ಅಂಧ ಹೇಳವರು

 (ಶ್ರೀ ಗುರುದೇವರ ಪದತಲದಲ್ಲಿ ಸಾಷ್ಟಾಂಗ ನಮನ)


*** ♥♥♥ ಅಂಧ ಹೇಳವರು ♥♥♥*** 

                                                                                                                                                                         ಕಡು ಕಷ್ಟ, ಬಲು ವಿಪರೀತ್

ಕೊನೆಗೂ ತಲುಪಲಾರೆಯೋ, ಅಂಧನೆ ನೀ ತಲುಪಲಾರೆಯೋ 

ನೀ ತಲುಪಲಾರೆ, ದಿವ್ಯ ಕ್ಷೇತ್ರ, ದೇವ ಕ್ಷೇತ್ರ 

ಕೊನೆಗೂ ಸೇರಲಾರೆ ನೀನು, ನಮ್ಮ ದಿವ್ಯ ಮೂಲ ಮನೆ 


ಅಂಧನೆ ನಿಜ ನಿನ್ನ ಕಾಲಲ್ಲಿಹುದು ಶಕ್ತಿ

ಶಕ್ತಿಯಿಂದ ನೀನು ಕರ್ಮಠ 

ನೀನು ಭಾವಿಸಿರುವೇ, ಪದೇ, ಪದೇ ನಡೆದು ನಡೆದು ದಾರಿ ಕ್ರಮಿಸಿ 

ತಲುಪುವೆ ದಿವ್ಯ ಕ್ಷೇತ್ರ, ದೇವ ಕ್ಷೇತ್ರ, ಸೇರುವೆ ನಮ್ಮ ದಿವ್ಯ ಮೂಲ ಮನೆ 


ಇದು ಭ್ರಮೆಯೋ, ಅರಿವಿದೇಯಾ ನಿನಗೆ?

ಯಾವುದು ದಿವ್ಯ ಕ್ಷೇತ್ರ? ಎಲ್ಲಿರುವದು ದೇವ ಕ್ಷೇತ್ರ? ಹೇಗಿರುವದು ನಮ್ಮ ದಿವ್ಯ ಮೂಲ ಮನೆ ?

ಹೇಗೆ ಅರಿತೆಯೋ ? ನೀನು ಅಂಧನು, ಎತ್ತು ಬರೀ ಕರ್ಮದ ಗಾಣದ ಎತ್ತು

ಹೇಗೆ ಗುರುತಿಸುವಿಯೋ, ಕ್ಷೇತ್ರದತ್ತ ಮಾರ್ಗ ಕ್ರಮಿಸಿದುದು ? ನೀನು ಅದರ್ಶನದವನು.


ಕಡು ಕಷ್ಟ, ಬಲು ವಿಪರೀತ್

ಕೊನೆಗೂ ತಲುಪಲಾರೆಯೋ, ಹೇಳವನೆ ನೀ ಸಹ ತಲುಪಲಾರೆಯೋ 

ನೀ ಸಹ ತಲುಪಲಾರೆ, ದಿವ್ಯ ಕ್ಷೇತ್ರ, ದೇವ ಕ್ಷೇತ್ರ 

ಕೊನೆಗೂ ಸೇರಲಾರೆ ನಮ್ಮ ದಿವ್ಯ ಮೂಲ ಮನೆ 


ಹೇಳವನೆ ಇದು ಸತ್ಯ, ನಿನ್ನ ಕಣ್ಣಿನಲ್ಲಿರುವದು ದೃಷ್ಠಿ

ದೃಷ್ಠಿಯಿಂದ ನೀನು ದಾರ್ಶನಿಕ 

ಹೌದು ನೀನು ಅರಿತಿರುವೆ, 

ಯಾವುದು ದಿವ್ಯ ಕ್ಷೇತ್ರ, ದೇವ ಕ್ಷೇತ್ರ, ಯಾವುದು ನಮ್ಮ ದಿವ್ಯ ಮೂಲ ಮನೆ 


ಕೇವಲ ಅರಿತರೆ ಮಾರ್ಗ ಕ್ರಮಿಸಿ, ಕ್ಷೇತ್ರ ಸೇರಿದಂತಾಗುವದೇ ?

