ಪರಾತ್ಪರ ಪರಬ್ರಹ್ಮ ಪರಮಾತ್ಮ ಪ್ರಣವ ನಾದ ಓಂಕಾರ


ಒಂದು ಪ್ರಯೋಗ ಮಾಡಿ. ಒಂದು ಮೂಗಿನ ಹೊಳ್ಳೆಯನ್ನು ಮುಚ್ಚಿ, ನಿಧಾನವಾಗಿ, ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ.


ನಂತರ ಮೆಲ್ಲಗೆ ಇನ್ನೊಂದು ಹೊಳ್ಳೆಯಿಂದ ನಿಧಾನವಾಗಿ ಉಸಿರನ್ನು ಹೊರಗೆ ಬಿಡಿ. 


ನೀವು ಏನನ್ನು ಗಮನಿಸಿದಿರಿ. 


ಉಸಿರನ್ನು ತೆಗೆದುಕೊಳ್ಳುವಾಗ ನಮಗೆ "ಸೋ" ಎನ್ನುವ ಶಬ್ದ ಕೇಳುತ್ತದೆ. 


ಉಸಿರನ್ನು ಬಿಡುವಾಗ  "ಹಂ" ಎನ್ನುವ ಶಬ್ದ ಕೇಳುತ್ತದೆ.


ಎರಡು ಉಸಿರು ಕೂಡಿದ ಶಬ್ಧವೇ "ಸೋಹಂ". ಸೋಹಂ ಶಬ್ದದಲ್ಲಿ ಸ್ ಮತ್ತು ಹ್ ಇವುಗಳು ವ್ಯಂಜನ. ಈ ವ್ಯಂಜನಗಳನ್ನು ಬಿಟ್ಟು ನೋಡಿದಾಗ ಸೋಹಂ ಶಬ್ದದಲ್ಲಿರುವ ಸ್ವರ ಆಕ್ಷರಗಳನ್ನು ನೋಡಿದಾಗ ಇಲ್ಲಿರುವುದೇ ಓ ಮತ್ತು ಅಂ. ಅದುವೇ ಪರಾತ್ಪರ ಪರಬ್ರಹ್ಮ ಪರಮಾತ್ಮ ಓಂಕಾರ.


ಒಬ್ಬ ವ್ಯಕ್ತಿ ಹಿಂದೂ ಆಗಿರಲಿ, ಮುಸ್ಲಿಂ ಇರಲಿ, ಕ್ರಿಶ್ಚಿಯನ್ ಇರಲಿ ಎಲ್ಲರೂ ತಮಗೆ ತಿಳಿಯದೆ ಓಂಕಾರವನ್ನು ಜಪಿಸುತ್ತಾರೆ.


ಉಸಿರೇ ಜೀವನ. ಈ ಜೀವನವನ್ನು ನಡೆಸುತ್ತಿರುವವರೇ ಪರಾತ್ಪರ ಪರಬ್ರಹ್ಮ, ಪರಮಾತ್ಮ ಓಂಕಾರ. ಎಲ್ಲರ ಪ್ರತಿಯೊಂದು ಉಸಿರಿನಲ್ಲಿಯೂ ಓಂಕಾರವೇ ಇದೆ. 


ಇದಕ್ಕಾಗಿಯೇ ಎಲ್ಲಾ ಆರಾಧನೆಗಳನ್ನು ಓಂಕಾರದಿಂದ ಆರಂಭಿಸುತ್ತಾರೆ. 


ಹಿಂದೂಗಳು ಈ ನಾದವನ್ನೆ ಓಂ ಎಂದು ಕರೆದರೆ. 

ಮುಸ್ಲಿಂರು  ಆಮೀನ ಎನ್ನುತ್ತಾರೆ. 

ಕ್ರಿಶ್ಚಿಯನ್ನರು ಆಮೇನ ಎನ್ನುತ್ತಾರೆ. 


ಓಂಕಾರ ಮೂರು ಅಕ್ಷರಗಳನ್ನು ಕೂಡಿ ಆಗಿದೆ. ಅವುಗಳೇ ಅ ಉ ಮ. ಇವುಗಳ ಬಗ್ಗೆ ವಿಡಿಯೋ ದಲ್ಲಿ ಕೇಳಿದ್ದೀರಿ. 


