"ಅನಾಚಾರವನ್ನು ಸಮಾಜ ಸ್ವೀಕರಿಸಲಿ" ಎನ್ನುವ ಲೇಖನಕ್ಕೆ ಪ್ರತಿಕ್ರಿಯೆ
(#ಜೀವಿಗಳ_ಶ್ರೇಣಿ)
(ಒಂದು ಅನಾಚಾರವನ್ನು ಆಚಾರವೆಂದು ಸ್ವೀಕರಿಸಬೇಕು. ಸಮಾಜ ಅವರನ್ನು ಒಪ್ಪಿಕೊಳ್ಳಬೇಕು. ಹಾಗೂ ಗೌರವಿಸಬೇಕು, ಎಂದು ಒಬ್ಬರು ಬರೆದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಲೇಖನ ಬರೆದಿರುವೆ. ಹಾಗಾಗಿ ಮೊದಲು ಅವರು ಬರೆದಿರುವ ಲೇಖನ ಒಮ್ಮೆ ಓದಿ. ಲೇಖನದ Link 👇)
G. H ಮೇಡಮ್ ,
ನೀವು ನಿಜಕ್ಕೂ ನಿಮ್ಮ ಉತ್ತಮ ಸಂವಹನ ಕೌಶಲ್ಯದಿಂದ ಹಾಳಾಗುತ್ತಿದ್ದ ಒಂದು ಹುಡುಗಿಯ ಬಾಳನ್ನು ಕಾಪಾಡಿದ್ದೀರಿ. ವಿದ್ಯಾರ್ಥಿನಿಯ ಪ್ರತಿ ಸಹಾನುಭೂತಿ ತೋರಿ ಆಕೆಯ ಒಳ ಮನಸ್ಸನ್ನು ಅರಿತು ಅದಕ್ಕೆ ಒಳ್ಳೆಯ ಚಿಕಿತ್ಸೆಯನ್ನೇ ನೀಡಿದ್ದೀರಿ.
ಆ ಹುಡುಗಿಗೆ ಮತ್ತೆ ಸರಿ ದಾರಿಯಲ್ಲಿ ತರುವುದಕ್ಕಾಗಿ ನೀವು ಆಕೆಯೊಂದಿಗೆ ಆಡಿರುವ ಮಾತುಗಳು (ಹಸ್ತ ಮೈಥುನ ತಪ್ಪಲ್ಲ ಎಂದು ಹೇಳಿದ್ದು) ಆ ಸಮಯದ ಅವಶ್ಯಕತೆಯೇ ಆಗಿತ್ತು. ಹಾಗೆಯೇ ನೀವು ಆಕೆಯ ಜೊತೆ ಸ್ಪಂದಿಸಿದ್ದು ಅಪ್ಪಿಕೊಂಡಿದ್ದು, ಪ್ರೀತಿ ತೋರಿದ್ದು, ಕರುಣೆ ಕಾಳಜಿ ತೋರಿದ್ದು. ಇವೆಲ್ಲವೂ ಸರಿ ಇದೆ.
ಒಂದು ವೇಳೆ ನೀವು ಹೀಗೆ ಮಾಡದೆ ಇದ್ದಲ್ಲಿ ಆಕೆ ತನ್ನ ಅಂತರಂಗವನ್ನೆ ತೆರೆದುಕೊಳ್ಳುತ್ತಿರಲಿಲ್ಲ. ಮುಕ್ತವಾಗಿ ನಿಮ್ಮೊಂದಿಗೆ ಮಾತನಾಡುತ್ತಿರಲಿಲ್ಲ. ಆಗ ಆಕೆಯ ಸಮಸ್ಯೆ ಅರಿತು, ಆ ಸಮಸ್ಯೆಯಿಂದ ಆಕೆಯನ್ನು ಹೊರತರಲು ಆಗುತ್ತಿರಲಿಲ್ಲ.
ನೀವು ಕೇವಲ ಆ ಹುಡುಗಿಯ ಒಳಿತಿಗಾಗಿ ಏನೇನು ಮಾಡಿದ್ದೀರಿ ಅದೆಲ್ಲವು ಸರಿ. ಆದರೆ ಒಬ್ಬ ವ್ಯಕ್ತಿಯ ತಪ್ಪನ್ನು ಸುಧಾರಿಸಿದ ನಂತರ ಆ ತಪ್ಪು ತಪ್ಪೇ ಅಲ್ಲ (ಹಸ್ತ ಮೈಥುನ ತಪ್ಪಲ್ಲ) ಎಂದು ಸಮರ್ಥಿಸಿಕೊಂಡು ಅದು ಎಲ್ಲಾ ಕಡೆ ಸಾರ್ವರ್ತಿಕವಾಗಿ ಹರಡುವಂತೆ ಪ್ರೇರಣೆ ಕೊಟ್ಟರೆ ಆ ತಪ್ಪು ಸುಧಾರಿಸಿದರ ಫಲವೇನು ?
