ಚಿತ್ತ ವೃತ್ತಿ ನೀರೋಧ
ಚಿತ್ತದ ವೃತ್ತಿಗಳ ಬಗ್ಗೆ ನಿನ್ನೆ ಹೇಳಿದ್ದೆ.
ಚಿತ್ತ, ಅಂದರೆ ನಮ್ಮ ಅಂತರಂಗ ಐದು ಕೆಲಸಗಳನ್ನು ಮಾಡುತ್ತದೆ.
1. ಸರಿ, ತಪ್ಪುಗಳ ಕುರಿತು ವಿಚಾರ
2. ಸುಳ್ಳು ವಿಚಾರ (ಅಜ್ಞಾನ)
3. ಕಲ್ಪನೆಗಳನ್ನು ಮಾಡುತ್ತದೆ
4. ನೆನಪುಗಳನ್ನು ಮಾಡುತ್ತದೆ
5. ನಿದ್ರೆ ಮಾಡುತ್ತದೆ
ಇವುಗಳನ್ನು ಚಿತ್ತ ವೃತ್ತಿಗಳು ಎಂದು ಕರೆಯಲಾಗಿದೆ. ಗಾಢ ನಿದ್ರೆ ಹೊರತುಪಡಿಸಿ ಇವುಗಳಿಂದಲೇ ನಮ್ಮ ಮನಸ್ಸು ಅಶಾಂತವಾಗುತ್ತದೆ.
ಇವುಗಳ ಕೆಲಸ ನಿಲ್ಲುವಂತೆ ಮಾಡಿ ಮನಸ್ಸನ್ನು ಶಾಂತಗೊಳಿಸುವುದೇ ಯೋಗದ ಮುಖ್ಯ ಉದ್ದೇಶ.
ಅದುವೇ, ಯೋಗ: ಚಿತ್ತ ವೃತ್ತಿ ನಿರೋಧ: .
ಇದರಿಂದ ಮಾತ್ರ ಮನುಷ್ಯ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ.
ಎಷ್ಟೇ ಶ್ರೀಮಂತನಾಗಿರಲಿ, ಎಷ್ಟೇ ಅಧಿಕಾರವಿರಲಿ, ಯಶಸ್ಸು, ಕೀರ್ತಿ ಏನೇ ಇದ್ದರೂ ಮನಸ್ಸು ಶಾಂತವಿಲ್ಲದಿದ್ದರೆ ಆತನಿಗೆ ಸುಖವಿಲ್ಲ.
ಮನಸ್ಸನ್ನು ಶಾಂತಗೊಳಿಸುವುದು, ಚಿತ್ತ ವೃತ್ತಿ ನಿಲ್ಲುಸುವುದೇ ಯೋಗದ ಉದ್ದೇಶ.
ಇದರಿಂದ ವ್ಯಕ್ತಿ ದುಃಖ ಭಯ ರಹಿತನಾಗುತ್ತಾನೆ..
Comments
Post a Comment