*ಹೊಸ ವರ್ಷ ಆಚರಿಸುತ್ತಿರುವ ಜಗತ್ತಿಗೆ ಹೊಸ ಚಿಂತನೆ.*
ಮೊದಲಿಗೆ ಅಭೂತಪೂರ್ವ ಯಶಸ್ವಿ ಕಾರ್ಯಕ್ರಮದ ಕಾರಣಕರ್ತರಾದ ಎಲ್ಲರಿಗೂ *ನನ್ನ ಅನಂತ ಅನಂತ ಅಭಿನಂದನೆಗಳು*
ಇಂದಿಗೆ ಎರಡು ದಶಕಗಳಿಗೂ ಮುಂಚೆ ನನಗೆ ಲಭಿಸಿದ ಸಂದೇಶದಂತೆ ನಾನು ಸತ್ಯಯುಗಕ್ಕಾಗಿ ಜೀವನ ಮುಡಿಪಾಗಿಡುವ ನಿರ್ಧಾರವನ್ನು ಹೋದ ವರ್ಷ ಮಾಡಿದ್ದೆ. ಹೋದ ವರ್ಷವೇ ಇದಕ್ಕೆ ಸಂಬಂಧಿಸಿದಂತೆ ಸತ್ಯ ಯುಗ ಟ್ರಸ್ಟ್ ನ್ನು ಸಹ ರಚಿಸಿದ್ದೆ. ಟ್ರಸ್ಟ್ ಉದ್ಘಾಟನೆ ನಂತರ ಇಬ್ಬರು ಸತ್ಯವಂತರಿಗೆ ಪ್ರಶಸ್ತಿ ನೀಡಿ ಗೌರವಿಸಿದ ನಂತರ ಮತ್ತೆ ಬೇರೆ ಯಾವ ಚಟುವಟಿಕೆ ಮಾಡಿರಲಿಲ್ಲ.
ಇದೇ ಸಂಧರ್ಭದಲ್ಲಿ ಶಿವನೊಲುಮೆಯ ಸಾಕ್ಷಾತ್ಕಾರಿ ಶ್ರೀ ಮಾದಾರ ಚೆನ್ನಯ್ಯನವರ ಮೂರ್ತಿ ಅನಾವರಣ ನಿಮಿತ್ತ ಅವರ ಕುರಿತು ಲೇಖನವನ್ನು ಬರೆಯುವ ಸಂಬಂಧ ಸಂಶೋಧನೆ ನಡೆಸಿದಾಗ ನನಗೆ ತಿಳಿದ ವಿಷಯವೆಂದರೆ, ನಾನು ಈಗ ನನ್ನ ಜೀವನ ಬಗ್ಗೆ ಯಾವ ನಿರ್ಧಾರ ತೆಗೆದುಕೊಂಡಿದ್ದೇನೆ, ಅದನ್ನು ಶ್ರೀ ಮಾದಾರ ಚೆನ್ನಯ್ಯನವರು 900 ವರ್ಷಗಳ ಮೊದಲೇ ಮಾಡಿದ್ದರು . 900 ವರ್ಷಗಳಿಗೂ ಮುಂಚೆಯೇ ಸತ್ಯನಿಷ್ಠರಾಗಿ ಸಹ ಬದುಕಿದ್ದರು.
ಅದು ಸಹ
* *ಬಡತನದ ಗುಡಿಸಲಿನಲ್ಲಿ ವಾಸಿಸುವ ಪರಿಸ್ಥಿತಿಯಲ್ಲಿ ಇರುವಾಗ*,
* *ಕೂಲಿ ಮಾಡಿ ಬದುಕುವ ಪರಿಸ್ಥಿತಿಯಲ್ಲಿ,*
* *ಅಸ್ಪೃಶ್ಯತೆಯ ಕರಾಳ ಆಚರಣೆಯ ಪರಿಸ್ಥಿತಿಯಲ್ಲಿ ಸಹ ಸತ್ಯ ನಿಷ್ಠೆಯಿಂದ ಬದುಕಿದ್ದರು*. (ಇದರಿಂದಲೇ ಅವರಿಗೆ ಶಿವನೊಲುಮೆ ಪ್ರಾಪ್ತವಾಯಿತು)
ಸತ್ಯ ನಿಷ್ಠೆಯಿಂದ ಅವರು ಬದುಕಿದ್ದು ಮಾತ್ರವಲ್ಲದೆ ತಮ್ಮ ವಚನಗಳ ಮೂಲಕ ಸತ್ಯ ನಿಷ್ಠೆಯ ಪ್ರಚಾರವನ್ನು ಅವರು ಮಾಡಿದ್ದರು. ನನಗೆ ಆಕರ್ಷಿಸಿದ ಅವರ ವಚನಗಳ ಸಾಲುಗಳೆಂದರೆ...