ಸಾರ್ವಜನಿಕವಾಗಿ ಕರುನಾಡಿನ ಮುಖಪುಟದ ಗೋಡೆಗಳಲ್ಲಿ ಈ ವಿಷಯ ಚರ್ಚಿಸಲಾಗುತ್ತಿದೆ. ಆದರೆ ವಿಷಯದೊಂದಿಗೆ ಸಂಬಂಧವಿರುವ ಈ ಲೇಖನದ ಕೆಳಗಿನ ವಿಷಯ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಓದುಗರು ಇದನ್ನು ಸಹ ತಿಳಿದಿರಬೇಕುನ್ನುವ ಉದ್ದೇಶದಿಂದ ಇದನ್ನು ಹಂಚಿಕೊಳ್ಳುತ್ತಿರುವೆ.
https://www.facebook.com/share/p/v67Qqrb9Y8Fh7vsA/?mibextid=xfxF2i
ಯಾವುದೇ ರೀತಿಯ ಮೈಥುನದಿಂದ ಪುರುಷರಲ್ಲಿರುವ ವೀರ್ಯ, ಸ್ತ್ರೀಯಲ್ಲಿರುವ ರಜ ನಾಶವಾಗುತ್ತದೆ.
ಆಯುರ್ವೇದ ತಜ್ಞರ ಪ್ರಕಾರ 40 ರಿಂದ 80 ಹನಿಗಳ ರಕ್ತ ಒಂದು ಹನಿ ವೀರ್ಯ/ರಜ ಆಗುತ್ತದೆ, ಎಂದು ಹೇಳಲಾಗಿದೆ.
ಒಬ್ಬ ಶಿಷ್ಯ ತನ್ನ ಗುರು ಧನ್ವಂತರಿಯವರಿಗೆ ಆರೋಗ್ಯವನ್ನು ಪಡೆದುಕೊಳ್ಳುವ ಗುಟ್ಟು ಏನೆಂದು ಕೇಳಿದಾಗ, ಧನ್ವಂತರಿಯವರು ಬ್ರಹ್ಮಚರ್ಯವೇ ಆರೋಗ್ಯದ ಗುಟ್ಟು ಎಂದು ಹೇಳುತ್ತಾರೆ.
ಬ್ರಹ್ಮಚರ್ಯ ಇಲ್ಲದಿದ್ದರೆ ವ್ಯಕ್ತಿ ಶಾರೀರಿಕ ಮಾನಸಿಕ, ಬೌದ್ಧಿಕ, ನೈತಿಕ, ಆಧ್ಯಾತ್ಮಿಕ, ಬೆಳವಣಿಗೆ ಹೊಂದುವುದಿಲ್ಲ. ನೀವು ಈ ಎಲ್ಲಾ ಲಕ್ಷಣಗಳನ್ನು ಹಸ್ತ ಮೈಥುನ ಚಟಕ್ಕೆ ಎಡಿಕ್ಟ ಆಗಿದ್ದ ಆ ಹುಡುಗಿಯಲ್ಲಿ ಕಂಡಿದ್ದೀರಿ.
ಇನ್ನೊಂದು ಬಹಳ ಮಹತ್ವಪೂರ್ಣ ವಿಷಯವೆಂದರೆ ವಿರ್ಯ,ರಜ ಎಲ್ಲಾ ಪ್ರಾಣಿಗಳಲ್ಲಿ ಇರುವುದು ಕೇವಲ ಸಂತಾನೋತ್ಪತ್ತಿ/ಮೈಥುನಕ್ಕಾಗಿ ಮಾತ್ರ.
ಮೈಥುನ ಹೊರತುಪಡಿಸಿ ಪ್ರಾಣಿಗಳಲ್ಲಿ ವೀರ್ಯ/ರಜ ಕ್ಕೆ ಬೇರೆ ಯಾವುದೇ ರೀತಿಯ ಸಾಧ್ಯತೆ ಇಲ್ಲ. ಕಾರಣ ಅವುಗಳ ಶರೀರ ಅಡ್ಡವಾಗಿ ಇವೆ. ನೇರವಾಗಿ ಇಲ್ಲ.
