ಒಂದು ಚಿತ್ರ, ಎರಡು ವಿಚಾರಗಳು.
ನಮ್ಮ ದೇಹ ಜೀವಂತ ಇರಲು ಮುಖ್ಯವಾಗಿ ಬೇಕಾಗಿರುವುದು ಆಹಾರ. ಆಹಾರದಿಂದಲೇ ನಮ್ಮ ದೇಹ ತಯಾರಾಗುತ್ತದೆ. ಹಾಗೂ ನಮ್ಮ ವಿಚಾರಗಳ ಮೇಲೂ ಆಹಾರ ತಯಾರಿಸಿದವರ ಭಾವನೆ ಪ್ರಭಾವ ಬೀರುತ್ತದೆ.
ಇದಕ್ಕಾಗಿಯೇ ನಾವು ಶುದ್ಧವಾದ ಸಾತ್ವಿಕ ಆಹಾರ ಸೇವಿಸಬೇಕು ಎಂದು ಹೇಳಲ್ಪಟ್ಟಿದೆ.
ಆಹಾರ ತಯಾರಿಸಿದವರು ಕೆಟ್ಟ ವಿಚಾರಗಳಿಂದ, ದೂಷಿತ ಮನಸ್ಸಿನಿಂದ ಆಹಾರ ತಯಾರಿಸಿದರೆ ಅದನ್ನು ಸೇವಿಸಿದ ಎರಡು ಮೂರು ದಿನಗಳಲ್ಲಿ, ಆಹಾರ ಯಾವ ಭಾವನೆಯಿಂದ ತಯಾರಿಸಿದ್ದಾರೆ, ಆ ಭಾವನೆ ಆಹಾರವನ್ನು ಸೇವಿಸಿದವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೀಗಾಗಿ ಆಹಾರ ತಯಾರಿಸುವಾಗ ಶುದ್ಧ ಮನಸ್ಸು ಒಳ್ಳೆಯ ಭಾವನೆಯಿಂದ ಆಹಾರ ತಯಾರಿಸಬೇಕು.
ಇನ್ನೊಂದು ವಿಷಯ ಆಹಾರವನ್ನು ಸ್ವೀಕರಿಸುವಾಗಲೂ ಆಹಾರವನ್ನು ದೇವರಿಗೆ ಅರ್ಪಿಸಿ ದೇವರ ಪ್ರಸಾದ ಎನ್ನುವ ಭಾವನೆಯಿಂದ ಆಹಾರ ಸೇವಿಸಿದಲ್ಲಿ, ಆ ಆಹಾರ ದೋಷಗಳಿಂದ ಮುಕ್ತವಾಗುತ್ತದೆ. ಹಾಗೂ ಉತ್ತಮ ಆರೋಗ್ಯ ಲಭಿಸುವದರ ಜೊತೆಗೆ, ಉತ್ತಮ ವಿಚಾರಗಳಿಗೆ ಕಾರಣವಾಗಿ ನಮ್ಮ ಜೀವನವನ್ನು ಉನ್ನತಿಯ ಕಡೆಗೆ ಕರೆದುಕೊಂಡು ಹೋಗುತ್ತದೆ, ಎಂದು ದಾರ್ಶನಿಕರು ಹೇಳಿದ್ದಾರೆ.
ಇಂದು ಆಹಾರದ ಬಗ್ಗೆ ಬರೆಯುವದಕ್ಕೆ ಕಾರಣ ನಾನು ಇಂದು ಮುಂಜಾನೆ ಊಟ ಮಾಡುವಾಗ ರೊಟ್ಟಿಯಲ್ಲಿ ಕಂಡು ಬಂದ ದೃಶ್ಯ !
ಅದುವೇ, ಸಂಸ್ಕೃತದ ಓಂ ಅಕ್ಷರ.
ದಿನಾಲು ದೇವರ ಸ್ಮರಣೆ ಮಾಡಿ, ದೇವರಿಗೆ ಆಹಾರ ಅರ್ಪಿಸಿ , ದೇವರ ಪ್ರಸಾದ ಎನ್ನುವ ಭಾವನೆಯಲ್ಲಿ ಆಹಾರ ಸೇವಿಸುವಾಗ ಆಕಸ್ಮಿಕವಾಗಿ ರೊಟ್ಟಿಯಲ್ಲಿ ಕಂಡ ಈ ದೃಶ್ಯ ದೇವರ ದಿವ್ಯ ಅನುಭೂತಿ ನೀಡಿ ನನ್ನನ್ನು ಪುಳಕಗೊಳಿಸಿತು.
ನಾವು ಜಗತ್ತು ಹಾಗಿದೆ, ಹೀಗಿದೆ. ಜಗತ್ತಿನಲ್ಲಿ ಅದು ಇದೆ, ಇದು ಇದೆ, ಎಂದು ಹೇಳುತ್ತೇವೆ.
