*ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ - ಈ ಮಾತು ಎಷ್ಟು ಸರಿ ?*
ಪರರನ್ನು ಸಹ ತನ್ನಂತೆ ಕಾಣುವುದು ಸರಿಯೇ? ಅಥವಾ *ಪರರನ್ನು ತನಗಿಂತ ಚಿಕ್ಕದಾಗಿ ಕಾಣುವುದು ಸರಿಯೇ ?*
ತನಗೆ ಯಾವ ಮಾತುಗಳಿಂದ ನೋವಾಗುತ್ತದೆ ? *ಅಂತಹ ಮಾತುಗಳನ್ನು ಪರರು ತನಗೆ ಮಾತಾಡಬಾರದು. ಆದರೆ ತಾನು ಬೇರೆಯವರಿಗೆ ಮಾತನಾಡಿದರೆ ತಪ್ಪಿಲ್ಲ.*
ಪರರು ತನಗೆ ಯಾವ ರೀತಿ ನಡೆದುಕೊಂಡರೆ ತನಗೆ ಅಪಮಾನವಾಗುತ್ತದೆ ? *ಅಂತಹ ವ್ಯವಹಾರವನ್ನು ಬೇರೆಯವರು ತನ್ನ ಜೊತೆ ಮಾಡಬಾರದು. ಆದರೆ ತಾನು ಬೇರೆಯವರೊಂದಿಗೆ ಮಾಡಿದರೆ ತಪ್ಪೇನಿಲ್ಲ.*
ಈ ರೀತಿಯ ಮನುಷ್ಯನ ವ್ಯವಹಾರವನ್ನು ಕಂಡೆ ಸರ್ವಜ್ಞ ಮೇಲಿನ ಮಾತನ್ನು ಹೇಳಿದ್ದಾರೆ. ಪರರನ್ನು ಸಹ ತನ್ನಂತೆ ಕಾಣಬೇಕು. ಅವರು ಯಾರೇ ಇರಲಿ. ಯಾವುದೇ ಮಟ್ಟದಲ್ಲಿರಲಿ.
ನಮ್ಮಂತೆ ಪರರನ್ನು ಕಂಡಾಗ ಆ ದೇವರಿಗೆ ನಮ್ಮ ನಡವಳಿಕೆ ಪ್ರಿಯವಾಗುತ್ತದೆ.
ಒಂದು ಆತ್ಮದ ಜೀವನ ಕಾಲದಲ್ಲಿ ಅಥವಾ ಒಬ್ಬ ವ್ಯಕ್ತಿಯ ಜೀವನಕಾಲದಲ್ಲಿ *ವಿರುದ್ಧ ದಿಕ್ಕಿನ ಪರಿಸ್ಥಿತಿಗಳು ಬರುತ್ತವೆ*.
ಉದಾಹರಣೆಗೆ. ಒಬ್ಬ ವ್ಯಕ್ತಿ ಈ ಜನ್ಮದಲ್ಲಿ ಗಂಡಾಗಿ ಹುಟ್ಟಿದರೆ ಇನ್ನೊಂದು ಜನ್ಮದಲ್ಲಿ ಹೆಣ್ಣಾಗಿ ಹುಟ್ಟಬಹುದು.
ಅಥವಾ ಒಂದು ಜೀವನಕಾಲದಲ್ಲಿಯೇ ಒಬ್ಬ ವ್ಯಕ್ತಿಗೆ ಯಜಮಾನನಂತಹ, ಶ್ರೀಮಂತನಂತಹ, ಅಥವಾ ಯುವಕನಂತಹ ಬಲಾಡ್ಯ ಪರಿಸ್ಥಿತಿ ಇರುತ್ತದೆ. ಇನ್ನೊಮ್ಮೆ ಅದೇ ವ್ಯಕ್ತಿಯ ಜೀವನದಲ್ಲಿ ಸೇವಕನಂತಹ, ಬಡವನಂತಹ, ಮುಪ್ಪಿನಂತಹ ದೌರ್ಬಲ್ಯದ ಪರಿಸ್ಥಿತಿಯೂ ಬರುತ್ತದೆ.