ಆದರೆ ಮನುಷ್ಯರಿಗೆ ವೀರ್ಯ, ರಜ ಇರುವುದು ಕೇವಲ ಮೈಥುನಕ್ಕಾಗಿ ಅಲ್ಲ. ಇದು ಶ್ರೇಷ್ಠ ಓಜಸ್ಸು ಶಕ್ತಿಯಾಗಿ ಪರಿವರ್ತನೆ ಮಾಡಲು ಸಹ ಇದೆ. ಕಾರಣ ಮನುಷ್ಯ ಶರೀರ ನೇರವಾಗಿದೆ. ಹಾಗೂ ಈ ಶ್ರೇಷ್ಠ ಮನುಷ್ಯ ಶರೀರ ಅನೇಕ ಜನ್ಮಗಳ ನಂತರ ಲಭಿಸುತ್ತದೆ.
(ಮೂಲಾಧಾರದಲ್ಲಿರುವ ಶಕ್ತಿಯನ್ನು ಸಹಸ್ರಾರದಲ್ಲಿರುವ ಶಿವನೊಂದಿಗೆ ಸೇರಿಸಲು, ತನ್ನನ್ನು ತಾನು ಹೀಗೆ ಪರಮಾತ್ಮನನ್ನು ಅರಿತುಕೊಳ್ಳಲು ಇದೆ.)
ಬಾಲಕಿಯರ, ಸ್ತ್ರೀಯ ಹಸ್ತ ಮೈಥುನ ಕುರಿತು ತಮ್ಮ ಸಮರ್ಥನೆ ಹಾಗೂ ಅದು ಎಲ್ಲರ ಅವಶ್ಯಕತೆಯಾದ ಕಾರಣ ಅದನ್ನು ಮಾಡುವ ಅವರನ್ನು ಗೌರವಿಸಬೇಕು ಎನ್ನುವ ತಮ್ಮ ಸಲಹೆ ಈ ನಾಡಿಗೆ ಹೊಸ ವಿಷಯವಾಗಿರುವ ಕಾರಣ ನಿಮ್ಮ ಲೇಖನದಲ್ಲಿ ಒಂದು ವಿಭಿನ್ನ, ಕ್ರಾಂತಿಕಾರಿ ನಡೆಯಂತೆ ಕಾಣಲಾಗುತ್ತಿದೆ.
ಆದರೆ ವಿದೇಶಿಯರಿಗೆ ಸಂಬಂಧಪಟ್ಟಂತೆ ನೀವು ಹೇಳಿದ (ಎಲ್ಲರ ಅವಶ್ಯಕತೆ) ವಿಷಯ ಬಹಳ ಹಳತಾದದ್ದು. (ಆ ದೇಶಗಳಲ್ಲಿ ಮಗುವಿನ ತಂದೆಯ ಹೆಸರು ಹೇಳದೆ ಕೇವಲ ತಾನು ಗರ್ಭಿಣಿಯೆಂದು ಹೇಳುವುದು ಸಹ ಅಗೌರವದ ವಿಷಯವಲ್ಲ. ಅದು ಅಭಿನಂದನೀಯ ವಿಷಯ. )
ಅಲ್ಲಿ ಹದಿವಯಸ್ಸಿನಲ್ಲಿ ಹಸ್ತ ಮೈಥುನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕಾರಣ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವಿರುದ್ಧ ಲಿಂಗಿಗಳ ಮೈಥುನವೇ ನಡೆಯುತ್ತದೆ. ಅಮೆರಿಕಾದ ಕೆಲವು ರಾಜ್ಯಗಳ ಗವರ್ನರ್ ಅಲ್ಲಿನ ಶಾಲಾ ಕಾಲೇಜುಗಳ ಮಕ್ಕಳಿಗೆ ಉಚಿತ ಕಾಂಡೊಮ್ ನೀಡುವ ಕುರಿತು ಚಿಂತನೆ ನಡೆಸುತ್ತಿದ್ದಾರೆ. (ಇದು ನಿಜಕ್ಕೂ ಸತ್ಯ. ಇದನ್ನು ಯಾರು ಬೇಕಾದರೂ ಸರ್ಚ್ ಮಾಡಬಹುದು.)
ಇದರ ಹಿಂದಿರುವ ವಿಚಾರ ತಾವು ಹೇಳಿದಂತೆ ಆಹಾರ, ನಿದ್ರೆಯಂತೆ, ಮೈಥುನ ಸಹ ಎಲ್ಲಾ ಜೀವಿಗಳ ಒಂದು ಅವಶ್ಯಕತೆ ಎನ್ನುವುದಾಗಿದೆ.
