. 


ಹೀಗೆ ಐದು ವಸ್ತುಗಳಿಂದ ದೇಹ ಆಗಿರುವುದರಿಂದ ನಮಗೆ ಐದು ಬೆರಳುಗಳಿವೆ.


ಐದು ಬೆರಳುಗಳು ಒಂದೊಂದು ಪಂಚಭೂತದ ಪ್ರತೀಕ. 


1.ಉಂಗುರ ಬೆರಳು ಭೂ ತತ್ವದ ಪ್ರತೀಕ. ಇದನ್ನು ನ ಅಕ್ಷರದಿಂದ ಗುರುತಿಸಲಾಗುತ್ತದೆ.


2.ಕಿರುಬೆರಳು ದ್ರವ ತತ್ವ. ಇದರ ಅಕ್ಷರ ಮ.


3.ಹೆಬ್ಬೆರಳಿನಲ್ಲಿ ಬೆಂಕಿ ತತ್ವ. ಇದರ ಅಕ್ಷರ ಶಿ.


4.ತೋರು ಬೆರಳು, ವಾಯು ತತ್ವ. ಇದರ ಅಕ್ಷರ ವಾ.


5.ಮಧ್ಯದ ಬೆರಳು ಖಾಲಿ ಸ್ಥಳ. ಇದರ ಅಕ್ಷರ ಯ.


ಈ ಐದು ಬೆರಳುಗಳ ಅಕ್ಷರ ಜೋಡಿಸಿದಾಗ 

#ನಮಃ_ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವಾಗುತ್ತದೆ.


ದೇವರೆಂದರೆ ಬೇರೆ ಯಾರು ಅಲ್ಲ. 


#ನಮಗೆ_ಬದುಕಲು_ಯಾರು_ಅವಕಾಶ_ಮಾಡಿಕೊಡುತ್ತಾರೆಯೋ_ಅವರೇ_ದೇವರು. 


ನಾವು ಈ ಭೂಮಿ, ನೀರು, ಬೆಳಕು, ಗಾಳಿ ಇಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?


ಖಂಡಿತ ಇಲ್ಲ.


ನಮಗೆ ಬದುಕಲು ಅವಕಾಶ ಮಾಡಿಕೊಡುತ್ತಿರುವ ಈ ಪಂಚಭೂತಗಳೆನ್ನುವ ದೇವರು ಎಲ್ಲೆಲ್ಲೂ ಇದ್ದಾರೆ. 


ನಮ್ಮ ದೇಹವು ಸಹ ಅದುವೇ ಆಗಿದೆ.


ಆದ್ದರಿಂದ ನಾವು ದೇವರು ಎಲ್ಲಿದ್ದಾನೆ? ಎಂದು ಹುಡುಕುವುದಕ್ಕಿಂತ 


ದೇವರು ಎಲ್ಲಿಲ್ಲ ? ಎಂದು ಹುಡುಕಬೇಕು.


ಏಕೆಂದರೆ ದೇವರು ಇಲ್ಲದ ಸ್ಥಳವಿಲ್ಲ.


ದೇವರೆಂದರೆ

ನಮ: ಶಿವಾಯ

ಭೂ ತತ್ವ, ಜಲ ತತ್ವ, ಅಗ್ನಿ ತತ್ವ, ವಾಯು ತತ್ವ, ಆಕಾಶ ತತ್ವ


ಓಂ ನಮಃ ಶಿವಾಯ


✍️ URAIN NAMAH.

Comments

Popular posts from this blog

ಅಂಧ ಹೇಳವರು