ಅ ಅಂದರೆ ಆದಿ. ( ಸೃಷ್ಠಿ, ಬ್ರಹ್ಮ) 

ಉ ಅಂದರೆ ಮಧ್ಯ ( ಪಾಲನೆ, ವಿಷ್ಣು) 

ಮ ಅಂದರೆ ಅಂತ್ಯ (ಸಂಹಾರ, ಶಿವ)


ಅ ಅಕ್ಷರ ಒಳಗಿನಿಂದ ಬರುತ್ತದೆ. 

ಉ ಗಂಟಲಿನಿಂದ ಬರುತ್ತದೆ. 

ಮ ತುಟಿಯ ಕೊನೆಯಿಂದ ಬರುತ್ತದೆ. 


ಜಗತ್ತಿನಲ್ಲಿ ಗಿಡ, ಮರ ಪ್ರಾಣಿ, ಪಕ್ಷಿ, ಮನುಷ್ಯ, ಇತರೆ ಜೀವಿಗಳು, ಇಷ್ಟೇಕೆ ಈ ಭೂಮಿ, ಸೂರ್ಯ, ಚಂದ್ರ, ಗ್ರಹ ನಕ್ಷತ್ರಗಳು ಏನು ಇಲ್ಲದೆ ಇರುವಾಗಲೂ ಇದ್ದದ್ದೆ ಓಂ ಎನ್ನುವ ಧ್ವನಿ. ಈ ಧ್ವನಿಯೇ ವಿಶ್ವದಲ್ಲಿ ತುಂಬಿತ್ತು. ಈ ಧ್ವನಿಯಿಂದಲೇ ಎಲ್ಲವೂ ಸೃಷ್ಠಿಯಾಗಿದೆ. 


ಆದ್ದರಿಂದಲೇ ಈ ಧ್ವನಿಯನ್ನು ಪರಾತ್ಪರ ಪರಬ್ರಹ್ಮ ಎಂದು ಕರೆಯುತ್ತಾರೆ. ಈ ಧ್ವನಿಯನ್ನು "ಪ್ರಣವ" ಎಂದು ಸಹ ಕರೆಯುತ್ತಾರೆ. ಓಂಕಾರದ ಉಚ್ಚಾರಣೆಗೆ ಎರಡರ ಅವಶ್ಯಕತೆ ಇದೆ. 


1. ಉಸಿರು ಅಂದರೆ ಪ್ರಾಣ 

2. ಪ್ರಜ್ಞೆ (ತಿಳುವಳಿಕೆ, ವ)


ಹೀಗಾಗಿ ಈ ನಾದವನ್ನು ಪ್ರಣವ ಎಂದು ಕರೆಯಲಾಗಿದೆ, ಪ್ರಾಣ + ವ = ಪ್ರಣವ.


ಮನುಷ್ಯ ಬಹಳ ಸಿಟ್ಟು ಮಾಡಿಕೊಂಡಾಗ ಆತನ ಉಸಿರಿನ ವೇಗ ಬಹಳ ಹೆಚ್ಚಿರುತ್ತದೆ. ಅದೇ ರೀತಿ ಆತ ದುಃಖ, ಭಯ ಚಿಂತೆಗೊಳಗಾಗಿದ್ದಾಗ ಉಸಿರಿನ ರೀತಿ ಬೇರೆಯೇ ಆಗಿರುತ್ತದೆ. 


ನಾವು ತಕ್ಷಣಕ್ಕೆ ಭಯ, ದುಃಖ, ಚಿಂತೆಗಳಿಂದ ದೂರವಾಗಬೇಕಾದರೆ, ನಮಗೆ ಭಯ, ದುಃಖ, ಚಿಂತೆಗಳು ಆವರಿಸಿದಾಗ ನಾವು ನಮ್ಮ ಉಸಿರಿನ ಕಡೆ ಧ್ಯಾನವನ್ನು ತಂದು,  ನಿಧಾನವಾಗಿ ಉಸಿರನ್ನು ಎಳೆದುಕೊಳ್ಳಬೇಕು. ನಂತರ ಸ್ವಲ್ಪ ಸಮಯ ಉಸಿರನ್ನು ಹಿಡಿದು ನಿಧಾನವಾಗಿ ಉಸಿರನ್ನು ಬಿಡಬೇಕು. ಹೀಗೆ ಸ್ವಲ್ಪ ಸಮಯದವರೆಗೂ ಮಾಡಿದಾಗ ಆ ಕ್ಷಣದಲ್ಲಿದ್ದ ದುಃಖ, ಭಯ,‌ ಚಿಂತೆಗಳೆಲ್ಲವೂ ಮಾಯವಾಗುತ್ತವೆ.