ಆದರೆ ನಮ್ಮ ಮನಸ್ಸಿನ ಆಳದಲ್ಲಿ ಏನಿರುತ್ತದೆಯೋ ಅದನ್ನೇ ನಾವು ಹೊರಗಿನ ಜಗತ್ತಿನಲ್ಲಿ ಕಾಣುತ್ತೇವೆ. ಇದನ್ನು ಓದುತ್ತಿರುವ ಎಷ್ಟೋ ಜನರ ರೊಟ್ಟಿಯಲ್ಲಿಯೂ ಸಹ ಈ ತರಹದ ದಿವ್ಯ ದೃಶ್ಯಗಳು ಮೂಡಿರಬಹುದು. ಆದರೆ ಮನಸ್ಸಿನಲ್ಲಿ ಆ ವಿಚಾರ ಇರದ ಕಾರಣ, ಅವರಿಗೆ ಅದು ಕಾಣಲಿಕ್ಕಿಲ್ಲ.
ಅನೇಕರಿಗೆ ಜಗತ್ತು ಅನೇಕ ರೀತಿ ಕಾಣುತ್ತದೆ. ಅದು ಹಾಗೆ ಕಾಣಲು ಕಾರಣ ಒಂದು ಅವರ ಕರ್ಮಗಳು, ಎರಡನೆಯದು ಅವರ ಆಸಕ್ತಿ.
1. ಇಂದು ನಾನು ರೊಟ್ಟಿಯಲ್ಲಿ ಓಂಕಾರ ಎನ್ನುವ ನಾದ ಬ್ರಹ್ಮನನ್ನು ಕಂಡಿರುವುದಕ್ಕೆ ಕಾರಣ ಒಂದು ರೊಟ್ಟಿಯನ್ನು ತಯಾರಿಸಿದವರ ಭಾವನೆ.
2. ಎರಡನೆಯದು ನಾನು ಜಗತ್ತನ್ನು ದೇವರಂತೆ ನೋಡಲು ಬೆಳೆಸಿಕೊಂಡಿರುವ ಆಸಕ್ತಿ ಹಾಗೂ ಅಭ್ಯಾಸ.
ನಮ್ಮ ಆಸಕ್ತಿಯಂತೆ, ನಮ್ಮ ದೃಷ್ಟಿ ಇರುತ್ತದೆ. ದೃಷ್ಟಿ ಹೇಗಿರುತ್ತದಯೋ ಹಾಗೆ ಜಗತ್ತು ಕಾಣುತ್ತದೆ. ದೇವರನ್ನು ಅನೇಕರು ಎಲ್ಲೆಲ್ಲೋ ಹುಡುಕುತ್ತಾರೆ. ಎಷ್ಟು ಹುಡುಕಿದರೂ ಸಫಲರಾಗದಿದ್ದಾಗ ದೇವರಿಲ್ಲ, ಎಂದು ನಿರ್ಧಾರಕ್ಕೆ ಬರುತ್ತಾರೆ. ಆದರೆ ಜ್ಞಾನದ ಕಣ್ಣನ್ನು ಯಾರು ತೆರೆದುಕೊಂಡಿದ್ದಾರೆ, ಅವರ ಪಾಲಿಗೆ ಕೇವಲ ದೇವರು ಮಾತ್ರ ಇದ್ದಾನೆ. ಜಗತ್ತು ಎನ್ನುವುದೇ ಇಲ್ಲ.
ಇದಕ್ಕಾಗಿ ಜ್ಞಾನದ ದೃಷ್ಟಿಕೋನದ ಅವಶ್ಯಕತೆಯಿದೆ. ಜ್ಞಾನದ ಕಣ್ಣು ತೆರೆದಾಗ ಎಲ್ಲರಿಗೂ ಕೇವಲ ದೇವರು ಮಾತ್ರ ಇರುವುದು ತಿಳುವಳಿಕೆಗೆ ಬರುತ್ತದೆ.
ಮನಸ್ಸಿನ ಯೋಚನೆಗಳೇ ಬಂಧನ ಮೋಕ್ಷಕ್ಕೆ ಕಾರಣ. ನಾವು ಪದೇ ಪದೇ ಯಾವ ರೀತಿಯ ಯೋಚನೆ ಮಾಡುತ್ತೇವೆಯೋ ಅದರಂತೆ ನಮ್ಮ ಪಾಲಿನ ಜಗತ್ತು ಸಹ ಸೃಷ್ಟಿಯಾಗುತ್ತಿರುತ್ತದೆ.
ಹಾಗಾಗಿ ನಾವು ಮನಸ್ಸಿನ ವಿಚಾರಗಳನ್ನು ಸದಾ ಗಮನಿಸುತ್ತೀರಬೇಕು. ವಿಚಾರಗಳು ದಾರಿ ತಪ್ಪಿದಾಗ ಅದಕ್ಕೆ ಸನ್ಮಾರ್ಗ ತೋರುತ್ತೀರಬೇಕು. ನಮ್ಮ ಮನಸ್ಸು ಇಂದ್ರಿಯಗಳಿಗೆ ಉತ್ತಮ ಸಂಗ ಮಾಡಿಸುತ್ತಿರಬೇಕು. ಆಗ ಹಂತ ಹಂತವಾಗಿ ಕೇವಲ ಸತ್ಯವಾಗಿರುವ ಪರ ಬ್ರಹ್ಮ ವೇ ನಮಗೆ ಎಲ್ಲಾ ಕಡೆ ಕಾಣಲು ಆರಂಭಿಸುತ್ತಾನೆ.