*ನಡೆ ನುಡಿ ಸಿದ್ಧಾಂತವಾದರೆ, ಕುಲ ಹೊಲೆ ಸೂತಕವಿಲ್ಲ*.
*ನುಡಿ ಲೇಸು, ನಡೆ ಅಧಮವಾದಲ್ಲಿ ಬಿಡುಗಡೆಯಿಲ್ಲದ ಹೊಲೆ*...
ಇಂತಹ ಶಿವ ಶರಣರನ್ನು ಪುನಃ ಜನಮಾನಸದಲ್ಲಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ನಾನು ಪುನಃ ಸತ್ಯದ ಕುರಿತ ನನ್ನ ಕೆಲಸವನ್ನು ಏಕೆ ಆರಂಭ ಮಾಡಬಾರದು ? ಎಂದು ಪ್ರಶ್ನಿಸಿಕೋಂಡಿದ್ದೆ.
ಇದಕ್ಕಾಗಿಯೇ ಹಣ (10000₹) ಖರ್ಚು ಮಾಡಿ ಸತ್ಯ ನಿಷ್ಠೆಯನ್ನು ಪ್ರಚಾರ ಮಾಡುವ ಜಾಹಿರಾತನ್ನು ಪತ್ರಿಕೆಯಲ್ಲಿ ನೀಡಿದ್ದೆ. ಮೋಬೈಲ್ ಭರಾಟೆಯಲ್ಲಿ ಪತ್ರಿಕೆ ಓದುವಿಕೆ ಕಡಿಮೆ ಆಗಿರುವ ಇಂದಿನ ಸಮಾಜದಲ್ಲಿ ಎಷ್ಟೋ ಜನ ಅದನ್ನು ಓದದೆ ಪತ್ರಿಕೆಯನ್ನು ಮಡಚಿಟ್ಟರು.
ಸತ್ಯದ ನಡೆ ನುಡಿ ಅಸಾಧ್ಯದ ಮಾತು ಎನ್ನುವ ಪೂರ್ವಾಗ್ರಹಪೀಡಿತ ಭಾವನೆಯೂ ಸಹ ಆ ಜಾಹಿರಾತನ್ನು ನಿರ್ಲಕ್ಷಿಸಲು ಕಾರಣವಿರಬಹುದು.
ಇದು "ಸತ್ಯ ನಿಷ್ಠೆಯ" ಪ್ರಚಾರದ ನನ್ನ ಉತ್ಸಾಹಕ್ಕೆ ತಣ್ಣೀರೆರಚಿದಂತೆಯಾಯಿತು. ನನ್ನ ಗಂಭೀರ ಉದ್ದೇಶ ಜನರನ್ನು ತಲುಪದಂತೆ ನನಗೆ ಕಂಡಿತ್ತು. ನನ್ನ ಹಣ ಯಾವ ಉದ್ದೇಶಕ್ಕಾಗಿ ಖರ್ಚು ಮಾಡಿದ್ದೇನೆ ಅದರ ಉದ್ದೇಶ ಈಡೇರಬೇಕು. ಸತ್ಯದ ಪ್ರಚಾರವಾಗಲೆಬೇಕು ಎನ್ನುವ ಉದ್ದೇಶದಿಂದ ನಂತರ ನಾನೇ ಜನರನ್ನು ವ್ಯಕ್ತಿಗತವಾಗಿ ಸಂಪರ್ಕಿಸಿ ಸಂದೇಶ ನೀಡಲು ಪ್ರಯತ್ನಿಸಿದ್ದೇನೆ.
