ಸರಸ್ವತಿ ಮಾತೆ 🙏
ಇಂದು ನಮ್ಮ ಆರಾಧ್ಯೆ ಸರಸ್ವತಿ ಮಾತೆಯ ಪ್ರಕಟವಾದ ದಿನ.
ಯಾವಾಗಲೂ ನನಗೆ, ನನ್ನ ಮೇಲೆ ಸರಸ್ವತಿ ಮಾತೆಯ ಅನಂತವಾದ ಕೃಪೆಯಿದೆ ಅನ್ನಿಸುತ್ತದೆ.
ಇಂದು ನಮ್ಮ ಬಳಗ (ಶಿಷ್ಯರು) ನಮ್ಮ ಜೊತೆ ಇಲ್ಲ. ಯಾರು ಇಲ್ಲದೆ ಆ ದೇವಿಯನ್ನು ಇಂದು ಹೇಗೆ ಆರಾಧಿಸಬೇಕು ಎಂದೆ ತಿಳಿಯುತ್ತಿರಲಿಲ್ಲ. ಆಗ ಬಂದ ಯೋಚನೆಯೇ ಈ ಲೇಖನ.
ಚಿಕ್ಕಂದಿನಿಂದಲೂ (ಪ್ರಾಥಮಿಕ ಶಾಲೆಯಿಂದಲೂ) ನಾನು ಮೊದಲು ಸ್ನಾನ ಮಾಡಿದ ನಂತರ ದೇವರ ಮನೆಯಲ್ಲಿ ನಮಸ್ಕರಿಸುವುದು ಸರಸ್ವತಿ ಮಾತೆಯನ್ನೆ.
ಈಗ ಇಂದು ಸರಸ್ವತಿ ಮಾತೆಯನ್ನು ಎಲ್ಲಾ ಕಡೆ ಹಂಚಿಕೊಳ್ಳುವುದೇ, ಇಂದಿನ ಒಂದು ರೀತಿಯ ಆರಾಧನೆ ಎಂದು ನಿರ್ಧಾರಕ್ಕೆ ಬಂದಿದ್ದೇನೆ.
ಹೀಗಾಗಿ ಈ ಚಿತ್ರವನ್ನು ಎಲ್ಲರಿಗೂ ಕಳುಹಿಸುತ್ತಿದ್ದೇನೆ.
(ಇದರಲ್ಲಿ ಒಂದು ರಹಸ್ಯ ಅಡಗಿದೆ.)
ಇದು ಒಂದು ಟಾಸ್ಕ್ ಸಹ ಎಂದು ತಾವು ತೆಗೆದುಕೊಳ್ಳಬೇಕು. ಈಗ ನಾನು ಹಂಚಿಕೊಳ್ಳುತ್ತಿರುವುದು ಏನು ಅನ್ನುವುದನ್ನು ತಾವು ಸೂಕ್ಷ್ಮವಾಗಿ ಗಮನಿಸಿ ಹೇಳಬೇಕು.
ಸೂಕ್ಷ್ಮವಾಗಿ ಗಮನಿಸಿ ನನ್ನ ಪ್ರಶ್ನೆಗೆ ಮನಸ್ಸಿನಲ್ಲಿಯೇ ಉತ್ತರ ಹೇಳಿಕೊಳ್ಳಿ. ಈಗ ತಾವು ಏನನ್ನು ನೋಡುತ್ತಿದ್ದೀರಿ ?
ಓದುವುದನ್ನು ಸ್ವಲ್ಪ ನಿಲ್ಲಿಸಿ, ನಾನು ಕಳುಹಿಸಿರುವುದರ ಕಡೆ ನೋಡಿ ಹೇಳಿ. ನೀವು ನೋಡುತ್ತಿರುವುದು ಏನು ?
ಸರಸ್ವತಿ ಮಾತೆಯ ಚಿತ್ರವನ್ನು ತಾವು ನೋಡುತ್ತಿರುವಿರಿ, ಎಂದು ಅನಿಸಬಹುದು. ಆದರೆ ಇದು ಸತ್ಯವಲ್ಲ.