ಹಸಿವೆಯಾದಾಗ ನೀನು, ಕೇವಲ ಆಹಾರ ಸ್ಥಾನವರಿತರೇ

ನಿನ್ನ ಹೊಟ್ಟೆ ತುಂಬುವದೇನು? ಹಸಿವು ತಣಿದು ತೃಪ್ತಿ ಸಿಗುವದೇನು?

ಆಹಾರ ಸ್ಥಾನವರಿತು, ತಿನ್ನುವ ಕರ್ಮ ಮಾಡಿದಾಗಲೇ ಹಸಿವು ನೀಗಿ ಸಂತೃಪ್ತನಾಗುವಿಯಲ್ಲವೇ? 


ಕೇಳಿ, ಅಂಧ, ಹೇಳವರೇ ಒಂಟಿಯಾಗಿ; ಬೇರೆ ಬೇರೆಯಾಗಿ ಸಾಗಿದಾಗ

ಕಡು ಕಷ್ಟವೂ ಬಲು ವೀಪರೀತವೂ

ಅಂಧ ನಿನಗೆ ಜ್ಞಾನದ ಚಕ್ಷುವಿಲ್ಲ, ಹೇಳವ ನಿನಗೆ ಕರ್ಮದ ಕಾಲು ಇಲ್ಲ.

ತಲುಪುವದೆಂದಿಗೂ ಅಸಾಧ್ಯ ದೇವ ಕ್ಷೇತ್ರ, ದಿವ್ಯ ಕ್ಷೇತ್ರ, ನಮ್ಮ ದಿವ್ಯ ಮೂಲ ಮನೆ.