ಎಲ್ಲಾ ಜೀವಿಗಳಿಗೂ ಒಂದೇ ರೀತಿಯ ಅವಶ್ಯಕತೆಗಳಿವೆ. ಆದರೆ ಅವಶ್ಯಕತೆ ಪೂರ್ಣ ಮಾಡಿಕೊಳ್ಳುವ ರೀತಿ ಜೀವಿಗಳನ್ನು ವಿಭಿನ್ನ ಜೀವಿಗಳನ್ನಾಗಿ ಮಾಡುತ್ತದೆ. ಆ ವಿಭಿನ್ನತೆ ಈ ರೀತಿಯಾಗಿದೆ.
ಜೀವಿಗಳ ಶ್ರೇಣಿ
1) ತನ್ನ ಒಳಿತು ಕೆಡುಕುಗಳ ಯೋಚನೆ ಮಾಡದೆ ಕೇವಲ ಅವಶ್ಯಕತೆ ಪೋರೈಸಿಕೊಳ್ಳುವಂತಹ ಪ್ರಾಣಿ.
2) ಅವಶ್ಯಕತೆ ಪೂರೈಸಿಕೊಳ್ಳುವಾಗ ಒಳಿತು ಕೆಡುಕುಗಳ ಬಗ್ಗೆ ಯೋಚನೆ ಮಾಡುವಂತಹ ತಿಳುವಳಿಕೆಯಿರುವ ಪ್ರಾಣಿ.
3) ಮೂರನೇ ರೀತಿಯ ಪ್ರಾಣಿ ತನ್ನ ಅವಶ್ಯಕತೆ ಪೂರೈಸಿಕೊಳ್ಳಲು ಕೇವಲ ಒಳಿತು ಕೆಡುಕುಗಳ ಬಗ್ಗೆ ಮಾತ್ರ ಯೋಚನೆ ಮಾಡುವುದಿಲ್ಲ. ಇದರ ಜೊತೆಗೆ ಸರಿ ತಪ್ಪುಗಳನ್ನು ಸಹ ಯೋಚಿಸಿ. ಅದು ತಪ್ಪಾಗಿದ್ದರೂ ಸಹ ಅದು ಸರಿಯೆಂದು ಸಮರ್ಥನೆಯ ವಿಚಾರಗಳನ್ನು ನೀಡಿ ತನ್ನ ಅವಶ್ಯಕತೆ ಪೊರೈಸಿಕೊಳ್ಳುತ್ತದೆ.
4) ನಾಲ್ಕನೆಯದೆ ಮನುಷ್ಯತ್ವದ ಸಂಸ್ಕಾರ ಇರುವ ಮನುಷ್ಯ. ಈತ/ಈಕೆ ಸರಿ, ತಪ್ಪು ಯೋಚನೆ ಮಾಡಿ ಕೇವಲ ಸರಿ ಇದ್ದಾಗ ಮಾತ್ರ ಆ ಅವಶ್ಯಕತೆ ಪೊರೈಸಿಕೊಳ್ಳುತ್ತವೆ. ಇದಕ್ಕೆ ಹೊರತು ತನ್ನ ಬುದ್ಧಿ ಶಕ್ತಿಯಿಂದ ತಪ್ಪನ್ನು ಸರಿ ಎಂದು ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ.
(ಸರಿ ಇಲ್ಲದಿದ್ದರೆ "ಸಂಯಮ" ಎನ್ನುವ ಅಸ್ತ್ರ ಉಪಯೋಗಿಸುತ್ತವೆ. )
ಇದೇ ನೈತಿಕತೆ ಮಾನವೀಯತೆಯ ಶ್ರೇಷ್ಠ ಸಂಸ್ಕಾರ ಹೊಂದಿದ ಜೀವಿಯ ಲಕ್ಷಣ.
ಹೊಟ್ಟೆಗೆ ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆ. ಹಸಿವೆಯಾದಾಗ ಒಂದು ವೇಳೆ ಆತನಲ್ಲಿ ಆಹಾರ ಇಲ್ಲದಿದ್ದರೆ ಆತ ಕಳ್ಳತನದಿಂದ ಆಹಾರ ಸೇವಿಸುತ್ತಾನೆ.. ಪರಿಶ್ರಮವಿಲ್ಲದೆ ಒಂದು ಅವಶ್ಯಕತೆ ಪೂರ್ಣವಾಗುವುದನ್ನು, ತೃಪ್ತಿ ಸಿಗುವದನ್ನು ತಿಳಿದ ಆತ, ಕಳ್ಳತನವನ್ನೆ ವೃತ್ತಿಯಾಗಿಸುತ್ತಾನೆ.