ಒಂದು ಚೆಂಡನ್ನು ಗೋಡೆಗೆ ಹೊಡೆದಾಗ ಯಾವ ರೀತಿ ಗೋಡೆ ತಕ್ಷಣಕ್ಕೆ ಚೆಂಡನ್ನು ಮರಳಿ ನಮ್ಮತ್ತ ಎಸೆಯುವುದೋ ? ಅದೇ ರೀತಿ *ಸತ್ಯದ ನಡೆ, ನುಡಿಯ ಮಾತುಗಳನ್ನು ಆಡಿದಾಗ* ಬಹುತೇಕ ಜನರು ಆ ಮಾತುಗಳು ಆ ಕೂಡಲೇ ತಮ್ಮ ತಲೆಯಿಂದ ದೂರ ಎಸೆಯುತ್ತಾರೆ. ಇದಕ್ಕೆ ಕಾರಣ, ಈ ಕಾಲದಲ್ಲಿ ಸತ್ಯದ ನಡೆ ನುಡಿ ಸಾಧ್ಯವಿಲ್ಲ, ಎನ್ನುವ ಪೂರ್ವಾಗ್ರಹ ಭಾವನೆ. ಇದಕ್ಕೆ ಸಂಬಂಧಿಸಿದಂತೆಯೇ ಹೊಸ ವರ್ಷವನ್ನು ಆಚರಿಸುತ್ತಿರುವ ಜಗತ್ತಿಗೆ ನನ್ನ ಹೊಸ ಚಿಂತನೆ ನಮ್ಮೆಲ್ಲರ ಮುಂದಿನ ಜೀವನದ ಭಾಗವಾಗಲಿ ಎಂದು ಬಯಸುತ್ತಿರುವೆ.
ಈಗ ಜಗತ್ತಿನಲ್ಲಿ ಅನೇಕ ರೀತಿಯ *"ಮಟ್ಟಗಳನ್ನು"* ವ್ಯಾವಹಾರಿಕವಾಗಿ ಬಳಸುತ್ತೇವೆ. ಉದಾಹರಣೆಗೆ
* ಶ್ರೀಮಂತಿಕೆಯ ಮಟ್ಟ
* ಬಡತನದ ಮಟ್ಟ
* ಬುದ್ಧಿವಂತಿಕೆಯ ಮಟ್ಟ
* ಅಭಿವೃದ್ಧಿ ಮಟ್ಟ
* ಹಿಂದುಳಿದಿರುವಿಕೆ ಮಟ್ಟ
ಹೊಸ ವರ್ಷಕ್ಕೆ ನಾನು ಹೊಸ ವರ್ಷ ಆಚರಿಸುತ್ತಿರುವ ಇಂದಿನ ಜಗತ್ತಿಗೆ ಪ್ರಸ್ತಾಪಿಸುತ್ತಿರುವ ಹೊಸ ಚಿಂತನೆಯೇ ನಾವು ನಮ್ಮ *ನಮ್ಮ ಸತ್ಯವಂತಿಕೆ ಮಟ್ಟ ಎಷ್ಟಿದೆ ?* ಎನ್ನುವುದನ್ನು ಗುರುತಿಸಿಕೊಳ್ಳುವುದು.
ಏಕೆಂದರೆ
ಹುಟ್ಟಿದ ಒಂದೇ ದಿನಕ್ಕೆ ಯಾವುದೇ ಮಗು ನಡೆಯುವುದಕ್ಕೆ ಸಾಧ್ಯವಿಲ್ಲ. *ಅದೇ ರೀತಿ ಒಂದೇ ದಿನದಲ್ಲಿ ಯಾರು ಪೂರ್ಣ ಸತ್ಯವಂತರಾಗುವುದು ಸಾಧ್ಯವಿಲ್ಲ*. ಆದ್ದರಿಂದ ನಾವು ಮೊಟ್ಟಮೊದಲು *ನಮ್ಮ ನಮ್ಮ ಸತ್ಯವಂತಿಕೆಯ ಮಟ್ಟವನ್ನು ಕಂಡುಕೊಳ್ಳೋಣ.* ಅದರ ನಂತರ *ಸ್ವಲ್ಪ ಸ್ವಲ್ಪ ನಮ್ಮ ಸತ್ಯವಂತಿಕೆ ಮಟ್ಟವನ್ನು ಹೆಚ್ಚಿಸಿಕೊಳ್ಳೋಣ*. ಈ ಮೂಲಕ ಒಂದಿಲ್ಲ ಒಂದು ದಿನ
* ನಾವೆಲ್ಲರೂ ಪೂರ್ಣ ಸತ್ಯವಂತರಾಗುವುದು ಸಾಧ್ಯವಿದೆ.
