ಸಮಾಜ ಕಂಡಿದ್ದು ಕೆಳಮಟ್ಟದವನೆಂದು, ಆದರೆ ಅವರ ವಿಚಾರ ಎಷ್ಟು ಎತ್ತರ ಮಟ್ಟದ್ದು !!! ( ವಿಡಿಯೋ ಭಾಗ 1 )


ಅದೊಂದು ಸಣ್ಣ ಹಳ್ಳಿ. ಅಲ್ಲಿ ಜನರಿಲ್ಲದ ಕಿರಿದಾದ ರಸ್ತೆ. ಅದರಲ್ಲಿಯೇ ಮುಂದೆ ಹೋದರೆ ಒಂದು ಸಂದಿ. ಅಲ್ಲಿ ಯಾರು ಇಲ್ಲ. ಬಾಗಿಲಿಗೆ ಕೀಲಿ. 


ಅಲ್ಲಿ ಜನಜಂಗುಳಿ ಇಲ್ಲ. ಪ್ರವಾಸಿಗರಿಲ್ಲ. ಬಾಗಿಲು ತೆರೆದು ಒಳಗಡೆ ಹೋದಾಗ ಜೀವಂತವಾಗಿ ಏನು ಕಾಣುವುದಿಲ್ಲ. ಒಂದು ರೀತಿಯ 

ಭಣ ಭಣ ವಾತಾವರಣ. 


ಇದು ಭಾವನೆಗಳಿಲ್ಲದವರ, ಖಾಲಿ ಕಣ್ಣುಗಳಿಗೆ ಕಾಣುವ ಒಂದು ಸ್ಥಳದ ಚಿತ್ರಣ.


ಎಷ್ಟೋ ವರ್ಷಗಳ ಹಿಂದೆ ನಡೆದ ಐತಿಹಾಸಿಕ ಘಟನೆಗೆ ಸಂಬಂಧಿಸಿದ ಸ್ಥಳ. 

ಇಲ್ಲಿಯೇ ಸಮೀಪದಲ್ಲಿದ್ದರೂ ನಾನು ಇಲ್ಲಿಯವರೆಗೆ ಹೋಗಿರಲಿಲ್ಲ.


ನನ್ನ ಜೀವನದ ಮೊದಲನೆಯ ಭೇಟಿ. ಸ್ಥಳ ಮೇಲಿನದೇ ಆದರೆ ಅಲ್ಲಿ ಹೋದಾಗ ಇತಿಹಾಸದ ನೆನಪುಗಳಿಂದ ನನ್ನಲ್ಲಿ ಭಾವನೆಗಳು ಉಕ್ಕಿ ಉಕ್ಕಿ ಬಂದವು. ಐತಿಹಾಸಿಕ ಪುಣ್ಯಾತ್ಮರ ಜೊತೆಯಲ್ಲಿಯೇ ಇದ್ದೇವೆ ಏನೋ ಎನ್ನುವ ಭಾವನೆ ಬರುತ್ತಿತ್ತು. 


ಅವರ ಒಂದೊಂದು ನೆನಪುಗಳು ಅದರ ಜೊತೆಗೆ ಇಂದಿನ ಜಗತ್ತಿನ ಹೋಲಿಕೆ, ಅನೇಕ ಅನುಮಾನಗಳನ್ನು, ಪ್ರಶ್ನೆಗಳನ್ನು, ನನ್ನ ಮನಸ್ಸಿನಲ್ಲಿ ಎಬ್ಬಿಸುತಿತ್ತು. 


. ನಿಜಕ್ಕೂ ಇದು ನಡೆದ ಘಟನೆಯೇ ?

. ಆಗ ಜನರು ಈ ರೀತಿಯೂ ಇದ್ದರೆ ?

. ನಿರ್ಜೀವ ವಸ್ತುಗಳು ಸಹ ಈ ರೀತಿ ವರ್ತಿಸಿದವೆ ?

. ದೈವೀ ಪ್ರಮಾಣ ಸಿಕ್ಕರೂ ಸಮಾಜ ಏಕೆ ಇಷ್ಟೊಂದು ಕ್ರೂರಿಯಾಯಿತು ?


"ಕೊಟ್ಟವ ಕೊಡಂಗಿ, ಪಡೆದುಕೊಂಡವ ವೀರಭದ್ರ", ಎನ್ನುವ ಈಗಿನ ಕಾಲಘಟ್ಟದಲ್ಲಿ, ಇಷ್ಟೆಲ್ಲಾ ಐತಿಹಾಸಿಕ ಘಟನೆ ಆರಂಭವಾಗಿದ್ದು ಸಮಾಜದಿಂದ ನಿಮ್ನ ವರ್ಗ ಎಂದು ಕಾಣುತ್ತಿದ್ದ ಒಬ್ಬ ಚಮ್ಮಾರ ವ್ಯಕ್ತಿಯ ಅಸಾಮಾನ್ಯ ಉನ್ನತ ಯೋಚನೆಯಿಂದ. 