ಹೀಗೆ *ವಿಭಿನ್ನ ಪರಿಸ್ಥಿತಿಗಳು ಜೀವನದಲ್ಲಿ ಬರುವುದಕ್ಕೆ ಮುಖ್ಯ ಕಾರಣ ನಾವು ನಮಗೆ ಮಾತ್ರ ಮಹತ್ವ ಕೊಟ್ಟಿರುತ್ತೇವೆ. ನಾವು ನಮ್ಮನ್ನು ಮಾತ್ರ ತಿಳಿದಿರುತ್ತೇವೆ. ಪರರನ್ನು, ಪರರ ಪರಿಸ್ಥಿತಿಯನ್ನು ತಿಳಿದಿರುವುದಿಲ್ಲ.*
ಹೀಗಾಗಿ *ನಮಗೂ ಸಹ ಪರರ ಸ್ಥಿತಿಯ ತಿಳುವಳಿಕೆ, ಜ್ಞಾನ ಸಿಗಲಿ ಎನ್ನುವ ಉದ್ದೇಶದಿಂದಲೇ ಒಂದು ಆತ್ಮದ ಜೀವನ ಕಾಲದಲ್ಲಿ ಅಥವಾ ಒಬ್ಬ ವ್ಯಕ್ತಿಯ ಜೀವನ ಕಾಲದಲ್ಲಿ ವಿರುದ್ಧ ದಿಕ್ಕಿನ ಪರಿಸ್ಥಿತಿಗಳು ಬರುತ್ತವೆ*.
ಒಂದು ವೇಳೆ ನಾವು ಯಜಮಾನಿಕೆಯ ಬಲಾಢ್ಯ ಸ್ಥಿತಿಯಲ್ಲಿ ಇರುವಾಗಲೇ ಸೇವಕನ ದುರ್ಬಲ ಪರಿಸ್ಥಿತಿ ಅರಿತರೆ, ಸೇವಕನ ದುರ್ಬಲ ಸ್ಥಿತಿ ಅನುಭವಿಸುವ ಅನಿವಾರ್ಯತೆ ನಮಗೆ ಯಾವತ್ತಿಗೂ ಬರೆಯುವುದಿಲ್ಲ.
ಹೀಗಾಗಿ ಒಂದು ಬೇರೆ ಜನಾಂಗ ಇರಬಹುದು, ಒಂದು ಬೇರೆ ಲಿಂಗದವರಿರಬಹುದು, ಒಂದು ಬೇರೆ ಪ್ರಾಣಿ, ಪಕ್ಷಿ, ಗಿಡ ಮರ, ನಮ್ಮ ಪ್ರಜ್ಞೆಗೆ ಬರುವ ಯಾವುದೇ ಜೀವಿ ಇರಬಹುದು, ಅವುಗಳನ್ನು ಸಹ ನಮ್ಮಂತೆ ಕಾಣೋಣ. ಆಗ ಮಾತ್ರ ಆ ಜೀವಿಯ ಪರಿಸ್ಥಿತಿಯ ಅರಿವಿಗಾಗಿ, ನಾವು ಆ ಜೀವಿಯೇ ಆಗುವಂತಹ ಪ್ರಸಂಗ ನಮ್ಮ ಜೀವನದಲ್ಲಿ ಬರುವುದಿಲ್ಲ.
*ಇಲ್ಲದಿದ್ದರೆ ಬೇರೆಯವರ ಅಥವಾ ಬೇರ ಜೀವಿಯ ಪರಿಸ್ಥಿತಿ ಅರಿಯಲು ಅನಿವಾರ್ಯವಾಗಿ ಆ ವ್ಯಕ್ತಿಯೇ ಆಗುವಂತಹ ಅಥವಾ ಆ ಜೀವಿಯೇ ಆಗುವಂತಹ ಪ್ರಸಂಗಗಳು ನಮ್ಮ ಜೀವನದಲ್ಲಿ ನಿರ್ಮಾಣವಾಗುತ್ತವೆ*. ಇದು ಆಗಬಾರದೆಂದರೆ ಸರ್ವಜ್ಞನ ವಚನವನ್ನು ನಮ್ಮ ಜೀವನದಲ್ಲಿ ಪಾಲನೆ ಮಾಡೋಣ.
ಅದುವೇ *"ತನ್ನಂತೆ ಪರರ ಬಗೆದರೆ ಕೈಲಾಸ ಬಿನ್ನಾಣವಿಕ್ಕು ಸರ್ವಜ್ಞ"*.
