ಜೀವನದಲ್ಲಿ ಪದೇ ಬರುವ ಕಷ್ಟಗಳಿಂದ ಪಾರಾಗುವುದು ಹೇಗೆ ?
ನನಗೆ ಈ ಮೊದಲು ಬಂದ ಕಷ್ಟಗಳೇ ಪದೇ ಪದೇ ಏಕೆ ಬರುತ್ತವೆ.
ನನ್ನ ಜೊತೆಗೆ ಈಗಾಗಲೇ ಘಟಿಸಿದ ಕೆಟ್ಟ ಘಟನೆಗಳು ಪುನಃ ಪುನಃ ಮತ್ತೆ ಘಟಿಸುತ್ತವೆ ಏಕೆ ?
ಕೆಟ್ಟ ರೀತಿಯಲ್ಲಿ ನಡೆದುಕೊಂಡ ಸ್ಥಳ ಬದಲಾಗಿದೆ. ಆ ವ್ಯಕ್ತಿಗಳು ಬದಲಾಗಿದ್ದಾರೆ. ಆದರೆ ಅದೇ ರೀತಿಯ ಕೆಟ್ಟ ಘಟನೆ ಮತ್ತೆ ಏಕೆ ಘಟಿಸುತ್ತಿದೆ ?
ಈ ರೀತಿ ಯೋಚನೆಗಳು ನಮ್ಮಲ್ಲಿ ಅನೇಕ ಬಾರಿ ಬರಬಹುದು. ಯಾಕೆ ಹೀಗೆ ಆಗುತ್ತದೆ. ಇದಕ್ಕೆ ಕಾರಣವೇನು ?
ನಮ್ಮ ಜೀವನದಲ್ಲಿ ಒಂದು ರೀತಿಯ ಕೆಟ್ಟ ಘಟನೆಗಳು ಪದೇ ಪದೇ ಮರುಕಳಿಸುತ್ತವೆ. ಇದಕ್ಕೆ ನಾವು ವ್ಯಕ್ತಿಗಳನ್ನು ಸಮಾಜವನ್ನು ಪರಿಸ್ಥಿತಿಯನ್ನು ದೂಷಿಸುತ್ತೇವೆ. ಆದರೆ ಆ ರೀತಿಯ ಘಟನೆ ನಿರಂತರ ಘಟಿಸಲು ಬೇರೆಯವರು ಕಾರಣವಲ್ಲ. ದೇವರು ಸಹ ಕಾರಣವಲ್ಲ. ಅದಕ್ಕೆ ಕಾರಣ ನಾವೇ.
ಈ ಜಗತ್ತನ್ನು ಬ್ರಹ್ಮ, ವಿಷ್ಣು, ಮಹೇಶ್ವರ, ಅಲ್ಲಾಹ್, ಜೀಸಸ್ ದೇವರು ಭಗವಂತ ನಡೆಸುವದಕ್ಕಿಂತ ಒಂದು ನಿಯಮ ಈ ಜಗತ್ತನ್ನು ನಡೆಸುತ್ತಿದೆ.
ಅದುವೇ ಕಾರಣ ಮತ್ತು ಪರಿಣಾಮ ನಿಯಮ. CAUSE AND EFFECT RULE.
ನಮ್ಮ ಜೀವನದಲ್ಲಿ ಯಾರಿಂದಲಾದರೂ ಯಾವುದಾದರೂ ಕೆಟ್ಟ ಘಟನೆ ನಡೆದಾಗ ನಮ್ಮ ಮನಸ್ಸಿನ ಮೇಲೆ ಬಹಳ ಆಘಾತ ಆಗುತ್ತದೆ. ಈ ಕಾರಣದಿಂದ ಆ ಘಟನೆ ನಮಗೆ ಪದೇ ಪದೇ ನೆನಪಿಗೆ ಬರುತ್ತದೆ. ನೆನಪಿಗೆ ಬಂದಾಗ ಆ ನೋವುಗಳು, ಆ ದುಃಖ, ಆ ಭಯ, ಅವರ ಬಗ್ಗೆ ಆ ದ್ವೇಷದ ಭಾವನೆಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಆಗ ನಾವು ಆ ದುಃಖ ನೋವು ಕಷ್ಟದ ಅನುಭವಗಳನ್ನು ಮತ್ತೆ ಮತ್ತೆ ಅನುಭವಿಸುತ್ತಾ ಅವುಗಳನ್ನು ನಮ್ಮ ಮನಸ್ಸಿನಿಂದ ನಿರಂತರ ಹೊರಗೆ ಹಾಕುತ್ತೇವೆ.
ಆಗ ನಮ್ಮಿಂದ ಕೆಟ್ಟ ತರಂಗಗಳು ಜಗತ್ತಿಗೆ ಬಿಡುಗಡೆ ಆಗಿ, ಈ ಕೆಟ್ಟ ತರಂಗಗಳು ಪುನಃ ನಮಗೆ ಕೆಟ್ಟ ಅನುಭವಗಳನ್ನೇ ಜಗತ್ತಿನಿಂದ ನಮ್ಮ ಜೀವನದಲ್ಲಿ ತರುತ್ತವೆ. ಹೀಗಾಗಿ ಪದೇ ಪದೇ ಒಂದೇ ರೀತಿಯ ಕೆಟ್ಟ ಘಟನೆಗಳು ನಮ್ಮ ಜೀವನದಲ್ಲಿ ಘಟಿಸುತ್ತವೆ.
ಇದಕ್ಕೆ ಪರಿಹಾರವೇನು ?
1. ನಮ್ಮ ಜೀವನದಲ್ಲಿ ಕೆಟ್ಟ ಘಟನೆಗಳು ಪದೇ ಪದೇ ನೆನಪಿಗೆ ಬಂದಾಗ ಅವುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಶಾಂತ ರೀತಿಯಿಂದ ಅವುಗಳನ್ನು ನೋಡುತ್ತಾ ಅವುಗಳು ನಮಗೆ ಸಂಬಂಧವೇ ಇಲ್ಲ ಎಂದು ಭಾವಿಸಿ, ಅವುಗಳನ್ನು ನಮ್ಮ ಮನಸ್ಸಿನಿಂದ ಹಾದು ಹೋಗಲು ಬಿಡಬೇಕು.
2. ಯಾರಿಂದ ನಮಗೆ ಕೆಟ್ಟ ಅನುಭವಗಳು ಆಗಿವೆ, ಅವರನ್ನು ಕ್ಷಮಿಸಿ ಬಿಡಬೇಕು. ಮತ್ತು ಕೆಟ್ಟ ಘಟನೆ ಮರೆತು ಬಿಡಬೇಕು.
3. ಕೆಟ್ಟ ಘಟನೆ ನೆನಪಿಗೆ ಬಂದಾಗ ಅವುಗಳಿಗೆ ಸಂತೋಷದ ಪ್ರತಿಕ್ರಿಯೆ ಕೊಡಬೇಕು.
4. ಇವುಗಳನ್ನು ಮಾಡಲು ಸಾಧ್ಯವಾಗಲಿಲ್ಲ ಅಂದರೆ ದೇವರಿಗೆ ಗುರುಗಳಿಗೆ ಸಂಪೂರ್ಣ ಶರಣಾಗಿ ನಮ್ಮ ಮನಸನ್ನು ಸನ್ಮಾರ್ಗದಲ್ಲಿ ನಡೆಸಲು ಪ್ರಾರ್ಥನೆ ಮಾಡಬೇಕು.
✍️ URAIN NAMAH
(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ )

Comments
Post a Comment