* ಜಗತ್ತು ಸಹ ಸತ್ಯ ಯುಗ ಆಗುವುದು ಸಾಧ್ಯವಿದೆ.
* ಈ ಸತ್ಯ ಮಾತ್ರದಿಂದಲೇ ಜಗತ್ತಿನ ಸಮಸ್ಯೆಗಳ ಪರಿಹಾರವಿದೆ.
* ಈ ಸತ್ಯ ಮಾತ್ರ ನಮ್ಮ ಅಂತರಂಗವನ್ನು ಶುದ್ದ ಮಾಡುತ್ತದೆ.
* ಸತ್ಯ ಮಾತ್ರ ದೇವರ ಒಲುಮೆಗೆ ಕಾರಣವಾಗುತ್ತದೆ.
ಈ ವಿಡಿಯೋದಲ್ಲಿ ನಾನು ಅನೇಕರನ್ನು ವ್ಯಕ್ತಿಗತವಾಗಿ ಭೇಟಿಯಾಗಿ ಸತ್ಯದ ಪ್ರಚಾರ ಮಾಡಿದ್ದೇನೆ. ಎಲ್ಲರನ್ನು ವ್ಯಕ್ತಿಗತವಾಗಿ ಸಂಪರ್ಕಿಸಲು ಸಾಧ್ಯವಿಲ್ಲ. ಹಾಗಾಗಿ ಈ ವಿಡಿಯೋ ಮೂಲಕ ಮೂಲಕ ತಮ್ಮನ್ನು ನಾನು ವೈಯಕ್ತಿಕವಾಗಿ ಸಂಪರ್ಕಿಸುತ್ತಿದ್ದೇನೆ. ದಯವಿಟ್ಟು ಈ ಸಂದೇಶವನ್ನು ಗಂಭೀರವಾಗಿ ಸ್ವೀಕರಿಸಿ ಎಂದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.
ಕ್ರಿ.ಶ. 2026ನೇ ಹೊಸ ವರ್ಷಕ್ಕೆ ನಾನು ಪ್ರಸ್ತಾಪಿಸುತ್ತಿರುವ ಹೊಸ ಚಿಂತನೆಯೇ *ನಾವು ನಮ್ಮ ಸತ್ಯವಂತಿಕೆಯ ಮಟ್ಟವನ್ನು ಗುರುತಿಸುವುದು*. ಹಾಗೂ ವರ್ಷಪೂರ್ತಿ *ಈಗಿನ ಮಟ್ಟಕ್ಕಿಂತಲೂ ಹೆಚ್ಚು ಸತ್ಯವಂತರಾಗುವದಕ್ಕೆ ಪ್ರಯತ್ನಿಸುವುದು.* ಇದರಿಂದ ನಾವೆಲ್ಲರೂ ಒಂದಿಲ್ಲಾ ಒಂದು ದಿನ ಪೂರ್ಣ ಸತ್ಯವಂತರಾಗುವುದು ಶತಃಸಿದ್ಧ.
ಎಲ್ಲರಿಗೂ ಕ್ರಿ.ಶ. 2026ನೇ ವರ್ಷದ ಹಾರ್ಧಿಕ ಶುಭಾಶಯಗಳು.
✍️ URAIN NAMAH
(ಈ ಪದ ಸತ್ಯ ಯುಗದ ಮುನ್ನುಡಿ.
ಈ ಪದ ಯುಗ ಪರಿವರ್ತನೆಗೆ ನಾಂದಿ)
- ಸೂರ್ಯನಾರಾಯಣ ಜಿ ಚಿಮ್ಮನಚೋಡಕರ
ಸತ್ಯಯುಗ ಫೌಂಡೇಷನ್ ಬೈ ಯುರೇವ್ ನಮಃ ಟ್ರಸ್ಟ್
Comments
Post a Comment