ನಿಜಕ್ಕೂ ಸತ್ಯವಾಗಿಯೂ ತಾವು ನೋಡುತ್ತಿರುವುದು ನಿಮ್ಮ ಮೊಬೈಲ್ ಸ್ಕ್ರೀನ್ ನಲ್ಲಿ ಇರುವ *ಬೆಳಕನ್ನು* ನೀವು ನೋಡುತ್ತಿದ್ದೀರಿ. ಈ ಬೆಳಕು ಅನೇಕ ಬಣ್ಣಗಳಿಂದ ಕೂಡಿರಬಹುದು. ಆದರೆ ಇದು ಮೂಲ ಬೆಳಕೇ.
ಆದರೂ ಮನಸ್ಸು ಒಪ್ಪುತ್ತಿಲ್ಲವೇನೋ. ಅದಕ್ಕಾಗಿ ಒಂದು ಪ್ರಶ್ನೆ.
ಈಗ ನಿಮ್ಮ ಕೈಯಲ್ಲಿ ಮೊಬೈಲ್ ಇದೆ. ಒಂದು ವೇಳೆ ಮೊಬೈಲ್ ಗೆ ಚಾರ್ಜಿಂಗ್ ಇಲ್ಲದಿದ್ದರೆ, ಮೊಬೈಲ್ ನಲ್ಲಿ ಏನಾದರೂ ನೋಡಲು ಸಾಧ್ಯವಾಗುತ್ತಿತ್ತೆ ?
ಇಲ್ಲ. ಈಗ ನಾವೆಲ್ಲರು ನೋಡುತ್ತಿರುವುದು ನಿಜಕ್ಕೂ ಬೆಳಕನ್ನು ಮಾತ್ರ.
ಈ ಒಂದೇ ಬೆಳಕೆ ಅನೇಕ ರೂಪಗಳಾಗಿ ಪರಿವರ್ತನೆಯಾಗುತ್ತಿದೆ.
ನಾವು ಬದಲಾಗುವ ರೂಪಗಳಿಗೆ ಮಹತ್ವ ಕೊಡುತ್ತಿದ್ದೇವೆ. ಆದರೆ ಶಾಶ್ವತ ಬೆಳಕನ್ನು ನಿರ್ಲಕ್ಷ ಮಾಡುತ್ತಿದ್ದೇವೆ. ಇದು ಎಷ್ಟು ಸರಿ ?
ಇದು ಕೇವಲ ಮೋಬೈಲ್ ಗೆ ಮಾತ್ರ ಸೀಮಿತವಲ್ಲ. ನಮ್ಮ ಮನಸ್ಸಿನಲ್ಲಿಯೂ ಇದೆ ಆಗುತ್ತಿದೆ.
ಮನಸ್ಸಿನಯೂ ಸಹ ಅನೇಕ ರೂಪಗಳು , ಚಿತ್ರಗಳು ನಮಗೆ ಕಾಣುತ್ತವೆ. ಚಿತ್ರ, ರೂಪಗಳು ಬಂದ ಕೂಡಲೇ ಅವುಗಳನ್ನು ತಕ್ಷಣಕ್ಕೆ ಇದು ಇವರು, ಇದು ಅವರು ಎಂದು ಗುರುತಿಸುತ್ತೇವೆ.
ಆದರೆ ಶಾಶ್ವತ ಬೆಳಕನ್ನು ನಾವು ಗುರುತಿಸುವುದಕ್ಕೆ ಹೋಗುವುದಿಲ್ಲ. ಇಲ್ಲಿಯೇ ನಾವು ತಪ್ಪುತ್ತಿದ್ದೇವೆ.
ವಿಜ್ಞಾನವು ಸಹ Everything is energy only. And Energy is neither be created. Nor be destroyed. It's eternal ಎಂದು ಹೇಳುತ್ತದೆ.
ಆದರೆ ನಾವು ಬೆಳಕನ್ನು (energy) ಗಮನಿಸುವುದಿಲ್ಲ. ಇಲ್ಲಿಯೇ ನಾವು ತಪ್ಪುತ್ತಿರುವುದು. ಇದರಿಂದಲೇ, ನಮಗೆ ಗೊತ್ತಿಲ್ಲದೆ, ನಮಗೆ ಬೇಕಿಲ್ಲದ, ಕೆಟ್ಟ ಘಟನೆಗಳನ್ನು ನಾವೇ ಸೃಷ್ಟಿ ಮಾಡಿ, ಆ ಕೆಟ್ಟ ಘಟನೆಗಳನ್ನು ನಾವೇ ನಮ್ಮ ಜೀವನದಲ್ಲಿ ಅನುಭವಿಸುತ್ತಿದ್ದೇವೆ.
What you think you become.
What imagine you create.
