ಮನಸ್ಸು ಸಣ್ಣ ಕಥೆ


ಒಬ್ಬ ಕಡು ಬಡತನದಲ್ಲಿರುವ ವ್ಯಕ್ತಿಗೆ ಹಳೆಯ ದೀಪ ಸಿಕ್ಕಿತ್ತು. ಕುತೂಹಲದಿಂದ ಅದನ್ನು ಉಜ್ಜಿದಾಗ ಅದರಿಂದ ಒಂದು ದೊಡ್ಡ ಭೂತ ಹೊರಬಂದು, ಯಜಮಾನನೇ ನಿನಗೆ ಏನು ಬೇಕು? ಎಂದು ಕೇಳಿಕೊ, ನಿನ್ನ ಎಲ್ಲಾ ಕೆಲಸಗಳನ್ನು ನಾನು ಮಾಡಿಕೊಡುತ್ತೇನೆ.


ಆದರೆ ಒಂದು ಶರತ್ತು, ಏನೆಂದರೆ "ನೀನು ನನಗೆ ನಿರಂತರ ಏನಾದರೂ ಕೆಲಸ ಕೋಡುತ್ತೀರಬೇಕು,  ಇಲ್ಲದಿದ್ದರೆ ನಾನು ನಿನ್ನನ್ನೇ ತಿನ್ನುತ್ತೇನೆ" ಎಂದು ಹೇಳುತ್ತದೆ.


ಆಗ ಬಡವ ತನಗೆ ಬೇಕಾದ ಎಲ್ಲಾ ಕೆಲಸ ಮಾಡಿಕೊಂಡು ಮಹಾರಾಜನಂತೆ ಆದ. ಅವನ ಎಲ್ಲಾ ಅವಶ್ಯಕತೆ ಪೂರ್ಣ ಆದಕಾರಣ ಆ ಭೂತಕ್ಕೆ ಹೇಳಲು ಆತನಲ್ಲಿ ಯಾವುದೇ ಕೆಲಸ ಇರಲಿಲ್ಲ. ಆಗ ಆ ಭೂತ ಆತನನ್ನೆ ತಿನ್ನಲು ಮುಂದಾಯಿತು. 


ಆಗ ಆತ ಭೂತದಿಂದ ಹೇಗೋ ತಪ್ಪಿಸಿಕೊಂಡು ಋಷಿಯ ಹತ್ತಿರ ಹೋಗಿ, ಭೂತಕ್ಕೆ ಯಾವ ಕೆಲಸ ಹೇಳಲಿ ? ನನ್ನ ಎಲ್ಲಾ ಕೆಲಸ ಮುಗಿದಿವೆ, ಎಂದು ಹೇಳಿದ. 


ಆಗ ಋಷಿ ಬಹಳ ಎತ್ತರವಾದ‌ ಒಂದು ಕಂಬವನ್ನು ತಂದು ನಿನ್ನ ಅರಮನೆ ಮುಂದೆ ಹೂಳಲು ಹೇಳು. ನಂತರ ಆ ಭೂತಕ್ಕೆ ಕಂಬವನ್ನು ಏರುವ, ಮತ್ತೆ ಕಂಬದಿಂದ ಇಳಿಯುವ ಕೆಲಸ ಮಾಡಲು ಹೇಳು. ಆಗ ನೀನು ಅಪಾಯದಿಂದ ಪಾರಾಗುವೆ ಎಂದು ಹೇಳುತ್ತಾನೆ.


ಅದರಂತೆ ಆ ವ್ಯಕ್ತಿ ಭೂತಕ್ಕೆ ಕಂಬವನ್ನು ಏರುವ ಇಳಿಯುವ ಕೆಲಸವನ್ನು ಕೊಟ್ಟು, ಭೂತದ ಅಪಾಯದಿಂದ ಪಾರಾಗುತ್ತಾನೆ.


ಆ ಭೂತ ಕೇವಲ ಆ ಬಡವನ ಹತ್ತಿರ ಮಾತ್ರ ಇಲ್ಲ. ನಮ್ಮ ಹತ್ತಿರವು ಇದೆ. ಆ ಭೂತವನ್ನು ನಾವು ಮನಸ್ಸು ಎಂದು ಕರೆಯುತ್ತೇವೆ. 


ಮನಸ್ಸು ನಾವು ಹೇಳುವ ಎಲ್ಲಾ ಕೆಲಸಗಳನ್ನು ಮಾಡುತ್ತದೆ. ಒಂದು ವೇಳೆ ಮನಸ್ಸಿಗೆ ನಾವು ಯಾವುದೇ ಕೆಲಸ ಕೊಡದೆ ಸುಮ್ಮನೆ ಬಿಟ್ಟರೆ, ಅನಾವಶ್ಯಕ, ಇಲ್ಲಸಲ್ಲದ ಎಲ್ಲಾ ಯೋಚನೆಗಳನ್ನು ಮಾಡಿ ನಮ್ಮನ್ನೇ ಅನೇಕ ಸಮಸ್ಯೆಗಳಲ್ಲಿ, ದುಃಖಗಳಲ್ಲಿ ಬೀಳಿಸುತ್ತದೆ. 


ಆದ್ದರಿಂದ ನಮ್ಮ ಮನಸ್ಸಿಗೂ, ಭೂತದಂತೆ ಕಂಬ ಏರುವ ಮತ್ತು ಇಳಿಯುವ ಕೆಲಸವನ್ನು ಕೊಡೋಣ.


 ಮಂತ್ರ ಜಪ ಮಾಡುವುದು ಮನಸ್ಸೆಂಬ ಭೂತಕ್ಕೆ ಕಂಬ ಏರುವ ಮತ್ತು ಇಳಿಯುವ ಕೆಲಸ ಹಾಗೆಯೇ ಇದೆ. 


ಆದ್ದರಿಂದ ಮನಸ್ಸಿಗೆ ಜಪ ಅಥವಾ ಸೂಚನೆಗಳ ಇನ್ನಿತರ ಯಾವುದಾದರೂ ಕೆಲಸ ಕೊಡೋಣ. ಇಲ್ಲದಿದ್ದರೆ ಮನಸ್ಸು ಎನ್ನುವ ಭೂತ ನಮ್ಮನ್ನೇ ತಿಂದು ಬಿಡುತ್ತದೆ.


EMPTY MIND IS DEVIL SHOP


Mind is our best friend, if it is in our control.


Mind will be our worst enemy, if we are control of it.

Comments

Popular posts from this blog

ಅಂಧ ಹೇಳವರು