ಮನುಜ_ಮಾಡು_ನೀ_ಯೋಗ
ಅಮೂಲ್ಯ ಮಾನವ ದೇಹ
ದೇವರು ಕೊಡುಗೆಯಾಗಿ ಕೊಟ್ಟ
ಅಮೂಲ್ಯತೆಯ ಹೆಚ್ಚಿಸುವದು ಬಿಡುವದು,
ಮನುಷ್ಯನ ವಿವೇಚನೆಗೆ ಬಿಟ್ಟ.
ಇದನ್ನರಿಯದೆ ಇಂದ್ರಿಯಗಳ ತೃಪ್ತಿಗಾಗಿ
ದುಶ್ಚಟಗಳಿಗೆ ಬಲಿಯಾಗಿ ಭೋಗಿ ಕೆಟ್ಟ
ಪುರುಷಾರ್ಥ ಮಾಡದೆ ಸೋಮಾರಿಯಾಗಿ
ತಯ್ಯಾರಿಸುತಿಹನು ಯಾತನೆಯ ಚಟ್ಟ
ಅರಿತು ಮಾಡಿದರೆ ಯೋಗ
ಮುಂದೆ ಇರುವುದು ಲಾಭಗಳ ಬೆಟ್ಟ.
ಸ್ವಲ್ಪ ನೋವನ್ನುಂಡು ಅಭ್ಯಸಿಸಿದರೆ
ಮುಂದೆ ಕಾಯುತಿಹುದು ಯಶಸ್ಸಿನ ಅಟ್ಟ.
ಮನುಜ ಮಾಡು ನೀ ಯೋಗ
ಕಳೆಯಬೇಡ ಕಾಲ ಕೇವಲ ಭೋಗ
ಹೊಡೆದೋಡಿಸುವೆ ಎಲ್ಲ ರೋಗ
ಸಮೀಪಿಸುವದು ನಿನಗೆ ದೇವರ ಯೋಗ.
19/06/2018
. 🙏
ಎಲ್ಲರಿಗು ಅಂತಾರಾಷ್ಟ್ರೀಯ ಯೋಗ ದಿವಸದ "ಹಾರ್ದಿಕ ಶುಭ ಆಶಯಗಳು".
WISH YOU HAPPY "INTERNATIONAL YOGA DAY" .

Comments
Post a Comment