ಅಂತಹ ವ್ಯಕ್ತಿಯನ್ನು ಆತನ ದುಷ್ಕೃತ್ಯವನ್ನು ನಿವಾರಿಸುವಂತೆ ಆತನಿಗೆ ಸಂಬಂಧಪಟ್ಟವರು ತಮ್ಮಲ್ಲಿ ವಿನಂತಿಸುತ್ತಾರೆ. ಆಗ ತಾವು ಆತನ ಹಸಿವೆಯ ನೋವಿಗೆ ಸಹಾನುಭೂತಿ ತೋರಿ, ಆತನನ್ನು ಅಪ್ಪಿಕೊಂಡು ಪ್ರೀತಿಸಿ, ಆತನ ಬಗ್ಗೆ ಕಾಳಜಿ ವ್ಯಕ್ತಪಡಿಸಿ ತದ ನಂತರ ಕಳ್ಳತನ ಸರಿಯಲ್ಲ ಎಂದು ತಿಳಿಸಿ ಆತನನ್ನು ದುಷ್ಕೃತ್ಯದಿಂದ ಹೊರಗೆ ತರುತ್ತೀರಿ.
ಆದರೆ ಹೊರಗೆ ತಂದ ನಂತರ ಪುನಃ ಆತನ ದುಷ್ಕೃತ್ಯದ ಕುರಿತು ಸಹಾನುಭೂತಿ ಮುಂದುವರಿಸಿ, ಹೊಟ್ಟೆಯ ಹಸಿವು ಒಂದು ಮೂಲಭೂತ ಅವಶ್ಯಕತೆ. ಹೀಗಾಗಿ ಹಸಿವೆಯಾದಾಗ ಆಹಾರವಿಲ್ಲದಿದ್ದರೆ ಕದ್ದು ತಿನ್ನುವುದು ತಪ್ಪಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿ. ಕಳ್ಳತನವನ್ನು ಸಾರ್ವತ್ರಿಕಗೊಳಿಸಿದಲ್ಲಿ ಒಬ್ಬ ವ್ಯಕ್ತಿಯನ್ನು ಕಳ್ಳತನದಿಂದ ಹೊರಗಡೆ ತಂದಿರುವುದರ ಲಾಭವೇನು ?
ಒಂದು ವಿಷಯದ ಕುರಿತು ಸಂಬಂಧಿಸಿದವರಿಗೆ ಎಲ್ಲಾ ವಿಷಯದ ಮಾಹಿತಿ ತಲುಪಬೇಕು. ಆಗ ಅದರ ಸರಿ ತಪ್ಪುಗಳು ತಿಳಿದು ಅದನ್ನು ಮಾಡುವುದು ಬಿಡುವುದು ಅವರಿಗೆ ಬಿಟ್ಟದ್ದು.
ಆದರೆ ಸಂಬಂಧಪಟ್ಟವರಿಗೆ ಅಪೂರ್ಣ ಮಾಹಿತಿ ಲಭಿಸಿ, ಆ ಕಡೆ ತಲೆ ಹಾಕದೇ ಇರುವವರಿಗೂ ಸಹ ಆ ಕಡೆ (ಎಲ್ಲಾ ಬಾಲಕಿಯರು, ಸ್ತ್ರೀಯರು ಹಸ್ತ ಮೈಥುನದ ಕಡೆಗೆ) ಯೋಚಿಸುವಂತೆ ಮಾಡಿ ಅದನ್ನು ಅವರು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವದಕ್ಕೆ ಒಂದು ಪ್ರೇರಣೆ ಪಡೆದುಕೊಂಡು ಇಡೀ ಸಾಮಾಜಿಕ ವ್ಯವಸ್ಥೆಯೇ ಹಾಳಾದರೆ, ಅದರ ದೋಷ ಯಾರಿಂದ ಪ್ರೇರಣೆ ಪಡೆದರು ಅವರಿಗೆ ತಟ್ಟುತ್ತದೆ. (ನಿಮ್ಮ ಲೇಖನದಲ್ಲಿಯೇ ಅನೇಕ ಸ್ತ್ರೀಯರು, ನಮಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲವೆಂದು ಪ್ರತಿಕ್ರಿಯಿಸಿದ್ದಾರೆ)
ಒಬ್ಬರನ್ನು ಒಂದು ಸಮಸ್ಯೆಯಿಂದ ಪಾರು ಮಾಡಿ ನಂತರ ಹಲವರನ್ನು ಹಾಗೂ ಅದರ ಪರಿಚಯವೇ ಇಲ್ಲದವರನ್ನು ಸಹ ಆ ಸಮಸ್ಯೆಯೊಳಗೆ ಪ್ರವೇಶಿಸಲು ನೈತಿಕ ಬೆಂಬಲ, ಪ್ರೇರಣೆ ಕೊಟ್ಟಾಗ ಒಬ್ಬರನ್ನು ಸಮಸ್ಯೆಯಿಂದ ಹೊರಗಡೆ ತಂದದರ ಲಾಭವೇನು ಉಳಿಯಿತು ?
