ಹಣೆಬರಹ ? ಪ್ರಯತ್ನ ?
ಮನುಷ್ಯನ ಹಣೆಬರಹದಂತೆ ನಡೆಯುವುದು "ಸಂಪೂರ್ಣ ಸುಳ್ಳು" ಎಂದು ಹೇಳಲು ಬರುವುದಿಲ್ಲ.
ಹಾಗೂ ಮನುಷ್ಯನ ಹಣೆಬರಹದಂತೆ ನಡೆಯುವುದು "ಸಂಪೂರ್ಣ ಸತ್ಯ" ಎಂದು ಹೇಳಲು ಬರುವುದಿಲ್ಲ.
ಉದಾಹರಣೆಗೆ: ಗಿಡ ಮರಗಳಿಗೆ ಜೀವನ ಇದೆ. ಆದರೆ ಅವುಗಳು ನಮ್ಮಂತೆ ಇಚ್ಛಿಸಿದಾಗ ಕೂಡಲು ಬರುವುದಿಲ್ಲ. ನಡೆದಾಡಲು ಬರುವುದಿಲ್ಲ.
ಆದ್ದರಿಂದ ಗಿಡ ಮರಗಳು, ಪ್ರಾಣಿಗಳು, ಅನ್ಯ ಕೆಳ ಮಟ್ಟದ ಜೀವಿಗಳಲ್ಲಿ 100 ಕ್ಕೆ 99% ಹಣೆಬರಹ ಕೆಲಸ ಮಾಡುತ್ತದೆ.
ಕಾರಣ ಇವುಗಳಿಗೆ ತಮ್ಮ ಇಚ್ಛೆಯಂತ ಕೆಲಸ ಮಾಡುವ, "ಇಚ್ಛೆಯ ಸ್ವಾತಂತ್ರ್ಯ ಇಲ್ಲ".
ಪ್ರಾಣಿಗಳಲ್ಲಿ ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ಒಂದು ಹುಲಿಗೆ ಬೇಟೆ ಸಿಗದೆ ಇದ್ದರೆ ಹಸಿವಿನಿಂದ ಸಾಯುತ್ತದೆ ಹೊರತು ಹುಲ್ಲನ್ನು ತಿನ್ನುವುದಿಲ್ಲ.
ಅದೇ ರೀತಿ ಒಂದು ಆಕಳಿಗೆ ಹುಲ್ಲು ಸಸ್ಯಾಹಾರ ಸಿಗದೆ ಇದ್ದರೆ ಜೀವ ಬಿಡುತ್ತದೆ ಹೊರತು ಬೇರೆ ಪ್ರಾಣಿ ಕೊಂದು ಮಾಂಸ ತಿನ್ನುವುದಿಲ್ಲ.
ಕಾರಣ ಇವುಗಳಿಗೆ ಇಚ್ಛಾ ಸ್ವಾತಂತ್ರ್ಯ ಇಲ್ಲ.
ಆದರೆ ಮನುಷ್ಯ ಜನ್ಮದ ಶ್ರೇಷ್ಠತೆ ಇರುವುದೇ ಇಲ್ಲಿ. ಮನುಷ್ಯನಿಗೆ ಕೆಲವು ಸಮಯದಲ್ಲಿ ಇಚ್ಛಾ ಸ್ವಾತಂತ್ರ್ಯ ಇರುವುದಿಲ್ಲ. ಆದರೆ ಕೆಲವು ಸಮಯದಲ್ಲಿ ಇಚ್ಛೆ ಸ್ವಾತಂತ್ರ್ಯ ಇರುತ್ತದೆ.
ಎಲ್ಲಿ ಇಚ್ಛೆ ಸ್ವಾತಂತ್ರ್ಯ ಇಲ್ಲವೋ ಅದು 100ಕ್ಕೆ 100 ಸಂಪೂರ್ಣ ನಮ್ಮ ಹಣೆಬರಹ.
ಉದಾಹರಣೆಗೆ, ಬಡತನದಲ್ಲಿರುವವರು ಕೆಲಸ ಮಾಡುವುದು. ಆತ ಇಚ್ಛೆ ಇದ್ದರೂ ಕೆಲಸ ಮಾಡಬೇಕು. ಇಲ್ಲದಿದ್ದರೂ ಮಾಡಬೇಕು, ಅದು ಹಣೆಬರಹ.
ಎಲ್ಲಿ ಇಚ್ಛಾ ಸ್ವಾತಂತ್ರ್ಯ ಇದೆಯೋ ಅದು 100ಕ್ಕೆ 100 ಹಣೆಬರಹವಲ್ಲ.
ಉದಾಹರಣೆಗೆ ಶ್ರೀಮಂತರಾದವರು ಮೋಜಿನಲ್ಲಿ ಕಾಲ ಕಳೆಯುವುದು.
ಆದರೆ ಬಡವನಿರಲಿ, ಶ್ರೀಮಂತರಿರಲಿ ಎಲ್ಲಾ ಮನುಷ್ಯರಿಗೂ ಒಂದು ವರದಾನ ಇದೆ.
ಅದೆಂದರೆ ಮನುಷ್ಯರಾಗಿರುವ ನಮಗೆ ದಿನದಲ್ಲಿ ಕನಿಷ್ಠ ಸ್ವಲ್ಪ ಸಮಯವಾದರೂ ಇಚ್ಛಾ ಸ್ವಾತಂತ್ರ್ಯದ ಸಮಯ ಸಿಕ್ಕೆ ಸಿಗುತ್ತದೆ.
ಆದರೆ ಅದನ್ನು ನಾವು ಸರಿಯಾದ ಒಳ್ಳೆಯ ಕೆಲಸಕ್ಕಾಗಿ ಬಳಸದೆ, ವ್ಯರ್ಥವಾಗಿ ಕಳೆಯುತ್ತೇವೆ ಅಥವಾ ಕೆಟ್ಟ ಕೆಲಸ ಮಾಡುತ್ತೇವೆ ಅಥವಾ ಮನರಂಜನೆಗೆ ಬಳಸುತ್ತೇವೆ.
ಜಗತ್ತಿನಲ್ಲಿ ಆಗಿರುವ ಮಹಾನ್ ವ್ಯಕ್ತಿಗಳು ತಮ್ಮ ಇಚ್ಛಾ ಸ್ವಾತಂತ್ರ್ಯ ದ ಸಮಯವನ್ನು ಶ್ರೇಷ್ಠ ಕೆಲಸಕ್ಕಾಗಿ ಬಳಸಿಯೇ ಶ್ರೇಷ್ಠ ವ್ಯಕ್ತಿಗಳಾಗಿ ಹೋಗಿದ್ದಾರೆ.
ನಾವು ಕೇವಲ ನಮ್ಮ ಹಣೆಬರಹ ಎಂದು ಕೂಡದೆ ನಮ್ಮ ಬಿಡುವಿನ ಸಮಯದಲ್ಲಿ ಶ್ರೇಷ್ಠ ಕೆಲಸ ಮಾಡಿ ಮನುಷ್ಯ ಜನ್ಮ ಸಾರ್ಥಕಪಡಿಸಿಕೋಳ್ಳೋಣ.
Comments
Post a Comment