ಪುನಃ ಆ ಚಿಂತೆ ಭಯ ದುಃಖ ನಮ್ಮನ್ನು ಆವರಿಸಿಕೊಳ್ಳಬಹುದು. ನಾವು ಯಾವುದೇ ಪವಿತ್ರ, ಪೂಜ್ಯ ಭಾವನೆಗಳಿಲ್ಲದೆ ನಮಗೆ ಗೊತ್ತಿಲ್ಲದೆ ಉಸಿರಾಟ ಎನ್ನುವ ಓಂಕಾರವನ್ನು ಜಪಿಸಿದಾಗ ಆ ತಕ್ಷಣಕ್ಕೆ ಭಯ, ದುಃಖ, ಚಿಂತೆ ಮಾಯ ಆಗುವುದಾದರೆ, ನಾವು ತಿಳುವಳಿಕೆಯಿಂದ, ಪೂಜ್ಯ, ಪವಿತ್ರ ಭಾವನೆಯಿಂದ ಓಂಕಾರ ಜಪಿಸಿದಾಗ ಆ ದುಃಖ, ಭಯ, ಚಿಂತೆಗಳು ಮತ್ತೊಮ್ಮೆ ಬರದಂತೆ ನಾಶವೂ ಆಗುತ್ತವೆ. 


  ಕಾರಣ ಇದು ಪರಾತ್ಪರ ಪರಬ್ರಹ್ಮ, ಪರಮಾತ್ಮ ನ ಹೆಸರು. ಪ್ರಣವ ನಾದಕ್ಕೆ ಪ್ರಾಣ ಶಕ್ತಿ ಹಾಗೂ ನಮ್ಮ ಪ್ರಜ್ಞೆ ಎರಡು ಬೇಕು. ಪಂಚಭೂತಗಳಾದ ಈ ಶರೀರದಲ್ಲಿ ಪ್ರಜ್ಞೆ ಆಗಿರುವ ನಾವು ಪ್ರಣವ ನಾದಕ್ಕೆ ಕಾರಣ. 


ಇದರಂತೆ ಪಂಚಭೂತಗಳಿಂದಾದ ಜಗತ್ತಿನಲ್ಲಿಯೂ ಪ್ರಣವ ನಾದ ಹೊಮ್ಮುತ್ತಿದೆ ಎಂದರೆ ಈಶ್ವರ ಎನ್ನುವ ಜಾಗತೀಕ ಪ್ರಜ್ಞೆಯೂ ಇದೆ, ಎನ್ನುವುದಕ್ಕೆ ಜಗತ್ತಿನಲ್ಲಿಯ ಪ್ರಣವ ನಾದವೇ ಆಧಾರ ಒದಗಿಸುತ್ತದೆ. 


ಹೀಗಾಗಿ ಭಕ್ತಿ, ಪ್ರೀತಿ, ಶರಣಾಗತಿ, ಸಮರ್ಪಣೆ, ಪೂಜ್ಯ, ಪವಿತ್ರ ಭಾವನೆಯಿಂದ ಆ ಪರಾತ್ಪರ ಪರಬ್ರಹ್ಮ ಪರಮಾತ್ಮ ಈಶ್ವರನ ಹೆಸರು ತೆಗೆದುಕೊಂಡಾಗ ಆ ಜಾಗೃತ ಶಕ್ತಿ ದುಃಖ, ಭಯ, ಚಿಂತೆಗೆ ಕಾರಣವಾದ, ನಮ್ಮ ಪೂರ್ವ ಕರ್ಮಗಳನ್ನು ನಾಶ ಮಾಡಿ ನಮಗೆ ಪುಣ್ಯವೇ ಲಭಿಸುವಂತೆ ಮಾಡುತ್ತದೆ.


ಹೀಗೆ ಓಂಕಾರ ಜಪದಿಂದ  ನಮ್ಮ ಭಯ, ದುಃಖ, ಚಿಂತೆ ನಾಶವಾಗುವುದರ ಜೊತೆಗೆ ಈ ಜಪ ನಮಗೆ ಆನಂದವನ್ನು ಸುಖ ಸಂತೋಷವನ್ನು ಮನಸ್ಸಿಗೆ ಶಾಂತಿಯನ್ನು ಸಹ ನೀಡುತ್ತದೆ. 


ಆದ್ದರಿಂದ ಓಂಕಾರವನ್ನು ಪವಿತ್ರ ಪೂಜ್ಯ ಭಾವನೆಯಿಂದ ನಾವೆಲ್ಲರೂ ಜಪಿಸಿ ಪರಮಾತ್ಮನ ಪ್ರೀತಿಗೆ ಪಾತ್ರರಾಗೋಣ.


