ಶ್ರದ್ಧಾಂಜಲಿ ಪರಮ ಬೈರಾಗಿಗೆ (ಸಿದ್ದೇಶ್ವರ ಸ್ವಾಮಿಗಳು)
ಆಡಂಬರವೇ ಇಲ್ಲದ ಸರಳ ಬದುಕು
ಎಲ್ಲೆಲ್ಲೂ ದುರ್ಲಭ ವೈರಾಗ್ಯದ ಇಣುಕು
ಜೇಬಿಲ್ಲದ ಜ್ಞಾನದ ಕುಬೇರ
ಯಾವುದಕ್ಕೂ ಅಂಟಿಕೊಳ್ಳದ ಕಮಲ
ನೋಡಲು ತೆಳ್ಳನೆಯ ಶರೀರ
ಅನುಭವಕ್ಕೆ ನಿಲುಕದ ಶಾರೀರ
ಸಹಜತೆಯ ದೇಶಿ ಭಾಷೆ ಸೋಗಡು
ಕೇಳುಗನ ಅಂತರಾಳದಲ್ಲಿ ಮಾಡುವುದು ಗುಡುಗು
ನಿಮ್ಮಿಂದ ಪ್ರಕೃತಿ ಸಹ ಜೀವ ಪಡೆಯುವುದು
ಜೀವ ಪಡೆದು ಸಹಜ ಜ್ಞಾನ ಕೊಡುವುದು
ಜಗತ್ತನ್ನು ನೋಡುವ ನೋಟವನ್ನೆ ಬದಲಾಯಿಸುವುದು
ದ್ವೇಷ ಅಸೂಯೆ ಅಳಿಸಿ ಪ್ರೀತಿ ಪ್ರೇಮವ ಬೆಳೆಸುವುದು
ಅನುಗ್ರಹಕ್ಕೆ ಕೇವಲ ನಿಮ್ಮ ಉಪಸ್ಥಿತಿ ಸಾಕು
ತುಟಿ ಬಿಚ್ಚಿದರೆ ಎಲ್ಲರ ಮನಸ್ಸಾಗುವುದು ನಿಮ್ಮಯ ವಶ
ಬೇಕಾದರೆ ಇರಲಿ ಸಹಸ್ರ ಸಹಸ್ರ ಜನರು
ನೀವಿದ್ದರೆ ಸಣ್ಣ ಸೂಜಿ ಬಿದ್ದರೂ ದೊಡ್ಡ ಶಬ್ದ ಮಾಡುವುದು
ನಿಮ್ಮ ಪೂರ್ಣ ಜೀವನವೇ ವೈರಾಗ್ಯದ ತಪಸ್ಸು
ನಿಮ್ಮ ಸ್ಮರಿಸಿದರೆ ಸಾಕು ನಿಮ್ಮ ತಪಸ್ಸಿನಲ್ಲಿ ನಮಗೆ ಸಿಗುವುದು ಪಾಲು
ಆತ್ಮ ತತ್ವದಲ್ಲಿ ಏಕಾದಶ ಇಂದ್ರಿಯಗಳ ಇರಿಸಿದ ನೀವು
ನಮಗೆ ವಿದಾಯ ಹೇಳಿದೀರಲ್ಲ ಏಕಾದಶಿಯಂದೆ
ಈ ಜೀವನದಲ್ಲಿ ಮರೆಯಲಾಗದು ನಿಮ್ಮನ್ನು ಏಂದೆಂದು
ನಿಮ್ಮಿಂದ ಬೆಳಗಿದ ಆಧ್ಯಾತ್ಮ ದೀಪ ಇದು, ಆರದು ಏಂದೆಂದು
URAIN NAMAH 03/01/2022
Comments
Post a Comment