ತನ್ನಂತೆ ಪರರನ್ನು ಕಾಣು ಎನ್ನುವ ಮಾತು ಒಬ್ಬ ವ್ಯಕ್ತಿಗೆ, ಒಂದು ಜೀವಿಗೆ ಸಂಬಂಧಿಸಿದ್ದಲ್ಲ. ಜಗತ್ತಿನ ಪ್ರತಿಯೊಂದಕ್ಕೂ ಸಂಬಂಧಿಸಿದ್ದು. ಹೀಗಾಗಿ ಪ್ರತಿ ಧರ್ಮ, ಜಾತಿ, ಜನಾಂಗ, ಭಾಷೆ, ಪ್ರಾಂತ, ಪ್ರತಿ ಲಿಂಗದವರು, ಸರ್ವಜ್ಞರ ಮಾತನ್ನು ತಮ್ಮ ಮನವೆಂಬ ತಕ್ಕಡಿಯಲ್ಲಿ ಇಟ್ಟುಕೊಂಡು ಪರರ ಪ್ರತಿ ತಮ್ಮ ವ್ಯವಹಾರವನ್ನು ವಿಮರ್ಶೆ ಮಾಡಬೇಕು. ಆಗ ಮಾತ್ರ ಅನ್ಯರ ಪರಿಸ್ಥಿತಿಯ ಅರಿವು ಪಡೆದುಕೊಳ್ಳಲು, ಅನ್ಯರ ಪರಿಸ್ಥಿತಿಗೆ ನಾವು, ಪರಿವರ್ತನೆ ಹೊಂದುವಂತಹ ಅನಿವಾರ್ಯ ಪ್ರಸಂಗಗಳು ನಮ್ಮ ಜೀವನದಲ್ಲಿ ಬರುವುದಿಲ್ಲ.
ಉದಾಹರಣೆಗೆ, ಇಂದು ನಾವು ಇನ್ನೊಬ್ಬರ ವಸ್ತು ಕಳ್ಳತನ ಮಾಡಿದಾಗ, ಅಥವಾ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಂಡಾಗ ಇನ್ನೊಬ್ಬನಿಗೆ ಏನಾಗುತ್ತದೆ, ಅದನ್ನು ತಿಳಿದು ಈಗಲೇ ಸದ್ವರ್ತನೆ ಹೊಂದದಿದ್ದರೆ, ನಾಳೆ ನಮ್ಮ ವಸ್ತುವನ್ನು ಇನ್ನೊಬ್ಬರು ಕಳ್ಳತನ ಮಾಡಬಹುದು. ಅಥವಾ ನಮ್ಮ ಹಕ್ಕುಗಳನ್ನು ಇನ್ನೊಬ್ಬರು ಕಿತ್ತುಕೊಳ್ಳಬಹುದು.
ಆದ್ದರಿಂದ ಯಾವುದೇ ಧರ್ಮೀಯನಾಗಲಿ, ಯಾವುದೇ, ಲಿಂಗದವನಾಗಲಿ, ಯಾವುದೇ ಜಾತಿಯವರಾಗಲಿ, ಯಾವುದೇ ಭಾಷೆ, ಪ್ರಾಂತ, ದೇಶದವರಾಗಲಿ ನಾವು ಪರರನ್ನು ಸಹ ನಮ್ಮಂತೆ ತಿಳಿಯೋಣ. ಆ ರೀತಿ ತಿಳಿದು ನಮ್ಮ ವ್ಯವಹಾರದಲ್ಲಿ ಸದ್ವರ್ತನೆಯನ್ನು ಹೊಂದೋಣ.
ದೇವರು ಯಾವುದೇ ಧರ್ಮ, ಜಾತಿ, ಜನಾಂಗ, ಲಿಂಗ, ನಾಡು, ನುಡಿ, ದೇಶ, ಯಾವುದೇ ಜೀವಿಯ ಪಕ್ಷಪಾತಿಯಲ್ಲ. ದೇವರು ಕೇವಲ ಸದ್ವರ್ತನೆಯ ಪಕ್ಷಪಾತಿ. ಆ ವರ್ತನೆ ಯಾರಿಂದಲಾದರೂ ಬರಲಿ. ಅವರಿಗೆ ಮಾತ್ರ ದೇವರ ಕೃಪೆ.
ಇಂದು ಸರ್ವಜ್ಞ ಸಮಾಜದಲ್ಲಿ ಎಲ್ಲರಿಗೂ ಸಂಬಂಧಿಸಿದ ವ್ಯಕ್ತಿಯಾಗಿ ಕಾಣುತ್ತಾರೆ. ಆದರೆ ಅಂಬೇಡ್ಕರ್ ಕೇವಲ ಒಂದು ವರ್ಗದ ವ್ಯಕ್ತಿಯಾಗಿ ಮಾತ್ರ ಕಾಣಬಹುದು. ಆದರೆ ಇಬ್ಬರಲ್ಲಿ ನಮಗೆ ಕಾಣುವುದು ಒಂದು ವ್ಯತ್ಯಾಸ ಮಾತ್ರ. ಅದುವೇ ಸರ್ವಜ್ಞರು ನಾಮಪದವಾದರೆ, ಅಂಬೇಡ್ಕರ್ ಕ್ರಿಯಾಪದ.