ಇಂದು ಜಗತ್ತನ್ನು ಕಾಣುತ್ತಿರುವ ಎಲ್ಲರೂ ಜಗತ್ತಿನಲ್ಲಿ ಅನ್ಯಾಯ, ಅನೀತಿ, ಅಶಾಂತಿ, ಅಧರ್ಮಗಳನ್ನೆ ಕಾಣುತ್ತಿದ್ದಾರೆ. ಇವುಗಳ ಖಂಡಿತ ನಾಶವಾಗುತ್ತವೆ.
ಅದಕ್ಕಾಗಿ ಮೊಟ್ಟ ಮೊದಲು ಮನಸ್ಸು ಎಂದರೆ ಏನು ?
ವಿಚಾರಗಳ ಮೂಲ ಏನು ?
ವಿಚಾರಗಳು ಯಾವುದರಿಂದ ನಿರ್ಮಿತವಾಗಿವೆ ?
ಎನ್ನುವ ಪ್ರಶ್ನೆ ನಮಗೆ ನಾವು ಮಾಡಿಕೊಳ್ಳಬೇಕು. ಆಗ ನಮಗೆ ದೊರಕುವ ಉತ್ತರವೇ,
ಮನಸ್ಸು ಒಂದು ಶಕ್ತಿ (ಬೆಳಕು).
ಶಕ್ತಿಯೇ (ಬೆಳಕು).ವಿಚಾರದ ಮೂಲ.
ಎಲ್ಲಾ ವಿಚಾರಗಳು ಶಕ್ತಿಯೇ (ಬೆಳಕು)..
ಹೀಗೆ ಎಲ್ಲೆಲ್ಲೂ ಶಕ್ತಿ (ಬೆಳಕು) ಕಾಣುವಾಗ ಜಗತ್ತು ಎಲ್ಲಿ ಉಳಿಯುತ್ತದೆ ?
ನಾವು ಯಾವುದನ್ನು ಮನಸ್ಸಿನಿಂದ ಕಾಣಲು ಆರಂಭಿಸುತ್ತೇವೆಯೋ ಹಂತ ಹಂತವಾಗಿ ನಾವು ಅದನ್ನು ಜಗತ್ತಿನಲ್ಲಿಯೂ ಕಾಣಲು ಆರಂಭಿಸುತ್ತೇವೆ. ಆಗ ಹಂತ ಹಂತವಾಗಿ ಸತ್ಯ ಯುಗವೇ ಆರಂಭವಾಗಲಿದೆ.
ಆಸಕ್ತಿಯಂತೆ ನಮ್ಮ ಮನಸ್ಸು ಕೆಲಸ ಮಾಡುತ್ತದೆ. ಆದ್ದರಿಂದ ಇದಕ್ಕಿಂತ ಮೊದಲು ಇದಕ್ಕಾಗಿ ಪರಮ ಸತ್ಯದ ಬಗ್ಗೆ ನಮ್ಮಲ್ಲಿ ಆಸಕ್ತಿ ಮೂಡಬೇಕು. ಆಗ ಸತ್ಯವನ್ನು ಅರಿಯುತ್ತೇವೆ. ಹಾಗೂ ಸತ್ಯದ ದೃಷ್ಟಿಕೋನ ಹೊಂದಲು ಅಭ್ಯಾಸ ಮಾಡುತ್ತೇವೆ. ಈ ಅಭ್ಯಾಸ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ.
ಇಂತಹ ಸತ್ಯದ ಆಸಕ್ತಿ ಎಲ್ಲರಲ್ಲಿ ಮೂಡಲಿ. ಎಲ್ಲೆಲ್ಲಿಯೂ ಸತ್ಯವನ್ನೇ ಕಾಣುವ ಅಭ್ಯಾಸ ಎಲ್ಲರಲ್ಲಿಯೂ ಆರಂಭವಾಗಲಿ ಎಂದು ಪ್ರಾರ್ಥಿಸುತ್ತೇನೆ.
ತಾವೆಲ್ಲರೂ ಸತ್ಯ ಯುಗದ ಆಕಾಂಕ್ಷಿಗಳಾಗುತ್ತೀರಿ, ಸತ್ಯದ ಆಸಕ್ತರಾಗುತ್ತೀರಿ, ಸತ್ಯವನ್ನು ಎಲ್ಲೆಲ್ಲೂ ಕಾಣುವ ಅಭ್ಯಾಸ ಮಾಡುತ್ತೀರಿ ಎಂದು ಆಶಿಸುತ್ತಾ, ಎಲ್ಲರಿಗೂ ವಂದನೆಗಳು
ಎಲ್ಲರಿಗೂ ಒಳ್ಳೆಯದಾಗಲಿ.
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ. ಯುಗ ಪರಿವರ್ತನೆಗೆ ನಾಂದಿ.
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ.)

Comments
Post a Comment