ದು:ಖಿಸುವುದು ಒಳಿತಲ್ಲ ಮನಸ್ಸೆ
ಏನಾಯಿತು ಒಳ್ಳೆಯದೇ ಆಯಿತು
ಏನಾಗುತ್ತಿದೆ ಒಳ್ಳೆಯದೇ ಆಗುತ್ತಿದೆ
ಏನಾಗುವುದು ಒಳ್ಳೆಯದೇ
ಆಗುವುದು.
ನಗು ನಗುತಾ ಕರ್ಮ ಮಾಡುವೆವು
ಫಲ ಬಂದಾಗ ಅಳುವುದು ಏತಕೆ ?
ಫಲ ಬಂದಾಗ ಕರ್ಮ ಕಳೆಯಿತು
ಎಂದು ಖುಷಿ ಪಡು
ಎಷ್ಟೇ ಕತ್ತಲ ರಾತ್ರಿ ಇದ್ದರೂ
ಮತ್ತೆ ಹಗಲಾಗುವುದು ಖಚಿತ
ಬದಲಾವಣೆಯೇ ಜಗತ್ತಿನ ನಿಯಮ
ಹಳಹಳಿಸದಿರು ದುಃಖಿಸದಿರು
ಕಗ್ಗತ್ತಲ ಕಳೆದು ಹಗಲು ಬರುವುದು ನಿಶ್ಚಿತ
ದುಃಖದಿಂದ ಮತ್ತೆ ದುಃಖ ಜನನ
ದುಃಖಿಸದಿರು ಹಳಹಳಿಸದಿರು ಮನಸೇ
Comments
Post a Comment