ತನ್ನಂತೆ ಪರರನ್ನು ಕಾಣು ಎಂದು ಸರ್ವಜ್ಞರು ಕೇವಲ ಉಪದೇಶವಾಗಿ ಹೇಳಿದರು. ಆದರೆ ಅಂಬೇಡ್ಕರ್ ಅದಕ್ಕಾಗಿ ಅನೇಕ ಹೋರಾಟಗಳನ್ನು ಮಾಡಿದರು. ಕೊನೆಗೆ ಇದಕ್ಕೆ ಕಾನೂನಿನ ರೂಪ ಕೊಟ್ಟರು. ಇದಕ್ಕಾಗಿ ಅಪಾರವಾಗಿ ಶ್ರಮಿಸಿದರು. ಅವರ ಜಯಂತಿಯಂದು ಬಾಬಾಸಾಹೇಬರಿಗೆ ಅನಂತ ನಮನಗಳು.
ಕೊನೆಯದಾಗಿ, ತನ್ನಂತೆ ಪರರನ್ನು ಕಾಣು ಎನ್ನುವ ಮಾತನ್ನು ಇಂದು ನಾವು ಎಲ್ಲಾ ಮನುಷ್ಯರಿಗೂ, ಎಲ್ಲಾ ಜೀವಿಗಳಿಗೂ ಅನ್ವಯಿಸಿ ಜೀವನದಲ್ಲಿ ಪಾಲಿಸೋಣ.
ಅದು ಯಾವುದೇ ಧರ್ಮೀಯನಾಗಲಿ, ಯಾವುದೇ, ಲಿಂಗದವನಾಗಲಿ, ಯಾವುದೇ ಜಾತಿಯವರಾಗಲಿ, ಯಾವುದೇ ಭಾಷೆ, ಪ್ರಾಂತ, ದೇಶದವರಾಗಲಿ ನಾವು ಪರರನ್ನು ಸಹ ನಮ್ಮಂತೆ ತಿಳಿಯೋಣ. ಆ ರೀತಿ ತಿಳಿದು ನಮ್ಮ ವ್ಯವಹಾರದಲ್ಲಿ ಸರ್ವರ ಪ್ರತಿ ಸದ್ವರ್ತನೆ ತೋರೋಣ. ಆಗ ಮಾತ್ರ ನಾವು ಎಲ್ಲರ ಜೀವನ ಸ್ಥಿತಿಯ ಜ್ಞಾನವನ್ನು ಪಡೆಯಲು ಎಲ್ಲಾ ಜೀವಿಗಳಾಗುವ ಅವಶ್ಯಕತೆ ಬೀಳುವುದಿಲ್ಲ. (ಇಲ್ಲದಿದ್ದರೆ ಎಲ್ಲಾ ಜೀವಿಗಳ ಪರಿಸ್ಥಿತಿಯನ್ನು ಹೊಂದಿ, ಪಡಬಾರದ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.)
ಇದಕ್ಕಾಗಿ ಪರರನ್ನು ತನ್ನಂತೆ ಕಾಣುವ, ಸದ್ವರ್ತನೆಯನ್ನು ತೋರೋಣ. ಈ ಸದ್ವರ್ತನೆಯೇ ಸತ್ಯ ಯುಗವನ್ನು ಸೃಷ್ಟಿ ಮಾಡಲಿದೆ.
ಎಲ್ಲರಿಗೂ ವಂದನೆಗಳು
ಓಂ ನಮಃ ಶಿವಾಯ
✍️ URAIN NAMAH
ಈ ಪದ ಸತ್ಯ ಯುಗದ ಮುನ್ನುಡಿ
ಈ ಪದ ಯುಗ ಪರಿವರ್ತನೆಗೆ ನಾಂದಿ
ಕಲಿಯುಗ ಕೊನೆಗೊಳ್ಳಲಿ, ಪುನಃ
ಸತ್ಯ ಯುಗ ಆರಂಭವಾಗಲಿ.
(ಸೂರ್ಯನಾರಾಯಣ ಜಿ ಚಿಮ್ಮನಚೋಡಕರ್ ಸೇಡಂ)
Comments
Post a Comment