ಲೇಖನ ಓದಿದ ನಂತರ ನಾನು ದಾರಿಯಲ್ಲಿ ಬರುವಾಗ ನನ್ನ ಕಣ್ಣಿಗೆ ಬಿದ್ದ ಪುಟ್ಟ ಪುಟ್ಟ ಹೈಸ್ಕೂಲ್ ಹುಡುಗಿಯರನ್ನು ನೋಡಿದ ನಂತರ ನನಗೆ ಬಂದಂತಹ ಯೋಚನೆಯೆಂದರೆ, ಹಸ್ತ ಮೈಥುನ ತಪ್ಪಲ್ಲ ಎನ್ನುವ ಲೇಖನ ಒಂದು ವೇಳೆ ಇವರು ಓದಿದಲ್ಲಿ, ಅದರ ನಂತರ ಇವರ ಮನಸ್ಥಿತಿ ಹೇಗೆ ಆಗಬಹುದು ? ಅಥವಾ ಇವರು ಅದನ್ನು ಓದಿದ ನಂತರ ಇವರ ಚಟುವಟಿಕೆ ಯಾವ ರೀತಿ ಇರಬಹುದು ? ಎನ್ನುವ ಭಯ ನನ್ನಲ್ಲಿ ಬರುತ್ತಿತ್ತು.
ನಿಮ್ಮ ಶಾಲೆಯಲ್ಲಿಯೇ ಇರುವ ಎಷ್ಟು ಪ್ರತಿಶತ ಹುಡುಗಿಯರಿಗೆ ಸ್ತ್ರೀಯರ ಹಸ್ತ ಮೈಥುನದ ಬಗ್ಗೆ ಈಗಾಗಲೇ ತಿಳಿದಿದೆ ? ಅಥವಾ ನಿಮ್ಮ ಶಾಲೆಯಲ್ಲಿಯೇ ಇರುವ ಎಷ್ಟು ಪ್ರತಿಶತ ಹುಡುಗಿಯರು ಹಸ್ತ ಮೈಥುನದಲ್ಲಿ ತೊಡಗಿದ್ದಾರೆ ?
ಒಂದು ಶಾಲೆಯ ಮುಖ್ಯಸ್ಥರೇ ಹಸ್ತ ಮೈಥುನ ತಪ್ಪಲ್ಲ ಎಂದು ಹೇಳಿದ ನಂತರ ಇದು ಅವರ ಮೇಲೆ ಯಾವ ಪರಿಣಾಮ ಬೀರಬಹುದು ?
ದೊಡ್ಡವರು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಹಂತದಲ್ಲಿದ್ದಾರೆ ಎಂದಾಗ ಚಿಕ್ಕವರು ಆ ವಿಷಯಕ್ಕೆ ಸಂಬಂಧಪಟ್ಟಂತೆ ಆ ಹಂತದಲ್ಲಿಯೇ ಇರುವುದಿಲ್ಲ.
ಅವರು ಆ ಹಂತಕ್ಕೂ ಮುಂದೆ ಹೆಜ್ಜೆ ಇಟ್ಟಿರುತ್ತಾರೆ. ಅವರು ಇನ್ನೂ ಬಹಳ ಮುಂದೆ ಹೋಗಿರುತ್ತಾರೆ.
ಇಂದು ನೀವು ಹಸ್ತ ಮೈಥುನ ಹುಡುಗಿಯರ, ಸ್ತ್ರೀಯರ ಒಂದು ಅವಶ್ಯಕತೆಯೆಂದು ಹೇಳುತ್ತಿದ್ದೀರಿ. ಇದನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಅವರನ್ನು ಗೌರವಿಸಬೇಕೆಂದು ಹೇಳುತ್ತಿದ್ದೀರಿ. ಆದರೆ ಮಕ್ಕಳು ಅಲ್ಲಿಗೆ ನಿಲ್ಲುತ್ತಾರೆಯೇನು ?
ಅವರು ಅಲ್ಲಿಗೆ ನಿಲ್ಲುವುದಿಲ್ಲ. ವಿರುದ್ಧ ಲಿಂಗಿಗಳ ಮೈಥುನವೇ ಈ ಜಗತ್ತಿನ ಸೃಷ್ಟಿಯ ಅವಶ್ಯಕತೆಯಾಗಿದೆ, ಎಂದು ಚಿಂತಿಸಿ, ಇಂದು ವಿದೇಶಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ಸಂಗತಿ ನಮ್ಮ ದೇಶದಲ್ಲಿಯೂ ಸಾಮಾನ್ಯವಾಗುವದಿಲ್ಲವೇ ?
