*ಸಮಯಚಲನ*


ನಾವು ಬಯಸಿದರು, ಬಯಸದೆ ಇದ್ದರೂ  ನಿಲ್ಲಿಸದು  ಸಮಯ ತನ್ನ ಚಲನ.

ಮೆಲ್ಲ ಮೆಲ್ಲನೆ ನಾಜೂಕಾಗಿ ಕಳೆದು ಹೋಗುತ್ತಿರುವುದು ಸಮಯ...

ಹೋಗುತಾ..., ಕಳೆಯುತಾ....  ಕಳೆಯುತ್ತಿರುವುದು ಸಮಯ ಸರ್ವರನ್ನು......ಸರ್ವಸ್ವವನ್ನೂ....


ಸುಖ ಬಂದಾಗ ಸಮಯ ನಿಲ್ಲಲು ಬಯಸುವೆವು

ಕಷ್ಟ ಬಂದಾಗ ಸರ್ರನೆ ಚಲಿಸಲು ಹೇಳುವೆವು

ಗಡಿಬಿಡಿಯಲ್ಲಿ ಸಮಯ ನಿಲ್ಲಲು ಬಯಸುವೆವು

ಕಾಯುವಾಗ ಸಮಯ ಸರ್ರನೆ ಚಲಿಸಲು ಹೇಳುವೆವು


ಸುಖವಿರಲಿ, ಕಷ್ಟವಿರಲಿ

ಗಡಿಬಿಡಿಯಿರಲಿ, ಕಾಯುವಿಕೆವಿರಲಿ

ಎಂದಿಗೂ ನಿಲ್ಲಿಸಲಾಗದು ಈ ಜಗತ್ತಿನ ಸಮಯಚಲನ. 

ಕಾರಣ ನಮ್ಮ ನಿಯಂತ್ರಣದಲ್ಲಿಲ್ಲ ಈ ಜಗತ್ತಿನ ಸಮಯಚಲನ 


ಅಗರ್ಭ ಶ್ರೀಮಂತರ ಅಷ್ಟು ಸಂಪತ್ತನ್ನು ನೀಡಿದರು ಕಳೆದ ಸಮಯ ಮತ್ತೆ ಮರಳಿ ಬಾರದು.

ಸಂಪತ್ತಿಗೆ ಸರಿಸಮವಲ್ಲವಿದು ಸಮಯ

ಸಂಪತ್ತಿಗಿಂತ ಮಿಗಿಲಾದುದಿದು, ವಿಸ್ಮಯ 


ನಿತ್ಯ ನಿರಂತರ ಸಮಯ ಚಲಿಸುತ್ತಿರುವುದು.

ಬಾಲಕರನ್ನು ಯುವಕನಾಗಿಸುತ್ತಿರುವುದು. 

ಯುವಕರನ್ನು ಮುಪ್ಪಿಗೆ ತಳ್ಳುತ್ತಿರುವುದು.

ಎಲ್ಲರ ದೇಹವನ್ನು ನಿಧಾನ, ಸಾವಧಾನವಾಗಿ ಮೆಲ್ಲ ಮೆಲ್ಲನೆ  ಕೊಲ್ಲುತ್ತಿರುವುದು.... 

ಅದು ಸಹ ನಿರಪರಾಧಿಯಾಗಿ ಕೊಲ್ಲುತ್ತಿರುವುದು.


ಕಾಣುತ್ತಿಲ್ಲ, ಅನುಭವಕ್ಕೆ ಬರುತ್ತಿಲ್ಲ ನಮಗೆ ಆವರಿಸಿದೆ ಕರ್ಮ, ಆಸಕ್ತಿ, ರಾಗ, ದ್ವೇಷದ ಮುಸುಕು

ಮೆಲ್ಲ ಮೆಲ್ಲನೆ  ಕೈಯಲ್ಲಿ ಹಿಡಿದ, ಸಣ್ಣ ಉಸುಕಿನಂತೆ 

ಗೊತ್ತಿಲ್ಲದಂತೆ ಜಾರಿ ಹೋಗುತ್ತಿರುವುದು ಸಮಯ. 


ಹಳಬರನ್ನು ದೂರ ಸರಿಸುತ್ತಿರುವುದು. 

ಹೊಸತನ್ನು ಸೇರಿಸುತ್ತಿರುವುದು 

ಕೊನೆಯಲ್ಲಿ ಒಂಟಿ ಮಾಡುತ್ತಿರುವುದು.

