ಮಕರ ಸಂಕ್ರಾಂತಿ
ಹಿಂದಿಯಲ್ಲಿ ಹೇಳುತ್ತಾರೆ, ಏನೆಂದರೆ
"ದಾನೆ ದಾನೆ ಪೆ ಲಿಖಾ ಹೇ ಖಾನೆವಾಲೇ ಕಾ ನಾಮ"
ಅಂದರೆ ಒಂದು ಕಾಳು, ಕಾಳಿನ ಮೇಲೆ ಅದನ್ನು ತಿನ್ನುವವರ ಹೆಸರು ಬರೆಯಲಾಗಿದೆ.
ನನ್ನ ದೇಹದ ಹೆಸರು ಸೂರ್ಯ ನಾರಾಯಣ ಇರುವುದು ಹಾಗೂ ನಾನು ಸೂರ್ಯ ನಾರಾಯಣ ದೇವರ ಆರಾಧನೆ ಮಾಡುವುದು, ಕಾಕತಾಳೀಯ.
ಈ ಆರಾಧನೆಗೆ ನನ್ನ ಪೂಜ್ಯ ಗುರುದೇವರ ಮಾರ್ಗದರ್ಶನ ಕಾರಣ. ಶರೀರ ಬಹಳಷ್ಟು ಅನಾರೋಗ್ಯದಿಂದ ಕೂಡಿರುವ ಸಮಯಕ್ಕೆ ಪೂಜ್ಯ ಗುರುದೇವರ ಮಾರ್ಗದರ್ಶನ ನನಗೆ ದೊರೆಯಿತು. ಅದೇನೆಂದರೆ ಸೂರ್ಯ ದೇವರು ಆರೋಗ್ಯದ ದೇವರು, ಅವರ ಆರಾಧನೆಯಿಂದ ಬುದ್ದಿ ತೀಕ್ಷ್ಣವಾಗುತ್ತದೆ ಹಾಗೂ ಅವರ ಆರಾಧನೆ ಮಾಡುವವರು ಎಂದಿಗೂ ಬಡತನದಿಂದ ಉಪವಾಸ ಇರುವುದಿಲ್ಲ" ಎನ್ನುವ ಮಾರ್ಗದರ್ಶನ ಪಡೆದುಕೊಂಡೆ.
ಒಂದೇ ಸಮನೆ ಆರೋಗ್ಯದ ಇಚ್ಛೆ ಹಾಗೂ ಆಳವಾದ ನಂಬಿಕೆಯಿಂದ ನಾನು ಸೂರ್ಯ ದೇವರ ಆರಾಧನೆ ಮಾಡಲು ಆರಂಭಿಸಿದೆ (ಇದಕ್ಕು ಮೊದಲು ಸೂರ್ಯ ದೇವರನ್ನು ಕೇವಲ ನಮಸ್ಕಾರ ಮಾಡುತ್ತಿದ್ದೆ).
ಜಗತ್ತಿನಲ್ಲಿ ಅದೆಷ್ಟೋ ಜನ ತಮಗೆ ಬಂದ ರೋಗದ ಕಷ್ಟವನ್ನು ಸಹಿಸಲಾಗದೆ, ಸಾವು ಬರದೇ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ..
ಆದರೆ ಮಹಾಭಾರತದ ಯುದ್ಧದಲ್ಲಿ ಭೀಷ್ಮರ ದೇಹದ ತುಂಬೆಲ್ಲಾ, ಬಾಣಗಳು ಚುಚ್ಚಿರುತ್ತವೆ. ಹಾಗೂ ಭೀಷ್ಮರಿಗೆ ಬಯಸಿದಾಗ ಸಾಯುವ "ಇಚ್ಛಾ ಮೃತ್ಯು"ವಿನ ವರದಾನ ಇರುತ್ತದೆ.
ಆದರೂ ಸಹ ವರವನ್ನು ಉಪಯೋಗಿಸಿ ಕಷ್ಟದಿಂದ ಪಾರಾಗಲು ಬಾಣಗಳು ಚುಚ್ಚಿದ ಕೂಡಲೇ ಸಾಯಬೇಕು, ಎನ್ನುವ ನಿರ್ಧಾರ ಮಾಡುವುದಿಲ್ಲ.
ಶರೀರದ ತುಂಬೆಲ್ಲಾ ಬಾಣಗಳ ನೋವನ್ನು ಕ್ಷಣ ಕ್ಷಣವೂ ಸಹಿಸುತ್ತಲೇ, ಸಂಕ್ರಾಂತಿಯ ದಿನ ಬರುವುದನ್ನೇ ಕಾಯುತ್ತಿರುತ್ತಾರೆ.
ಸಂಕ್ರಾಂತಿಯ ದಿನ ಬಂದ ನಂತರ ತಮ್ಮ ಪ್ರಾಣವನ್ನು ಬಿಡುತ್ತಾರೆ.