ಇನ್ನೊಂದು ವಿಷಯ ನಮ್ಮ ಪೂರ್ವ ಕರ್ಮಗಳಂತೆ ಒಬ್ಬರಿಂದ ಇನ್ನೊಬ್ಬರಿಗೆ ಉಸಿರಾಟ ವಿಭಿನ್ನವಾಗಿರುತ್ತದೆ. ಉಸಿರಾಟದ ಮೇಲೆ ಮನಸ್ಸಿನ ವಿಚಾರ, ಭಾವನೆ ಅವಲಂಬಿತವಾಗಿವೆ. ಮನಸ್ಸಿನ ವಿಚಾರ, ಭಾವನೆಗಳೇ ನಮಗೆ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಮಾಡಿಸುತ್ತವೆ.

ಇದರಿಂದಲೇ ನಾವು ಕಷ್ಟ ಸುಖಗಳನ್ನು ಪಡೆಯುತ್ತೇವೆ. 


ಆದ್ದರಿಂದ ನಮ್ಮಿಂದ ತಪ್ಪು ಕೆಲಸಗಳಾಗದಂತೆ ತಡೆಯಲು ನಮ್ಮ ಮನಸ್ಸನ್ನು ಸದಾ ನಾವು ಗಮನೀಸುತ್ತಿರಬೇಕು. ನಮ್ಮ ಮನಸನ್ನು ನಿಯಂತ್ರಣದಲ್ಲಿಡಲು ನಮ್ಮ ಉಸಿರನ್ನು ಗಮನಿಸುತ್ತಿರಬೇಕು. ಓಂಕಾರದ ಜಪದಿಂದ ಉಸಿರಾಟವನ್ನು ನಿಯಂತ್ರಿಸಲು ಸಾಧ್ಯ. ಉಸಿರಾಟದ ನಿಯಂತ್ರಣದಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯ.  


ಓಂಕಾರ ಜಪಿಸದಿದ್ದರೂ ಸಹ ಕೇವಲ ಉಸಿರಾಟದ ಸೋಹಂ ಧ್ವನಿ ಗಮನಿಸಿದಾಗಲೂ ಅನೇಕ ಪಾಪ ನಾಶವಾಗಲಿದೆ. ಇದರ ಸತತ ಅಭ್ಯಾಸದಿಂದ ಸೋಹಂ ಶಬ್ದದ ಸಾಕ್ಷಾತ್ಕಾರ ನಮಗೆ ಆಗುತ್ತದೆ.


ಆ ಅರ್ಥವೇ ಸೋ ಅಂದರೆ ಅದು. ಹಂ ಅಂದರೆ ನಾನು. 


ಸೋ = ಅದು, ಹಂ = ನಾನು. 


ಅದು ನಾನೇ ಅಂದರೆ, ಒಂದು ಸಮಯ ಬರುತ್ತದೆ ಆಗ ಇದರ ಸತತ ಅಭ್ಯಾಸದಿಂದ ಪರಾತ್ಪರ ಪರಬ್ರಹ್ಮ ಓಂಕಾರ ನಾನೇ ಎನ್ನುವ ಸಾಕ್ಷಾತ್ಕಾರವಾಗುತ್ತದೆ.


ಇಂತಹ ಸತ್ಯವನ್ನು ತಾವೆಲ್ಲರೂ ಸಾಕ್ಷಾತ್ಕರಿಸಿಕೊಳ್ಳುವಂತಾಗಲಿ ಎಂದು ಆಶಿಸುತ್ತೇನೆ. ತನ್ಮೂಲಕ ತಮ್ಮೆಲ್ಲರ ಜೀವನದಲ್ಲಿ ಸತ್ಯ ಯುಗದ ಆಗಮನವಾಗಲಿ ಎಂದು ಆಶಿಸುತ್ತಾ.


ತಮ್ಮೆಲ್ಲರಿಗೂ ವಂದನೆಗಳು.


ಎಲ್ಲರಿಗೂ ಒಳ್ಳೆಯದಾಗಲಿ. 


ಓಂ ನಮಃ ಶಿವಾಯ


✍️ URAIN NAMAH 

ಈ ಪದ ಸತ್ಯಯುಗದ ಮುನ್ನುಡಿ. ಯುಗ ಪರಿವರ್ತನೆಗೆ ನಾಂದಿ.


(ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಸೇಡಂ.)

Comments

Popular posts from this blog

ಅಂಧ ಹೇಳವರು