What you feel, you will attract
ಎಂದು ಹೇಳಿರುವುದರ ಹಿಂದಿರುವ ಕಾರಣ ಇದುವೇ ಆಗಿದೆ.
ಆದ್ದರಿಂದ ಸರಸ್ವತೀ ಮಾತೆಯ ಪ್ರಕಟವಾದ ಇಂದು ಒಂದು ಪ್ರಯತ್ನ ಮಾಡೋಣ. ಆ ದೇವಿಯ ಕೃಪೆಗಾಗಿ ಪ್ರಾರ್ಥಿಸೋಣ.
ಆ ಮಾತೆಯನ್ನು ಇಂದು ನಾವೆಲ್ಲರೂ ಆರಾಧಿಸೋಣ. ಹೀಗೆ ಆರಾಧಿಸಲು ಏನು ಮಾಡಬೇಕಾಗಿಲ್ಲ. ಈ ಲೇಖನವನ್ನು ಮತ್ತೊಮ್ಮೆ ಓದಿ.
ಸರಸ್ವತಿ ಮಾತೆ ಎಂದರೆ ನಿರ್ಮಲ, ಸರಸ್ವತಿ ಮಾತೆ ಎಂದರೆ ಪವಿತ್ರ. ಆ ಪವಿತ್ರವಾದುದು, ನಿರ್ಮಲವಾದುದು ಯಾವುದು ? ಅದೇ ಬೆಳಕು.
ಆ ಸರಸ್ವತಿ ಮಾತೆ ಎಲ್ಲೋ ಬ್ರಹ್ಮಲೋಕದಲ್ಲಿ ಇಲ್ಲ. ನಮ್ಮೆಲ್ಲರ ಮನದಲ್ಲಿ ಇದ್ದಾಳೆ. ಆಕೆಯನ್ನು ಅರಿತು ಶರಣಾದರೆ ಸಂಸಾರ ಎನ್ನುವ ಬಂಧನದಿಂದಲೇ ನಾವು ಪಾರಾಗುತ್ತೇವೆ.
ಜೀವಂತ ಇರುವಾಗಲೇ ಜೀಮನ್ಮುಕ್ತರಾಗುತ್ತೇವೆ.
ಆದರೆ ಇದು ಕೇವಲ ಒಂದು ದಿನದಲ್ಲಿ ಆಗುವಂತಹದ್ದು ಅಲ್ಲ. ಇದಕ್ಕೆ ನಿರಂತರ ಪ್ರಯತ್ನ ಬೇಕು. ನಿರಂತರ ಸರಸ್ವತಿ ಮಾತೆಯ ಕೃಪೆ ಬೇಕು.
ಬಹಳ ಸಮಯ ಬೇಕು ಎಂದು ಈ ವಿಚಾರಗಳನ್ನು ಉದಾಸೀನ ಮಾಡುವುದು ಸಹ ಸರಿಯಲ್ಲ.
ಎಷ್ಟೇ ದೂರದ ಪ್ರಯಾಣವಾದರೂ ಆರಂಭವಾಗುವುದು ಒಂದು ಸಣ್ಣ ಹೆಜ್ಜೆಯಿಂದ. ಹಾಗಾಗಿ ಇಂದು ಸರಸ್ವತಿ ಮಾತೆಯ ಪ್ರಕಟವಾದ ದಿನದಂದು ನಾವು ಒಂದು ಹೆಜ್ಜೆ ಮುಂದು ಇಡೋಣ. ಒಂದು ಪ್ರಯತ್ನ ಮಾಡೋಣ. ಇದಕ್ಕೆ ಯಾವುದೇ ಊದಿನ ಬತ್ತಿ, ಕುಂಕುಮ, ಧೂಪ, ದೀಪ ಏನು ಬೇಡ.
ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ ಈ ಲೇಖನ ತಿಳಿಯುವವರೆಗೆ ಮತ್ತೆ ಮತ್ತೆ ಓದಿ. ಓದಿದ ನಂತರ ಸ್ವಲ್ಪ ಸಮಯವನ್ನು ಕೊಟ್ಟು ಈ ಲೇಖನದಲ್ಲಿ ಇರುವುದು ಎಷ್ಟು ಸತ್ಯ ? ಎಂದು ಚಿಂತಿಸಿ.