ಆದರೂ ಇರುವದು ಒಂದು ಕಟ್ಟಕಡೆಯ, ಬಹು ಮಹತ್ವ ದ ಉಪಾಯ 

ಒಂದುಗೂಡಿರಿ. ಜೊತೆಯಾಗಿರಿ , ಸ್ನೆಹಿತರಾಗಿರಿ ಪರಸ್ಪರ 

ಆಗ ಅಂಧನೇ, ಹೇಳವ ನಿನಗಾಗುವನು ಜ್ಞಾನದ ಚಕ್ಷು

ಹೇಳವನೆ ಅಂಧನು ನಿನಗಾಗುವನು ಕರ್ಮದ ಕಾಲು


ಬೇರೆ ಮಾರ್ಗವೇ.. ಇಲ್ಲ, ಇದೆ ಕಟ್ಟಕಡೆಯ ಉಪಾಯ

ಸೇರಲು ಸಾಕ್ಷಾತ್ಕಾರದ ದಿವ್ಯ ದೇವ ಕ್ಷೇತ್ರ, ಪೂರ್ಣತ್ವದ ನಮ್ಮ ದಿವ್ಯ ಮೂಲಮನೆ

ಹೀಗಾಗಿ ಅಂಧನೇ ಕರ್ಮದಭಿಮಾನದಿಂದ ಹೇಳವನನ್ನು ನಿರ್ಲಕ್ಷಿಸದಿರು

ಹೇಳವನೆ, ಜ್ನಾನದಹಂಕಾರದಿಂದ ಅಂಧನನ್ನು ಕಡಗಣಿಸದಿರು


ಕಾರಣವೇನೆಂದರೇ ನೀವಿಬ್ಬರಾದರು

ಒಂದೇ ಚಕ್ಕಡಿಯ ಎರಡು ಚಕ್ರಗಳು

ಒಂದೇ ನಾಣ್ಯದ ಎರಡು ವಿಭಿನ್ನ ಮುಖಗಳು

ಒಬ್ಬರನ್ನಗಲಿ ಮತ್ತೊಬ್ಬರು ಎಷ್ಟಾದರೂ ಶೇಷವೇ ಶೇಷ, ಎಂದಿಗೂ ಅಸಾಧ್ಯ ನಿಃಶೇಷ


ಅಂಧನು ಬೇರೆ ಯಾರಿಲ್ಲ, ಹೇಳವನು ಬೇರೆ ಯಾರಿಲ್ಲ

ಪೂರ್ಣತ್ವ ಸಾಕ್ಷಾತ್ಕರದ , ದಿವ್ಯ ದೇವ ಕ್ಷೇತ್ರದತ್ತ ಸಾಗುತ್ತಿರುವ

ನಾನೇ ಅಂಧನು, ಹೊಂದಿರದಿದ್ದರೇ ಜ್ಞಾನದ ಚಕ್ಷು

ನಾನೇ ಹೇಳವನು ಹೊಂದಿರದಿದ್ದರೆ ಕರ್ಮದ ಕಾಲು 


ಜೀವನ ನಿತ್ಯ ನಿರಂತರ , ದರ್ಶನವಾಯಿತೆಂದು ಅಹಂನಿಂದ ನಿಂತರೆ 

ಮಾಯೆ ಬರುವದು ಎಲ್ಲವನ್ನು ಮರೆಸುವದು 

ಸಮಗೊಳಿಸುವದು ಜ್ಞಾನಿ ಅಜ್ಞಾನಿಗಳಿಬ್ಬರನ್ನು 

ಬಿಳಿಸುವದು ಜನ್ಮ ಮರಣದ ಚಕ್ರಕ್ಕೆ 


ಅರಿಯದೆ ಮಾಡುವ ಕರ್ಮ ವ್ಯರ್ಥವೇನಲ್ಲ 

ಆದರೆ ಆತ್ಮೊನ್ನತಿಗಾಗುವದು ಯಾವ ಲಾಭ?

ಒಂದೇ ಸಮನೆ ಸುತ್ತುವದು ಗಾಣದ ಎತ್ತು

ಮುಂದುವರಿದುದ್ದರ ಅರಿವಿಲ್ಲ , ಹಿಂದುಳಿದುದ್ದರ ತಿಳಿವಿಲ್ಲ , ಪಡೆಯುವದು ಕೇವಲ ಹೊಟ್ಟೆಗೆ ಮೇವು 


ಹೇ ಪ್ರಭು, ಅಂತರಂಗ ನುಡಿದ ಸುಜ್ಞಾನದಂತೆ ನಡೆಸು, ಕ್ಷಣ ಪ್ರತಿಕ್ಷಣದ ಜೀವನ

ಇರಲಿ ಪ್ರತಿ ಕರ್ಮದ ಹಿಂದೆ   ಆತ್ಮ ಜ್ಞಾನವು

ಆಗ ಸುಲಭದಲ್ಲಿ ಸುಲಭ, ಸರಳಾತಿ ಸರಳ

ಸೇರುವದು ದಿವ್ಯ ಕ್ಷೇತ್ರ, ದೇವ ಕ್ಷೇತ್ರ, ನಮ್ಮ ದಿವ್ಯಮೂಲಮನೆ


ಇಲ್ಲದಿದ್ದರೆ, ಕಡು ಕಷ್ಟ ಬಲು ವೀಪರೀತ

ಕೊನೆಗೂ ತಲುಪಲಾರೆ; ಅಂಧ, ಹೇಳವನಾದ ನಾನು

ಸಾಕ್ಷಾತ್ಕರದ ದಿವ್ಯ ಕ್ಷೇತ್ರ, ದೇವ ಕ್ಷೇತ್ರ

ಕೊನೆಗೂ, ಎಂದೆಂದಿಗೂ ಸೇರಲಾರೆ, ಪೂರ್ಣತ್ವದ ನಮ್ಮ ದಿವ್ಯ ಮೂಲಮನೆ.

URAIN

URAIN

URAIN

Comments

Popular posts from this blog