ದುಃಖ ಮತ್ತು ಭಯ


ದುಃಖ ಮತ್ತು ಭಯ ಇವುಗಳನ್ನು ನಾವು ಏನೆಂದು ತಿಳಿದಿದ್ದೇವೆ ? 


ದುಃಖ ಎಂದರೆ ಈಗ ಘಟಿಸುತ್ತಿರುವ ತೊಂದರೆ.

ಭಯ ಎಂದರೆ ಮುಂದೆ ಘಟಿಸುವ ದುಃಖ.


ಇವು ನಮ್ಮನ್ನು ಸದಾ ಕಾಡುತ್ತಲೇ ಇರುತ್ತವೆ.


ಇವುಗಳಿಂದ ನಾವು ಪಾರಾಗುವುದು ಹೇಗೆ ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುತ್ತದೆ.


ಇದಕ್ಕೆ ಅನೇಕ ಉಪಾಯಗಳು ಇದ್ದರೂ ಅದರಲ್ಲಿಯೇ ಉತ್ತಮ ಉಪಾಯ ಯೋಗ.


ಯೋಗವು ನಮ್ಮ ಭೂತ ಕರ್ಮಗಳನ್ನು ನಾಶ ಮಾಡುತ್ತದೆ. ಇದರಿಂದ ನಮ್ಮ ದುಃಖಗಳು ನಾಶ ಆಗುತ್ತವೆ. ಹಾಗೂ ನಾವು ಭವಿಷ್ಯದ ಭಯದಿಂದಲೂ ಪಾರಾಗುವ ಅವಕಾಶವಿದೆ.


ಯೋಗ: ಚಿತ್ತ ವೃತ್ತಿ ನಿರೋಧ :


ಈಗ ದುಃಖ ನೀಡುವುದು ಮನಸೇ. ಭವಿಷ್ಯದ ಭಯ ಉತ್ಪತ್ತಿ ಮಾಡುವುದು ಮನಸೇ. 


ಚಿತ್ತದ ವೃತ್ತಿಗಳಿಂದಲೇ ದುಃಖ ಮತ್ತು ಭಯ ಉಂಟಾಗುತ್ತದೆ. 


ನಾವು ಚಿತ್ತ ವೃತ್ತಿಗಳ ನಿರೋಧದಿಂದ ನಾವು ದುಃಖ ಮತ್ತು ಭಯಗಳಿಂದ ಪಾರಾಗಬಹುದು.


ಅಷ್ಟಾಂಗ ಯೋಗದ ಅಭ್ಯಾಸದಿಂದ ನಾವು ಸಧೃಡ ಆರೋಗ್ಯವಂತ ದೇಹವನ್ನು ಪಡೆಯುತ್ತೇವೆ ಹಾಗೂ ಆರೋಗ್ಯವಂತ ಮನಸ್ಸನ್ನು ಪಡೆಯುತ್ತೇವೆ.


ನಮ್ಮ ಅಮೂಲ್ಯವಾದ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ನೀಡಿದಲ್ಲಿ ಯಾವ ರೀತಿ ಬೆಂಕಿ ಎಲ್ಲವನ್ನು ಸುಟ್ಟು ಹಾಕುವುದು ಹಾಗೆ ಯೋಗವು ನಮ್ಮ ದುಃಖ ಭಯಗಳನ್ನು ಸಹ ನಾಶ ಮಾಡುತ್ತದೆ.


ಕಟ್ಟ ಕಡೆಯದಾಗಿ ಆತ್ಮ ಆಗಿರುವ ನಾವು ಪರಮಾತ್ಮನೊಂದಿಗೆ ಒಂದಾಗುವ ಅವಕಾಶವೂ ಯೋಗದ ಅಭ್ಯಾಸದಿಂದ ಸಾಧ್ಯ. 


ಆದ್ದರಿಂದ ದಿನದಲ್ಲಿ ಸ್ವಲ್ಪ ಸಮಯವಾದರೂ ಯೋಗಾಭ್ಯಾಸಕ್ಕೆ ಕೊಟ್ಟು ಅದರ ಲಾಭಗಳನ್ನು ಪಡೆಯೋಣ.


ಎಲ್ಲರಿಗೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

Comments

Popular posts from this blog

ಅಂಧ ಹೇಳವರು