ಜೀವಿಗಳ ಶ್ರೇಣಿ

 ಜೀವಿಗಳ ಶ್ರೇಣಿ


1) ತನ್ನ ಒಳಿತು ಕೆಡುಕುಗಳ ಯೋಚನೆ ಮಾಡದೆ ಕೇವಲ ಅವಶ್ಯಕತೆ ಪೋರೈಸಿಕೊಳ್ಳುವಂತಹ ಪ್ರಾಣಿ. 


2) ಅವಶ್ಯಕತೆ ಪೂರೈಸಿಕೊಳ್ಳುವಾಗ ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡುವಂತಹ ತಿಳುವಳಿಕೆಯಿರುವ ಪ್ರಾಣಿ.


3) ಮೂರನೇ ರೀತಿಯ ಪ್ರಾಣಿ ತನ್ನ  ಅವಶ್ಯಕತೆ ಪೂರೈಸಿಕೊಳ್ಳಲು ಕೇವಲ ಒಳಿತು ಕೆಡುಕುಗಳ ಬಗ್ಗೆ  ಮಾತ್ರ ಯೋಚನೆ ಮಾಡುವುದಿಲ್ಲ. ಇದರ ಜೊತೆಗೆ ಸರಿ ತಪ್ಪುಗಳನ್ನು ಸಹ ಯೋಚಿಸಿ. ಅದು ತಪ್ಪಾಗಿದ್ದರೂ ಸಹ ಅದು ಸರಿಯೆಂದು ಸಮರ್ಥನೆಯ ವಿಚಾರಗಳನ್ನು ನೀಡಿ ತನ್ನ ಅವಶ್ಯಕತೆ ಪೊರೈಸಿಕೊಳ್ಳುತ್ತದೆ.


4) ನಾಲ್ಕನೆಯದೆ ಮನುಷ್ಯತ್ವದ ಸಂಸ್ಕಾರ ಇರುವ ಮನುಷ್ಯ. ಈತ/ಈಕೆ‌ ಸರಿ, ತಪ್ಪು ಯೋಚನೆ ಮಾಡಿ ಕೇವಲ ಸರಿ ಇದ್ದಾಗ ಮಾತ್ರ ಆ ಅವಶ್ಯಕತೆ ಪೊರೈಸಿಕೊಳ್ಳುತ್ತವೆ. ಇದಕ್ಕೆ ಹೊರತು ತನ್ನ ಬುದ್ಧಿ ಶಕ್ತಿಯಿಂದ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ.


 (ಸರಿ ಇಲ್ಲದಿದ್ದರೆ "ಸಂಯಮ" ಎನ್ನುವ ಅಸ್ತ್ರ ಉಪಯೋಗಿಸುತ್ತವೆ. )


ಇನ್ನೂ ಮುಂದಿನ ಹಂತಗಳು ಸಹ ಇವೆ.


Comments