ಒಬ್ಬ ಚಮ್ಮಾರ ಮನುಷ್ಯನ ಅಸಾಮಾನ್ಯ ಯೋಚನೆ ಈಗಲೂ ಅನೇಕರನ್ನು ಆಶ್ಚರ್ಯಕ್ಕೀಡಾಗುವಂತೆ ಮಾಡುತ್ತದೆ.


ಆ ಯೋಚನೆಯೇ, *"ನನ್ನ ಮೇಲೆ ಇರುವ ಸಣ್ಣದರಲ್ಲಿ ಸಣ್ಣ ಋಣವನ್ನು ಸಹ ನಾನು ತೀರಿಸಬೇಕು"* ಎನ್ನುವ ಯೋಚನೆ. ಈ ಭಾವನೆಯಿಂದ ಮಾಡಿದ ಮೈ ಝುಮ್ !! ಎನಿಸುವ ಕೆಲಸ ಈಗಲೂ ನನ್ನಲ್ಲಿ ರೋಮಾಂಚನ ಮೂಡಿಸುತ್ತಿದೆ.


 ನಮ್ಮ ಮೇಲೆ 

* ಪಂಚಭೂತಗಳು, 

* ಪಾಲಕರು, 

* ಗುರುಗಳು

* ಸಮಾಜ, 

* ದೇಶ, 

* ಜಗತ್ತು ........

ಎಷ್ಟೊಂದು ಋಣಗಳು ಇವೆ.


ಒಂದನೇ ಸಂಗತಿ:

* ನಮ್ಮಲ್ಲಿ ಎಷ್ಟು ಜನ ಹೀಗೆ ಯೋಚನೆ ಮಾಡುತ್ತೇವೆ ? 

* ನಮ್ಮಲ್ಲಿ ಎಷ್ಟು ಜನ ನಮ್ಮ ಋಣಗಳನ್ನು ತೀರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ?


ಎರಡನೇ ಸಂಗತಿ:

ಈ ಘಟನೆಯಲ್ಲಿ ದೈವಿ ಪ್ರಮಾಣ ಸಿಕ್ಕರೂ (ಮಾದರಸನ ಮೈ ಉರಿ ಎದ್ದಿದ್ದು) ಸಹ ಸಮಾಜ ಹೀಗೆ ಕ್ರೂರವಾಗಿ ಆನೆಯ ಕಾಲಿಗೆ ಕಟ್ಟಿ ಹಾಕಿ ಎಳೆದು ಮರಣದಂಡನೆಗೆ ನೀಡಿತು, ಎಂದರೆ ಆಗಿನ ಕಾಲದಲ್ಲಿ ಸಾಮಾನ್ಯ ನಿಮ್ನ ವರ್ಗದೊಂದಿಗೆ ಸಮಾಜ ಹೇಗೆ ನಡೆದುಕೊಂಡಿರಬಹುದು ?


ಈ ಸ್ಥಳದಿಂದ (ಬಿಜನಳ್ಳಿ ಶರಣಹರಳಯ್ಯ ಪಾದುಕೆಗಳು) ನಾವು ಪಡೆಯಬೇಕಾದ ಕಲಿಕೆಯೆಂದರೆ,


* *ನಾವು ಪಡೆದುಕೊಂಡಿರುವ ಪ್ರತಿಯೊಬ್ಬರ ಮತ್ತು ಪ್ರತಿಯೊಂದರ ಸಹಾಯಕ್ಕೆ ಪ್ರತಿ ಸಹಾಯ ಮಾಡುವ ಗುಣ ನಾವೆಲ್ಲರೂ ಬೆಳೆಸಿಕೊಳ್ಳಬೇಕು*. 


* *ಸಮಾಜದ ಎಲ್ಲಾ ಜನರನ್ನು *"ತನ್ನಂತೆ ಪರರು"* ಎಂದು ಕಾಣುವ ದೃಷ್ಟಿಕೋನ ನಮ್ಮಲ್ಲಿ ಬರಬೇಕು.* 


ಇದೇ ಮನುಷ್ಯತ್ವ, ಇದೇ ಮಾನವೀಯತೆ. ಇದೇ ಈ ಜನ್ಮದ ಉದ್ದೇಶ.


ಎಲ್ಲರಿಗೂ ವಂದನೆಗಳು


✍️ URAIN NAMAH

(ಈ ಪದ ಸತ್ಯ ಯುಗದ ಮುನ್ನುಡಿ

ಈ ಪದ ಯುಗ ಪರಿವರ್ತನೆಗೆ ನಾಂದಿ) 


ಸೂರ್ಯನಾರಾಯಣ ಜಿ ಚಿಮ್ಮನಚೋಡಕರ.


)

Comments

Popular posts from this blog

ಅಂಧ ಹೇಳವರು