ಈ ಒಂದು ಘಟನೆ ಸಂಕ್ರಾಂತಿಯ ಮಹತ್ವ ಏನು? ಅನ್ನುವುದನ್ನು ಸಾರುತ್ತದೆ.
ಸಂಕ್ರಾಂತಿಯು ಶ್ರೇಷ್ಠ ಪುಣ್ಯಕಾಲ. ಹೀಗಾಗಿ ದೇಹವೆಲ್ಲ ನೋವಿನಿಂದ ಕೂಡಿದ್ದರೂ ಭೀಷ್ಮರು ಸಂಕ್ರಾಂತಿಯ ಪುಣ್ಯ ಕಾಲಕ್ಕಾಗಿ ಕಾಯುತ್ತಿದ್ದರು.
ಒಂದು ದೊಡ್ಡ ಬದಲಾವಣೆಯನ್ನು ಕ್ರಾಂತಿ ಎಂದು ಕರೆಯುತ್ತಾರೆ. ವರ್ಷಕ್ಕೊಮ್ಮೆ ಪ್ರಕೃತಿಯಲ್ಲಿ ಆಗುವ ದೊಡ್ಡ ಕ್ರಾಂತಿಯೇ ಸಂಕ್ರಾಂತಿ.
ನೇರವಾಗಿ ನಡೆಯುವ ನಾವು, ಅಥವಾ ನೇರವಾಗಿ ನಡೆಯುವ ಒಂದು ವಾಹನ ಯಾವುದೇ ದಿಕ್ಕಿಗೆ ತಿರುಗಿದರೆ ಇಡೀ ದೇಹ ಅಥವಾ ಇಡೀ ವಾಹನವೇ ಹೆಚ್ಚು ಕಂಪನವನ್ನು ಅನುಭವಿಸುತ್ತದೆ.
ಸಂಕ್ರಾಂತಿಯಂದು ನಮಗೆ ಅಥವಾ ಭೂಮಿಗೆ ಮಾತ್ರವಲ್ಲ, ಎಲ್ಲಾ ಒಂಭತ್ತು ಗ್ರಹಗಳಿಗೂ ಕೇಂದ್ರ ಆಗಿರುವ ಸೂರ್ಯದೇವ, ಧನು ರಾಶಿಯಿಂದ ಮಕರ ರಾಶಿಗೆ ತಿರುಗುತ್ತಾರೆ. ಆಗ ಇಡೀ ಸೃಷ್ಟಿಯಲ್ಲಿ ದೊಡ್ಡ ಕಂಪನ ಆಗುತ್ತದೆ.
ಇದು ವೈಜ್ಞಾನಿಕ ಸತ್ಯ.
ಧಾರ್ಮಿಕರು ಈ ಕಾರಣಕ್ಕಾಗಿಯೇ ಇದನ್ನು ಶ್ರೇಷ್ಠ ಪುಣ್ಯ ಕಾಲ ಎಂದು ಕರೆಯುತ್ತಾರೆ.
ಆದ್ದರಿಂದಲೇ ಈ ದಿನ ಮಾಡುವ ನದಿ ಸ್ನಾನ, ದಾನ, ಧರ್ಮ, ಜಪ, ತಪ, ಪೂಜೆ ಹೋಮ ಹವನ ಅನಂತ ಪಟ್ಟು ಪುಣ್ಯ ಫಲವನ್ನು ಕೊಡುತ್ತದೆ.
ಈ ದಿನ ಸೂರ್ಯ ದೇವನೇ ಕೇಂದ್ರ ಬಿಂದು. ಇಂದು ಸೂರ್ಯ ದೇವನ ಆರಾಧಿಸಿ ಜಲ ಸಮರ್ಪಣೆ ಮಾಡಿದರೆ ಅನಂತ ಪಟ್ಟು ಪುಣ್ಯ ಲಭಿಸುತ್ತದೆ.
ಆದ್ದರಿಂದ ಈ ದಿನದ ಲಾಭವನ್ನು ನಾವು ಪಡೆದುಕೊಳ್ಳೋಣ.
ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪುಣ್ಯ ದ ಕೆಲಸಗಳನ್ನು ಮಾಡೋಣ.
ಸೂರ್ಯ ದೇವನಿಗೆ ಆರಾಧಿಸಿ ಆತನು ನಮಗೆ ಮಾಡುವ ಉಪಕಾರ ಕ್ಕೆ ಧನ್ಯವಾದ ಅರ್ಪಿಸಿ, ಆತನ ಈ ವಿಶೇಷ ದಿನದ ವಿಶೇಷ ಕೃಪೆಗೆ ಪಾತ್ರರಾಗೋಣ.
ಈ ಶ್ರೇಷ್ಠ ಪುಣ್ಯ ದಿನದ ಲಾಭವನ್ನು ನಾವು ಪಡೆದುಕೊಳ್ಳೋಣ.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
✍️. URAIN NAMAH
ಸೂರ್ಯ ನಾರಾಯಣ ಜಿ ಚಿಮ್ಮನಚೋಡಕರ್

Comments
Post a Comment