ತಮ್ಮ ಲೇಖನದಲ್ಲಿ "ಮದುವೆಯವರೆಗೂ ಹೆಣ್ಣುಮಕ್ಕಳು ತಮ್ಮ sexual need ಅನ್ನು ಮುಚ್ಚಿಡುವುದು, ಅದರ ಬಗ್ಗೆ ತಮಗೇನೂ ಗೊತ್ತೇ ಇಲ್ಲ ಎನ್ನುವುದು ಎಲ್ಲಾ ಕಾಮನ್ ನಟನೆ. .
ಹಲವರಲ್ಲಿ ಇದು ತಾಳ್ಮೆ ಅಥವಾ self control ಏಕೆ ಆಗಿರಬಾರದು ?
ಈ ದುಶ್ಚಟದ ದುಷ್ಪರಿಣಾಮದ ಬಗ್ಗೆ ಚಿಂತಿಸಿ ಆ ದುಶ್ಚಟದಿಂದ ಅವರು ತಮ್ಮನ್ನು ತಾವು ಏಕೆ ರಕ್ಷಿಸಿಕೊಂಡಿರಬಾರದು ?
ತಮಗೆ ಲಭಿಸಿದ ಉತ್ತಮ ಸಂಸ್ಕಾರದ ಪ್ರಭಾವದಿಂದ ಆ ದುಶ್ಚಟದಿಂದ ಅವರು ಏಕೆ ದೂರವಿರಬಾರದು?
ಈ ನನ್ನ ಲೇಖನದ ಉದ್ದೇಶ ಬಾಲಕಿಯರ/ಸ್ತ್ರೀಯರ ಹಸ್ತ ಮೈಥುನ ಸರಿಯೇ ಅಥವಾ ತಪ್ಪೇ ಎಂದು ಹೇಳುವುದಾಗಿಲ್ಲ. ಅದು ಅವರವರ ತಿಳುವಳಿಕೆಗೆ ಬಿಟ್ಟದ್ದು.
ಲೇಖನದ ಉದ್ದೇಶವೆಂದರೆ
1) ಯಾವುದೇ ರೀತಿಯಿಂದಲಾದರೂ ಸರಿ,
ತನಗೆ ಕೆಟ್ಟದ್ದಾದರೂ ಸರಿ,
ತಪ್ಪಾದರೂ ಸರಿ, ಕೇವಲ ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬೇಕೆಂದು ಯೋಚಿಸುವ ಜೀವಿಗಳು ಮಾತ್ರ ಈ ಜಗತ್ತಿನಲ್ಲಿ ಇಲ್ಲ.
2) ಅವಶ್ಯಕತೆ ಪೊರೈಸಿಕೊಳ್ಳುವ ರೀತಿ ತಪ್ಪಾದರೂ, " ಅದನ್ನು ಸರಿಯೆಂದು ಸಮರ್ಥಿಸಿಕೊಂಡು" ಅವಶ್ಯಕತೆಗಳನ್ನು ಪೊರೈಸಿಕೊಳ್ಳುವ ಜೀವಿಗಳು ಮಾತ್ರ ಈ ಜಗತ್ತಿನಲ್ಲಿ ಇಲ್ಲ.
ಇದರ ಜೊತೆಗೆ
3) ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಮುಂಚೆ ಅದರಿಂದ ತನಗೆ ಒಳಿತು, ಕೆಡುಕಾಗುವ ಕುರಿತು ಚಿಂತಿಸುವ ಜೀವಿಗಳು ಸಹ ಈ ಜಗತ್ತಿನಲ್ಲಿ ಇವೆ.
4) ಹಾಗೂ ಅವಶ್ಯಕತೆ ಪೊರೈಸಿಕೊಳ್ಳುವ ಮುಂಚೆ, ಅವಶ್ಯಕತೆ ಪೊರೈಸಿಕೊಳ್ಳುವ ರೀತಿ ಎಷ್ಟು ಸರಿ ? ಎಷ್ಟು ತಪ್ಪೆಂದು ಚಿಂತಿಸಿ ?, ಅದು ತಪ್ಪೇ ಆಗಿದ್ದಲ್ಲಿ ತಪ್ಪನ್ನು ಸರಿಯೆಂದು ಸಮರ್ಥಿಸಿಕೊಳ್ಳಲು ಹೋಗದೆ, ತಪ್ಪನ್ನು ತಪ್ಪೆಂದು ತಿಳಿದು, "ಸಂಯಮ" ಎನ್ನುವ ಅಸ್ತ್ರದಿಂದ, ತಮ್ಮನ್ನು ತಪ್ಪಿನಿಂದ ರಕ್ಷಿಸಿಕೊಂಡು ಸರಿ ದಾರಿಯಲ್ಲಿ ಹೋಗುವ ಶ್ರೇಷ್ಠ ಸಂಸ್ಕಾರದ ಜೀವಿಗಳು ಸಹ ಈ ಜಗತ್ತಿನಲ್ಲಿ ಇವೆ, ಎಂದು ಹೇಳುವುದಾಗಿದೆ.