ಆಗ ಸರಸ್ವತಿ ಮಾತೆಯ ಕೃಪೆ ನಿಮ್ಮ ಮೇಲೆ ಆರಂಭ. ನಿಮ್ಮ ಜೀವನ ಮುಕ್ತಿಯ ಪ್ರಯತ್ನ ಆರಂಭ. ಈಗ ಆರಂಭವಾಗಿರುವುದು ಒಂದು ದಿನ ಗುರಿ ತಲುಪಿಯೇ ತಲುಪುತ್ತದೆ.
ನೆನಪಿರಲಿ ಎಲ್ಲಾ ರೂಪಗಳು ಸುಳ್ಳು. ಬೆಳಕೆ ಸತ್ಯ. ಆ ಬೆಳಕನ್ನೇ ಸರಸ್ವತಿ ಮಾತೆ ಎಂದು ನಾನು ಕರೆಯುತ್ತೇನೆ. ಆರಾಧಿಸುತ್ತೇವೆ
ಸರಸ್ವತಿ ಮಾತೆ ನನ್ನ ಮೇಲೆ ತೋರಿದ ಕೃಪೆ ತಮ್ಮೆಲ್ಲರ ಮೇಲೆಯೂ ತೋರಲಿ.
ತಮ್ಮೆಲ್ಲರಿಗೂ ಈ ಜ್ಞಾನ ಜೀರ್ಣವಾಗಲಿ. ತಾವೆಲ್ಲರೂ ಒಂದು ದಿನ ಸತ್ಯವನ್ನೆ ಹೊಂದುವಂತಾಗಲಿ, ಎಂದು ಪ್ರಾರ್ಥಿಸುತ್ತೇನೆ.
ಎಲ್ಲರಿಗೂ ಒಳ್ಳೆಯದಾಗಲಿ.
ಎಲ್ಲರಿಗೂ ಮತ್ತೊಮ್ಮೆ ವಸಂತ ಪಂಚಮಿ ಹಾಗೂ ಸರಸ್ವತಿ ಮಾತೆ ಪ್ರಕಟ ದಿನದ ಹಾರ್ಧಿಕ ಶುಭಾಶಯಗಳು.
ಓಂ ನಮಃ ಶಿವಾಯ.
✍️ URAIN NAMAH
(ಈ ಪದ ಸತ್ಯ ಯುಗದ ಮುನ್ನುಡಿ. ಈ ಪದ ಯುಗ ಪರಿವರ್ತನೆಗೆ ನಾಂದಿ.)
(ನಾನು ಸತ್ಯ ಯುಗ ಪುನರಾರಂಭಕ್ಕಾಗಿ ಸತ್ಯ ಯುಗ ಫೌಂಡೇಷನ್ BYN ಟ್ರಸ್ಟ್, ಆರಂಭ ಮಾಡಿರುವುದು. ಖಡ್ಗದಿಂದ ಅಸುರರನ್ನು ಕೊಲೆ ಮಾಡಿ ಸತ್ಯ ಯುಗ ಸ್ಥಾಪಿಸುವ ಯೋಚನೆಯಿಂದ ಅಲ್ಲ.
ಸತ್ಯ ಯುಗ ಕ್ಕಾಗಿ ಪೂರ್ಣವಾಗಿ ನಾನು ಸರಸ್ವತಿ ಮಾತೆಯನ್ನು ಅವಲಂಬಿಸಿದ್ದೇನೆ. ಸರಸ್ವತಿ ಮಾತೆ ಪ್ರತಿಯೊಬ್ಬರ ಅಂತರಂಗದಲ್ಲಿ ಸತ್ಯವನ್ನು ಸ್ಥಾಪಿಸುವ ಮೂಲಕ ಸತ್ಯ ಯುಗ ಸ್ಥಾಪಿಸುತ್ತಾಳೆ ಎಂದು ದೃಢವಾಗಿ ನಂಬಿದ್ದೇನೆ. ಆ ಸರಸ್ವತಿ ಮಾತೆಯ ಒಂದು ಕೈ ಗೊಂಬೆ ಮಾತ್ರ ನಾನು. ಆಕೆ ಆಡಿಸಿದಂತೆ ಆಟ ಆಡುವುದು ಮಾತ್ರ ನನ್ನ ಕೆಲಸ. ಎಲ್ಲರಿಗೂ ಒಳ್ಳೆಯದಾಗಲಿ. - ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ ಸೇಡಂ)
02/02/2025 ರವಿವಾರ
ವಸಂತ ಪಂಚಮಿ

Comments
Post a Comment