ನೆನಪುಗಳ ಮೂಟೆಯಲ್ಲಿ ಮುಳುಗಿಸುತ್ತಿರುವುದು


ಬಯಸಿದರು, ಬಯಸದೆ ಇದ್ದರೂ ಸಮಯ ನಿರಂತರ ಚಲಿಸುತ್ತಿರುವುದು.

ನಮ್ಮಿಂದ ನಿಲ್ಲಿಸಲಾಗದು, ತಡೆಯಲಾಗದು ಅನಿಯಂತ್ರಣವಿದು ಈ ಜಗತ್ತಿನ ಸಮಯಚಲನ

ಕಾರಣ, *"ಗತಿ"*ಯೆಂಬ ಚಲನೆಗೆ, *"ಜ"*ನ್ಮ ಕೊಟ್ಟು ಆಗಿರುವುದೇ, *ಜ* *ಗತ್*.


ಸಮಯದ ಮೇಲೆ ನಮ್ಮ ಅಲ್ಪ ನಿಯಂತ್ರಣವಿದೆ 

ಆ ನಿಯಂತ್ರಣವೇ ಸಮಯ ಖಾಲಿ ಹೋಗದಂತೆ ನೋಡಿಕೊಳ್ಳುವುದು.

ಇದನ್ನು ಅರಿಯೋಣ, 

ಇದನ್ನರಿತು ಕ್ರಿಯಾಶೀಲರಾಗೋಣ


ಸಾಧ್ಯವಿದು ಎಲ್ಲರಿಗೂ..

ತನಗೆ, ಕುಟುಂಬಕ್ಕೆ, ಸಮಾಜ, ದೇಶಕ್ಕೆ, ಜಗತ್ತಿಗೆ ಸಮಯಚಲನದಲ್ಲಿ

 ಒಂದಿಲ್ಲ ಒಂದು ಒಳಿತು ಮಾಡಲು,

ಸಮಯ ವ್ಯರ್ಥ ಹೋಗದಂತೆ ತಡೆಯಲು


ಮುಂದಿನ ಸಮಯ ನಮ್ಮನ್ನು ಆದರಿಸುವುದು 

ನಾವು ಇಂದಿನ ಸಮಯ ಗೌರವಿಸಿದಾಗ

ಸಮಯವನ್ನು ಆದರಿಸುವುದು ನಮ್ಮ ಆದ್ಯತೆಯಾಗಲಿ

ಸಮಯದ ಸದುಪಯೋಗ ನಮ್ಮ ಪ್ರಾಮುಖ್ಯತೆಯಾಗಲಿ.


 ಎಚ್ಚರವಾಗೋಣ, ಜಾಗೃತೆ ವಹಿಸೋಣ,

ಸಮಯ ವ್ಯರ್ಥ ಹೋಗದಂತೆ ತಡೆಯೋಣ 

ನಿತ್ಯ ನಿರಂತರ ಕ್ರಿಯಾಶೀಲರಾಗೋಣ,

ಮಿಥ್ಯ ಮರೆಯೋಣ, ಸತ್ಯ ಸ್ಮರಿಸೋಣ 

ದೇಹ ಅಂತ್ಯ ಕಾಲದಲ್ಲಿ  ಪಶ್ಚಾತ್ತಾಪ ಪಡೆದಂತೆ ನೋಡಿಕೊಳ್ಳೋಣ. 


ಕಾರಣ, ನಾವು ಬಯಸಿದರು, ಬಯಸದೆ ಇದ್ದರೂ  ನಿಲ್ಲಿಸದು  ಸಮಯ ತನ್ನ ಚಲನ.

ಮೆಲ್ಲ ಮೆಲ್ಲನೆ ನಾಜೂಕಾಗಿ ಕಳೆದು ಹೋಗುತ್ತಿರುವುದು ಸಮಯ...

ಹೋಗುತಾ..., ಕಳೆಯುತಾ....  ಕಳೆಯುತ್ತಿರುವುದು ಸಮಯ ಸರ್ವರನ್ನು...... ಸರ್ವಸ್ವವನ್ನೂ....


ಜಯ ಜಯ ಮಹಾ ಕಾಲ


ಓಂ ನಮಃ ಶಿವಾಯ


✍️ URAIN NAMAH

ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ


(ಸೂರ್ಯ ನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ )

Comments

Popular posts from this blog

ಅಂಧ ಹೇಳವರು