(ಈ ಲೇಖನದ ಉದ್ದೇಶ ಯಾರ ಮನಸ್ಸನ್ನು ನೋಯಿಸುವುದು, ಅಥವಾ ಯಾರನ್ನಾದರೂ ವಿರೋಧಿಸಬೇಕು ಎನ್ನುವುದಾಗಿಲ್ಲ. ಎಲ್ಲಾ ಓದುಗರಿಗೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಪೂರ್ಣ ಮಾಹಿತಿಯನ್ನು ನೀಡಬೇಕು ಎನ್ನುವುದು ಮಾತ್ರ ಆಗಿದೆ.)
ಎಲ್ಲರಿಗೂ ಧನ್ಯವಾದಗಳು.
ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ.
✍️ URAIN NAMAH
#URAIN_NAMAH
******************************
(ವೀರ್ಯ ರಜ ನಮ್ಮ ಶರೀರದಲ್ಲಿ ಹೇಗೆ ಉತ್ಪತ್ತಿಯಾಗುತ್ತದೆ, ಎನ್ನುವ ಪ್ರಶ್ನೆಗೆ ಆಯುರ್ವೇದದಲ್ಲಿ ಸಿಗುವ ಉತ್ತರ.
ನಾವು ಸೇವಿಸಿದ ಆಹಾರ ಐದು ದಿನಗಳ ನಂತರ ರಸ ಆಗುತ್ತದೆ. ಮತ್ತೆ ಐದು ದಿನಗಳ ನಂತರ ರಕ್ತ ಆಗುತ್ತದೆ. ಹೀಗೆ ಐದೈದು ದಿನಗಳ ನಂತರ ರಕ್ತದಿಂದ ಮಾಂಸ, ಮಾಂಸದಿಂದ ಕೊಬ್ಬು, ಕೊಬ್ಬಿನಿಂದ ಎಲುಬು, ಎಲುಬಿನಿಂದ ಮಜ್ಜೆ, ಮಜ್ಜೆಯಿಂದ ಕೊನೆಯ ಧಾತು ವೀರ್ಯ/ರಜ ಆಗುತ್ತದೆ.
ಇದನ್ನು ಪುರುಷರಲ್ಲಿ ವೀರ್ಯ, ಸ್ತ್ರೀಯರಲ್ಲಿ ರಜ ಎಂದು ಕರೆಯಲಾಗಿದೆ. ಇದು ಧ್ಯಾನದಿಂದ ಓಜಸ್ಸು ಶಕ್ತಿಯಾಗಿ ಪರಿವರ್ತನೆ ಆಗುತ್ತದೆ.
ಸರಿಯಾದ ಬ್ರಹ್ಮಚರ್ಯ ಪಾಲನೆ ಮಾಡಿ ಗೃಹಸ್ಥ ಆಶ್ರಮ ಪ್ರವೇಶಿಸುವ ಸ್ತ್ರೀ ಪುರುಷರಿಂದ ಅತಿ ಶ್ರೇಷ್ಠ ಸಂತಾನದ ಪ್ರಾಪ್ತಿ ಆಗುತ್ತದೆ.
ಅತಿ ಶ್ರೇಷ್ಠ ಧಾತು ರಜ/ವೀರ್ಯ ವನ್ನು ದುಶ್ಚಟಗಳಿಂದ ಕಳೆದುಕೊಳ್ಳುವವರು ಮುಖದ ಸಹಜ ಕಾಂತಿ ಕಳೆದುಕೊಳ್ಳುತ್ತಾರೆ. ಅವರಲ್ಲಿ ಮನಸ್ಸಿನ ಏಕಾಗ್ರತೆ ಇರುವುದಿಲ್ಲ. ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಎಲುಬಿನ ಗಟ್ಟಿತನ ಇರುವುದಿಲ್ಲ. ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಇದು ಪೂರ್ಣ ದೇಹದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.)
Comments
Post a Comment